Site icon ಹರಿತಲೇಖನಿ

Doddaballapura: ಟಿ.ಎಂ.ಸಿ ಬ್ಯಾಂಕ್‌ಗೆ ನಿರ್ದೇಶಕರ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ, (Doddaballapura); ನಗರದ ಹೆಸರಾಂತ ಗಾಂಧಿನಗರದ ಟೆಕ್ಸ್‌ಟೈಲ್ ಮ್ಯಾನುಫ್ಯಾಕ್ಚರ್‍ಸ್ ಕೋ ಆಪರೇಟಿವ್ ಬ್ಯಾಂಕ್ ಲಿ., ನ 2025ರಿಂದ 30 ರವರೆಗೆ 5 ವರ್ಷಗಳ ಅವಧಿಗೆ ನಡೆದ ಆಡಳಿತ ಮಂಡಲಿ ನಿರ್ದೇಶಕರ ಚುನಾವಣೆಯಲ್ಲಿ 11 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದೆ.

ಬ್ಯಾಂಕಿನ 13 ಸ್ಥಾನಗಳ ಪೈಕಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲು ಸ್ಥಾನಕ್ಕೆ ಯಾವುದೇ ನಾಮಪತ್ರ ಸಲ್ಲಿಕೆಯಾಗದೇ ಇರುವುದರಿಂದ ಆ ಸ್ಥಾನಗಳು ಖಾಲಿ ಇರುತ್ತವೆ ಎಂದು ಚುನಾವಣಾಧಿಕಾರಿ ಹರೀಶ್ ಕುಮಾರ್.ಬಿ.ವಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆಯ್ಕೆಯಾದ ನಿರ್ದೇಶಕರು

ಜಿ.ಮಂಜುನಾಥ್, ಎ.ಆರ್.ಶಿವಕುಮಾರ್, ಪಿ.ಸಿ.ವೆಂಕಟೇಶ್, ಡಿ.ಪ್ರಶಾಂತ್ ಕುಮಾರ್, ಕೆ.ಜಿ.ಗೋಪಾಲ್, ಬಿ.ಆರ್.ಉಮಾಕಾಂತ್, ನಾರಾಯಣ್.ಎನ್.ನಾಯ್ಡು, (ಸಾಮಾನ್ಯ ಸ್ಥಾನ), ಡಾ.ಆರ್.ಇಂದಿರಾ, ಎ.ಗಿರಿಜಾ (ಮಹಿಳಾ ಮೀಸಲು), ಕೆ.ಪಿ. ವಾಸುದೇವ (ಹಿಂದುಳಿದ ವರ್ಗ ಎ), ಎಸ್.ಅನಿಲ್ (ಹಿಂದುಳಿದ ವರ್ಗ ಬಿ).

ತಂಡ 4ನೇ ಬಾರಿಗೆ ಆಯ್ಕೆ: ಪ್ರಸ್ತುತ ಆಯ್ಕೆಯಾಗಿರುವ ನಿರ್ದೇಶಕರ ತಂಡ 4ನೇ ಬಾರಿಗೆ ಆಯ್ಕೆಯಾಗಿದ್ದಾರೆ. ಕಳೆದ ಬಾರಿ ನಿರ್ದೇಶಕರಾಗಿದ್ದ ಎ.ಎಸ್.ಕೇಶವ ಅವರು ಸ್ಪರ್ಧಿಸದ ಕಾರಣ ಈ ಬಾರಿ ಎಸ್.ಅನಿಲ್ ಆಯ್ಕೆಯಾಗಿದ್ದಾರೆ.

ಅವಿರೋಧ ಆಯ್ಕೆಗೆ ಸಹಕರಿಸಿದ ಎಲ್ಲಾ ಸದಸ್ಯರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದು, ಬ್ಯಾಂಕಿನ ಅಭಿವೃದ್ದಿಗೆ ಶ್ರಮಿಸಲು ನಮ್ಮ ತಂಡ ಸದಾ ಸಿದ್ದವಿದೆ ಎಂದು ಟಿ.ಎಂ.ಸಿ ಬ್ಯಾಂಕ್‌ನ ನಿಕಟಪೂರ್ವ ಅಧ್ಯಕ್ಷ ಕೆ.ಪಿ.ವಾಸುದೇವ್ ತಿಳಿಸಿದ್ದಾರೆ.

Exit mobile version