ಗೌರಿಬಿದನೂರು: ಮಂಜಿನ ಕಾರಣ ರಸ್ತೆ ಕಾಣದೆ, ರಸ್ತೆ ಬದಿ ನಿಂತಿದ್ದ ಲಾರಿಗೆ ಕಾರೊಂದು ಡಿಕ್ಕಿ (Accident) ಹೊಡೆದ ಪರಿಣಾಮ, ಕಾರಿನಲ್ಲಿದ್ದ ದಂಪತಿ ಸಮೇತ ಇಬ್ಬರು ಮಕ್ಕಳು ಗಾಯಗೊಂಡಿರುವ ಘಟನೆ ತಾಲೂಕಿನ ತೊಂಡೆಬಾವಿ ಬಳಿ ನಡೆದಿದೆ.
ಪಾಂಡಿಚೇರಿಗೆ ಪ್ರವಾಸ ಹೋಗಿ ವಾಪಾಸ್ ಬರ್ತಿದ್ದ ತುಮಕೂರಿನ ಪಾವಗಡದ ರೊಪ್ಪ ಗ್ರಾಮದ ಪವನ್ ಹಾಗೂ ಮಮತ ದಂಪತಿ ಸೇರಿದಂತೆ ಅವರ ಮಕ್ಕಳಾದ ವಿಶ್ವಾಸ್ ಹಾಗೂ ಶುಭ್ರತ್ ಗಾಯಗೊಂಡವರು.
ಘಟನೆಯಲ್ಲಿ ಓರ್ವ ಮಗನ ಪರಿಸ್ಥಿತಿ ಗಂಭೀರವಾಗಿದ್ದು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಚೇನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.