ದೊಡ್ಡಬಳ್ಳಾಪುರ: ಇತ್ತೀಚಿಗೆ ನಿಧನರಾದ ದೊಡ್ಡಬಳ್ಳಾಪುರ ತಾಲ್ಲೂಕು ಜೆಡಿಎಸ್ ಹಿರಿಯ ಮುಖಂಡರಾದ ಹಾಡೋನಹಳ್ಳಿ ಅಪ್ಪಯ್ಯಣ್ಣನವರ ನಿವಾಸಕ್ಕೆ ನಿಖಿಲ್ ಕುಮಾರಸ್ವಾಮಿ (Nikhil kumaraswamy) ಭೇಟಿ ನೀಡಿ ಅವರ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.
ಕಾಂಗ್ರೆಸ್ ಗೆ ತಿರುಗೇಟು ಕೊಟ್ಟ ನಿಖಿಲ್ ಕುಮಾರಸ್ವಾಮಿ
ನಂತರ ಮಾಧ್ಯಮಗಳ ಜತೆ ಮಾತನಾಡಿದ ಅವರು, ವಿಧಾನಸಭಾ ಚುನಾವಣಾ ಸಮಯದಲ್ಲಿ ಪೇ ಸಿಎಂ ಎಂಬ ಕ್ಯಾಂಪೇನ್ ಶುರು ಮಾಡಿದ್ರು, ಬಹಳ ಗಂಟಾಘೋಷವಾಗಿ ಇಡೀ ರಾಜ್ಯಕ್ಕೆ ಮನ ಮುಟ್ಟುವ ಕ್ಯಾಂಪೇನ್ ಮಾಡಿದ್ದರು. ಭ್ರಷ್ಟಾಚಾರವನ್ನ ಸಂಪೂರ್ಣವಾಗಿ ಹೋಗಲಾಡಿಸುತ್ತೇವೆ ಎಂದು ಸಿಎಂ ಮತ್ತು ಡಿಸಿಎಂ ಶಪಥ ಮಾಡಿದ್ದರು ಎಂದು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಲೂಟಿ ಮಾಡ್ತಿದೆ
ಕರ್ನಾಟಕವನ್ನು ಅನೇಕ ನಾಯಕರು, ಪಕ್ಷಗಳು ಆಳ್ವಿಕೆ ಮಾಡಿವೆ.ಆದರೆ ಈ ರೀತಿ ಒಂದೂವರೆ ವರ್ಷದಲ್ಲಿ ಭ್ರಷ್ಟಾಚಾರದಲ್ಲಿ ಮುಳುಗಿದೆ. ಈ ಸರಕಾರ ಪ್ರತಿನಿತ್ಯ ಹಗರಣದಲ್ಲಿ ಮುಳುಗಿದೆ,ರಾಜ್ಯದಲ್ಲಿ ನೇರವಾಗಿ ಸಿಎಂ ಅವರು ಸಿಲುಕಿರುವುದು ನೋಡಿದ್ದೀರಿ. ಅನೇಕ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟಿರುವ ಹಣವನ್ನು ದುರ್ಬಳಕೆ ಮಾಡಿದ್ದಾರೆ, ಆ ಹಣವನ್ನ ಪಕ್ಕದ ರಾಜ್ಯಗಳ ಚುನಾವಣೆಗೆ ಬಳಕೆ ಮಾಡಿಕೊಂಡಿದ್ದಾರೆ.ಇಂಥ ಕೀಳು ಮಟ್ಟದ ಸರಕಾರವನ್ನು ಇದೇ ಮೊದಲ ಬಾರಿಗೆ ನೋಡಿರುವುದು ಎಂದು ನಿಖಿಲ್ ಕಿಡಿಕಾರಿದರು.
ಪ್ರಿಯಾಂಕ್ ಖರ್ಗೆ ಪೆನ್ ಡ್ರೈವ್ ಪ್ರಶ್ನೆ ವಿಚಾರಕ್ಕೆ ಮಾತನಾಡಿದ ಅವರು, ಬೇರೆ ಪೆನ್ ಡ್ರೈವ್ ನ್ನು ಯಾವ ಒಬ್ಬ ಮಹಾನುಭಾವ ಬಿಡುಗಡೆ ಮಾಡಿದ ಎಂದು ಎಲ್ಲರಿಗೂ ಗೊತ್ತಿದೆ. ಹೆಣ್ಣು ಮಕ್ಕಳ ಮಾನವನ್ನ ಸಾರ್ವಜನಿಕವಾಗಿ ಕಳೆಯುವಂತ ಪ್ರಯತ್ನ ಆಗಿದೆ.
ಕನಿಷ್ಠ ಪಕ್ಷ ಹೆಣ್ಣು ಮಕ್ಕಳ ಬ್ಲರ್ ಮಾಡಿ ಬಿಡುಗಡೆ ಮಾಡಬೇಕು ಎಂಬ ಪರಿಜ್ಞಾನ ಇಲ್ಲದೇ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಅವರಿಗೆ ಜನನೇ ಪಾಠ ಕಲಿಸುತ್ತಾರೆ ಎಂದರು.
ರಾಜ್ಯಕ್ಕೆ ಯಾವ ರೀತಿ ಕೊಡುಗೆ ನೀಡಬೇಕೆಂದು HDK ನಿದ್ದೆಗೆಡುತ್ತಿದ್ದಾರೆ
ನಿಖಿಲ್ ಸೋಲಿನ ವಿಚಾರಕ್ಕೆ ಕುಮಾರಸ್ವಾಮಿ ಹತಾಶೆಯಾಗಿದ್ದಾರೆ ಎಂ.ಬಿ ಪಾಟೀಲ್ ಹೇಳಿಕೆಗೆ ನಿಖಿಲ್ ಕುಮಾರಸ್ವಾಮಿ ಅವರು ಟಾಂಗ್ ಕೊಟ್ಟರು. ಕುಮಾರಸ್ವಾಮಿಯವರು ಕೇಂದ್ರದ ಸಚಿವರಾಗಿ ಇತ್ತೀಚಿಗೆ ಪಾರ್ಲಿಮೆಂಟ್ ಸೆಷನ್ ನಲ್ಲಿ ಬಹಳ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದಾರೆ.ರಾಜ್ಯಕ್ಕೆ ಯಾವ ರೀತಿ ಕೊಡುಗೆ ನೀಡಬೇಕು, ಉದ್ಯೋಗ, ಕೈಗಾರಿಕೆ ತರಬೇಕು ಎಂದು ನಿದ್ದೆಗೆಡುತ್ತಿದ್ದಾರೆ ನಿಖಿಲ್ ಕುಮಾರಸ್ವಾಮಿ ಸೋಲಿಗಲ್ಲ ನಿದ್ದೆಗೆಡುತ್ತಿರುವುದು ಎಂದು ತಿಳಿಸಿದರು.
ಸಂಘಟನೆಗೆ ಒತ್ತು
ದೊಡ್ಡಬಳ್ಳಾಪುರ ಜೆಡಿಎಸ್ ಪಕ್ಷದ ಭದ್ರಕೋಟೆಯಾಗಿದ್ದು, ಮುಖಂಡರ ಸಹಕಾರದಿದ ದೊಡ್ಡಬಳ್ಳಾಪುರ ಮಾತ್ರವಲ್ಲದೆ ಇಡೀ ರಾಜ್ಯದಲ್ಲಿ ಮುಖಂಡರ ಸಹಕಾರದಿಂದ ಪಕ್ಷ ಸಂಘಟನೆ ಮಾಡಲಾಗುವು ಎಂದರು.