ಲಕ್ಕೋ: ಲವ್ ಪ್ರಪೋಸ್ (Love proposal) ತಿರಸ್ಕರಿಸಿದ ಕಾರಣ ಹುಚ್ಚು ಪ್ರೇಮಿಯೋರ್ವ ಯುವತಿಯನ್ನು ಹಾಡಹಗಲಲ್ಲೇ ನಡು ರಸ್ತೆಯಲ್ಲಿ ಸ್ಕೂಟರ್‌ನಿಂದ ಕೆಳಗಿಳಿಸಿ ಕತ್ತು ಹಿಸುಕಿ ಕೊಲ್ಲಲು ಯತ್ನಿಸಿರುವ ಆಘಾತಕಾರಿ ಘಟನೆ ಅಮ್ಮೋಹಾದ ಸೇಲಂಪುರ್ ಗೋಸಾಯಿ ಪ್ರದೇಶದಲ್ಲಿ ಈ ಘಟನೆ ನಡೆದಿದೆ.
ಈ ಕೃತ್ಯ ನಡೆಸಿದ ಆರೋಪಿಯನ್ನು ರಾಹುಲ್ ಎಂದು ಗುರುತಿಸಲಾಗಿದೆ. ಯುವತಿ ನರ್ಸಿಂಗ್ ವಿದ್ಯಾರ್ಥಿನಿಯಾಗಿದ್ದು ತನ್ನ ಲವ್ ಪ್ರಪೋಸ್ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಆಕೆಯನ್ನು ಈ ರೀತಿ ಕೊಲ್ಲಲು ಯತ್ನಿಸಿದ್ದಾನೆ.
ಈ ಆರೋಪಿ ಮೊದಲು ಸಂತ್ರಸ್ತೆಯನ್ನು ಆಕೆಯ ಸ್ಕೂಟರ್‌ನಿಂದ ಕೆಳಗಿಳಿಸಿ ಆಕೆಯ ದುಪ್ಪಟ್ಟಾದಿಂದ ಕತ್ತು ಹಿಸುಕಲು ಪ್ರಯತ್ನಿಸಿದ್ದಾನೆ. ಈ ಭಯಾನಕ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಇನ್ನು ಸಂತ್ರಸ್ತೆ ಸ್ಥಳೀಯ ವೈದ್ಯಕೀಯ ಕಾಲೇಜಿನ ಜಿಎನ್‌ಎಂ ವಿದ್ಯಾರ್ಥಿನಿಯಾಗಿದ್ದು ಶನಿವಾರ ಸಂಜೆ ತನ್ನ ಗ್ರಾಮದಿಂದ ಗಜೈಲಾಗೆ ಪ್ರಯಾಣಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಳೆದ ನಾಲ್ಕು ವರ್ಷಗಳಿಂದ ಆರೋಪಿ ಆಕೆಯನ್ನು ಹಿಂಬಾಲಿಸುತ್ತಿದ್ದ ಎಂದು ಹೇಳಲಾಗಿದೆ. ಆದ್ರೆ ಇತ್ತೀಚೆಗಷ್ಟೇ ಯುವತಿ ಇತರ ಪುರುಷರೊಂದಿಗೆ ಮಾತನಾಡುತ್ತಿದ್ದುದನ್ನು ನೋಡಿ ಆರೋಪಿ ಕೋಪಗೊಂಡಿದ್ದ ಎನ್ನಲಾಗಿದೆ.
ಇನ್ನು ಈ ಘಟನೆ ಕಾಂಡ ಪ್ರತ್ಯಕ್ಷದರ್ಶಿಗಳ ಪ್ರಕಾರ, ಆರೋಪಿ ಸಂತ್ರಸ್ತೆಯ ಸ್ಕೂಟರ್ ಅನ್ನು ಅಡ್ಡಗಟ್ಟಿ, ಆರಂಭದಲ್ಲಿ ಅವಳೊಂದಿಗೆ ಮಾತನಾಡಲು ತೊಡಗಲು ಪ್ರಯತ್ನಿಸಿದ್ದಾನೆ. ಆ ನಂತರ ಇದ್ದಕ್ಕಿದ್ದಂತೆ ಆಕೆಯ ಮೇಲೆ ಹಲ್ಲೆ ನಡೆಸಿ, ಆಕೆಯ ದುಪಟ್ಟಾದಿಂದಲೇ ಕತ್ತು ಹಿಸುಕಲು ಯತ್ನಿಸಿದಾಗ ಪರಿಸ್ಥಿತಿ ವಿಕೋಪಕ್ಕೆ ಹೋಗಿದೆ.
ಅದೃಷ್ಟವಶಾತ್ ಸ್ಥಳೀಯರು ಮಧ್ಯಪ್ರವೇಶಿಸಿ ಯುವತಿಯನ್ನು ರಕ್ಷಿಸಿದ್ದಾರೆ. ಅಲ್ಲದೆ ಪರಾರಿಯಾದ ಪಾಗಲ್ ಪ್ರೇಮಿಯ ಹುಡುಕಾಟ ನಡೆದಿದೆ.