ದೊಡ್ಡಬಳ್ಳಾಪುರ: ತಾಲೂಕಿನ ನಗರ ಮತ್ತು ಗ್ರಾಮೀಣ ಭಾಗದಲ್ಲಿ ಸೋಮವಾರ ಮುಂಜಾನೆ ಮಂಜು (fog) ಮುಸುಕಿದ ವಾತಾವರಣ ಕಂಡು ಬಂದಿದೆ.
ಸಾಸಲು, ತೂಬಗೆರೆ, ಮಧುರೆ, ಕಸಬಾ ಹೋಬಳಿ ಸಹಿತ ವಿವಿಧ ಪ್ರದೇಶಗಳಲ್ಲಿ ಮಂಜಿನ ಪ್ರಭಾವ ಹೆಚ್ಚಾಗಿ ಕಾಣಿಸಿದೆ.
ಸೂರ್ಯೋದಯದ ನಂತರದಲ್ಲಿ ಏಕಾಏಕಿಯಾಗಿ ಕಾಣಿಸಿಕೊಂಡ ಮಂಜು ಮುಸುಕಿದ ವಾತಾವರಣದಿಂದಾಗಿ ದೊಡ್ಡಬಳ್ಳಾಪುರ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೂ ಅಡತಡೆಯುಂಟಾಯಿತು.
ಬೆಳ್ಳಗೆಯಿಂದ ದಟ್ಟವಾದ ಮಂಜು ಗ್ರಾಮಗಳನ್ನು ಆವರಿಸಿದ್ದು 15 ° C ತಾಪಮಾನ ಕಂಡು ಬಂದು, ತೀವ್ರ ಚಳಿಯಿಂದ ಕೂಡಿದೆ.
ಸಮಯ ಬೆಳಗ್ಗೆ 8.30 ಆದರೂ ಅನೇಕ ಗ್ರಾಮಗಳಲ್ಲಿ ಸೂರ್ಯ ಕಂಡು ಬಂದಿದಲ್ಲ ವಾಗಿದ್ದು, ವಾಹನ ಸವಾರರು ದಾರಿ ಕಾಣದೆ ಪರದಾಡುವಂತಾಗಿದೆ.