Site icon ಹರಿತಲೇಖನಿ

Tragedy: ಕುಡಿದ ಮತ್ತಲ್ಲಿ ಹೆತ್ತ ತಾಯಿಯನ್ನು ಕೊಂದು ಆತ್ಮಹತ್ಯೆಗೆ ಶರಣಾದ ಮಗ..!

ಆನೇಕಲ್; ಕುಡಿದ ಮತ್ತಿನಲ್ಲಿ ಮಗನೋರ್ವ ತಾಯಿಯನ್ನು ಕೊಂದು, ತಾನು ಸಹ ಆತ್ಮಹತ್ಯೆಗೆ ಶರಣಾಗಿರುವ (Tragedy) ಘಟನೆ ಚಂದಾಪುರದಲ್ಲಿ ನಡೆದಿದೆ.

ಮಹಾಲಕ್ಷ್ಮಿ (41 ವರ್ಷ) ಕೊಲೆಯಾದ ಮಹಿಳೆ. ರಮೇಶ್ (21 ವರ್ಷ) ತಾಯಿಯನ್ನ ಕೊಲೆ ಮಾಡಿ ಆತ್ಮಹತ್ಯೆಗೆ ಶರಣಾದ ಮಗ ಎಂದು ಗುರುತಿಸಲಾಗಿದೆ.

ಹೊಟ್ಟೆ ಪಾಡಿಗಾಗಿ ದೂರದ ಚಿತ್ರದುರ್ಗದಿಂದ ಬಂದಿದ್ದ ತಾಯಿ ಮತ್ತು ಮಗ ಆನೇಕಲ್ ಬಳಿಯ ಚಂದಾಪುರದಲ್ಲಿ ನೆಲೆಸಿದ್ದರು. ಆದರೆ, ಮಗ ಕುಡಿದುಬಂದು ನಿತ್ಯ ಗಲಾಟೆ ಮಾಡುತ್ತಿದ್ದ ಅದರಂತೆ ನಿನ್ನೆ ಕುಡಿದುಬಂದು ಮತ್ತೆ ಜಗಳ ಮಾಡಿದ್ದಾನೆ.

ಈ ವೇಳೆ ಗಲಾಟೆ ತಾರಕಕ್ಕೇರಿದ್ದು, ಮೊಬೈಲ್ ಚಾರ್ಜರ್ ವೈರ್‌ನಿಂದ ತಾಯಿ ಕುತ್ತಿಗೆ ಹಿಸುಕು ಕೊಲೆ ಮಾಡಿದ್ದಾನೆ.

ಚಿತ್ರದುರ್ಗ ಮೂಲದ ಚಳ್ಳಕೆರೆಯ ಚಿಕ್ಕಹಳ್ಳಿ ಕುಟುಂಬ, ಕಳೆದ ಕೆಲ ವರ್ಷಗಳ ಹಿಂದೆ ಕೆಲಸ ಅರಸಿಕೊಂಡು ಬಂದಿದ್ದರು. ಆದ್ರೆ, ಮಗ ಕುಡಿದುಬಂದು ತಾಯಿ ಜೊತೆ ಜಗಳ ಮಾಡುತ್ತಿದ್ದ ಅದರಂತೆ ನಿನ್ನೆ(ಜನವರಿ 04) ಗಲಾಟೆ ವಿಕೋಪಕ್ಕೆ ತಿರುಗಿದ್ದು ಮೊಬೈಲ್ ಚಾರ್ಜರ್ ವೈರ್‌ನಿಂದ ತಾಯಿ ಕುತ್ತಿಗೆಗೆ ಬಿಗಿದು ಕೊಲೆ ಮಾಡಿದ್ದಾನೆ.

ಬಳಿಕ ತಾನು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ಥಳಕ್ಕೆ ಸೂರ್ಯನಗರ ಪೊಲೀಸರ ಮತ್ತು ಬೆಂಗಳೂರು ಗ್ರಾಮಾಂತರ ಎಎಸ್‌ಪಿ ನಾಗೇಶ್ ಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.

Exit mobile version