Site icon ಹರಿತಲೇಖನಿ

Reminder: ಇಂದು ದೊಡ್ಡಬಳ್ಳಾಪುರದ ಈ ಭಾಗಗಳಲ್ಲಿ ಕರೆಂಟ್ ಇರಲ್ಲ..!

Power cut off in these villages..!

Power cut off in these villages..!

ದೊಡ್ಡಬಳ್ಳಾಪುರ, (Reminder): ಇಂದು ಷಷ್ಠಿ ಹಬ್ಬ ಹಾಗೂ ಭಾನುವಾರದ ವೀಕೆಂಡ್ ಸಂಭ್ರಮ. ಆದರೆ ಈ ಸಂಭ್ರಮಕ್ಕೆ ಬೆಸ್ಕಾಂ ಇಲಾಖೆ ತುಸು ನಿರಾಸೆ ತರುವ ಸುದ್ದಿಯನ್ನು ನೀಡಿದೆ.

ಬೆಸ್ಕಾಂ ಇಲಾಖೆ ಎಇಇ ವಿನಯ ಕುಮಾರ್ ಹೆಚ್‌ಪಿ ಅವರು ನೀಡಿರುವ ಪ್ರಕಟಣೆ ಅನ್ವಯ, ಇಂದು (ಜ.05) 220/66/11ಕೆವಿ ಹಾಗೂ 66/11 ಕೆವಿ ಅಪೇರಲ್ ಪಾರ್ಕ್ ಉಪ ವಿದ್ಯುತ್ ಕೇಂದ್ರಗಳಲ್ಲಿ ತ್ರೈಮಾಸಿಕ ನಿರ್ವಹಣೆ ಕಾರ್ಯವನ್ನು ಹಮ್ಮಿಕೊಳ್ಳಲಾಗಿರುವುದರಿಂದ ಸದರಿ ಉಪಕೇಂದ್ರದಲ್ಲಿರುವ ಎಲ್ಲಾ ವಿದ್ಯುತ್ ಮಾರ್ಗಗಳಲ್ಲಿ ಬೆಳಿಗ್ಗೆ 10:00 ಗಂಟೆ ಯಿಂದ ಸಂಜೆ 06:00 ಗಂಟೆವರೆಗೆ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗುತ್ತಿದೆ. ಆದ್ದರಿಂದ ಗ್ರಾಹಕರು ಸಹಕರಿಸ ಬೇಕೆಂದು ಮನವಿ ಮಾಡಿದ್ದಾರೆ.

ವಿದ್ಯುತ್‌ ಅಡಚಣೆಯಾಗುವ ಪ್ರದೇಶಗಳು: KIADB, KSSIDC, ಓಬದೇನಹಳ್ಳಿ, ಆದಿನಾರಾಯಣ ಹೊಸಹಳ್ಳಿ, ಕೈಗಾರಿಕ ಪ್ರದೇಶಗಳು, ದೊಡ್ಡತುಮಕೂರು, ಹೊಸಹುಡ್ಯ, ದೊಂಬರಹಳ್ಳಿ, ಆಂಜಿನಾಮೂರ್ತಿ ನಗರ, ಕರೀಂಸೊದ್ದೇನಹಳ್ಳಿ, ಗೌಡಹಳ್ಳಿ.

ಬಾಶೆಟ್ಟಿಹಳ್ಳಿ, ಅರಳುಮಲ್ಲಿಗೆ, ಎಸ್.ಎಂ.ಗೊಲ್ಲಹಳ್ಳಿ, ಜಿಂಕೆಬಚ್ಚಹಳ್ಳಿ, ಖಾನೇಹೊಸಹೊಳ್ಳಿ, ಜಕ್ಕಸಂದ್ರ ಮಜರಾಹೊಸಹಳ್ಳಿ, ಏಕಾಶಿಪುರ, ಚಿಕ್ಕತುಮಕೂರು, ವೀರಾಪುರ, ತಿಪ್ಪಾಪುರ, ವಿವೇಕಾನಂದನಗರ, ಅಲಹಳ್ಳಿ, ಹಮಾಮ್, ಶಿವಪುರ, ದೇವನಹಳ್ಳಿ ರಸ್ತೆ, ಸಿದ್ದೇನಾಯಕನಹಳ್ಳಿ, ರೈಲ್ವೆ ಸ್ಟೇಷನ್, ಮುತ್ತೂರು, ಸೈಂಟ್‌ ಕ್ಯಾಂಪ್ ರಸ್ತೆ, ಅರೆಹಳ್ಳಿ ಗುಡ್ಡದಹಳ್ಳಿ, ವರದನಹಳ್ಳಿ, ಕಸವನಹಳ್ಳಿ, ಬಿಸುವನಹಳ್ಳಿ, ಎಳ್ಳುಪುರ.

ದೊಡ್ಡಬಳ್ಳಾಪುರ ನಗರದ ಖಾಸ್ ಬಾಗ್, ಶ್ರೀನಗರ, ಚಂದ್ರಶೇಕರಪುರ ಭುವನೇಶ್ವರಿ ನಗರ, ತೇರಿನ ಬೀದಿ, ರಂಗಪ್ಪ ಸರ್ಕಲ್, ಕುಚ್ಚಪ್ಪನಪೇಟೆ, ಕೊಂಗಾಡಿಯಪ್ಪ ಮುಖ್ಯ ರಸ್ತೆ, ಸಂಜಯನಗರ, ಚೈತನ್ಯನಗರ, ವಿದ್ಯಾನಗರ, ಕೆಸಿಪಿ ಸರ್ಕಲ್, ವೀರಭದ್ರನಪಾಳ್ಯ, ತೂಬಗೆರಪೇಟೆ, ಗಾಂಧಿನಗರ, ಕೆರೆ ಬಾಗಿಲು, ಹಾಗೂ ಸುತ್ತಮುತ್ತಲಿನ ಪ್ರದೇಶಗಳು. (ಕೊನೆಯ ಕ್ಷಣದ ಬದಲಾವಣೆ ಹೊರತು ಪಡಿಸಿ)

Exit mobile version