Site icon ಹರಿತಲೇಖನಿ

Gift: ಅದಾನಿಯನ್ನು ರಕ್ಷಿಸಲು ಜೋ ಬೈಡೆನ್‌ಗೆ ಮೋದಿ ದುಬಾರಿ ಉಡುಗೊರೆ; ಕಾಂಗ್ರೆಸ್ ಟ್ವಿಟ್ ದಾಳಿ

ಬೆಂಗಳೂರು: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಕುಟುಂಬವು ವಿವಿಧ ದೇಶಗಳ ನಾಯಕರಿಂದ ಬೆಲೆ ಬಾಳುವ ಸಾವಿರಾರು ಡಾಲ‌ರ್ ಮೌಲ್ಯದ ಉಡುಗೊರೆ ಗಳನ್ನು ಸ್ವೀಕರಿಸಿದ್ದು, ಆ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ ಉಡುಗೊರೆ (Gift) ಅತ್ಯಂತ ದುಬಾರಿಯಾಗಿದ್ದು ಎನ್ನಲಾಗಿದ್ದು, ವ್ಯಾಪಕ ಚರ್ಚೆಗೆ ಕಾರಣವಾಗಿದ್ದರೆ, ಕಾಂಗ್ರೆಸ್ ಗಂಭೀರ ಆರೋಪ ಮಾಡಿದೆ.

ಉಡುಗೊರೆ ನೀಡಿರುವ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ಜನರ ತೆರಿಗೆ ದುಡ್ಡಲ್ಲಿ ಪ್ರಧಾನಿ ಶೋಕಿ, ಅದಾನಿ ಉಳಿವಿಗಾಗಿ ದುಬಾರಿ ಉಡುಗೊರೆಯ ನೌಟಂಕಿ ಎಂದು ಪ್ರಶ್ನಿಸಿದೆ!?

https://twitter.com/INCKarnataka/status/1875482642948202595?t=R7P6dEKzPrSfrxkltYfFsw&s=19

ಪ್ರಧಾನಿ ನರೇಂದ್ರ ಮೋದಿ ಅವರು ಅಮೇರಿಕಾ ಅಧ್ಯಕ್ಷ ಜೋ ಬೈಡೆನ್‌ ಅವರ ಪತ್ನಿ ಜಿಲ್ ಬೈಡನ್ ಅವರಿಗೆ ₹17 ಲಕ್ಷ ($20,000) ಮೌಲ್ಯದ ವಜ್ರವನ್ನು ಉಡುಗೊರೆಯಾಗಿ ನೀಡಿದ್ದಾರೆ. ಹಗರಣದಲ್ಲಿ ಸಿಲುಕಿರುವ ತಮ್ಮ ಆಪ್ತ ಸ್ನೇಹಿತ ಅದಾನಿಯನ್ನು ರಕ್ಷಿಸಲು ಇಷ್ಟು ದುಬಾರಿ ಉಡುಗೊರೆಗಳನ್ನು ನೀಡಿದ್ದರೇ?

ಮಾನ್ಯ ಪ್ರಧಾನಿಗಳೇ, ದೇಶದ ಪ್ರಜೆಗಳ ಮೇಲೆ ತೆರಿಗೆ ಹೊರೆ ಹೊರಿಸಿ, ಪೆಟ್ರೋಲ್, ಡಿಸೇಲ್ ಹಾಗೂ ಅಗತ್ಯ ವಸ್ತುಗಳ ಬೆಲೆ ಏರಿಸಿ, ವಿದೇಶದ ರಾಜಕರಣಿಗಳಿಗೆ ದುಬಾರಿ ಉಡುಗೊರೆ ಕೊಡುವ ಹಿಂದಿನ ಉದ್ದೇಶವಾದರೂ ಏನು? ಎಂದು ಕಾಂಗ್ರೆಸ್ ಕಿಡಿಕಾರಿದೆ.

Exit mobile version