ಹರಿತಲೇಖನಿ

Ghati subramanya: ಇಂದು ಘಾಟಿ ಕ್ಷೇತ್ರದಲ್ಲಿ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವ: ಯಾವ ರಸ್ತೆಯಲ್ಲಿ ತೆರಳ ಬೇಕು ಮಾಹಿತಿ ಇಲ್ಲಿದೆ ನೋಡಿ

ದೊಡ್ಡಬಳ್ಳಾಪುರ: ಘಾಟಿ ಕ್ಷೇತ್ರದಲ್ಲಿ ಜ.5 ರಂದು ಮಧ್ಯಾಹನ್ನ 12.10ಕ್ಕೆ ನಡೆಯುವ ಸುಬ್ರಹ್ಮಣ್ಯಸ್ವಾಮಿ ಬ್ರಹ್ಮರಥೋತ್ಸವಕ್ಕೆ (Ghati subramanya) ರಾಜ್ಯದ ನಾನಾ ಭಾಗಗಳಿಂದ ಲಕ್ಷಾಂತರ ಭಕ್ತರು ಆಗಮಿಸುವ ಹಿನ್ನೆಲೆಯಲ್ಲಿ ಎಲ್ಲಾ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ.

ರಥೋತ್ಸವಕ್ಕೆ ಬರುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ನೆರವು, ಮಾಹಿತಿ, ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಪಿಸುವ ಸಲುವಾಗಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ, ಗ್ರಾಮ ಪಂಚಾಯಿತಿ, ನಗರಸಭೆ ಹಾಗೂ ವಿವಿಧ ಇಲಾಖೆಗಳ ತಾಲ್ಲೂಕು ಹಂತದ ಅಧಿಕಾರಿಗಳಿಗೆ ಜವಾಬ್ದಾರಿಗಳನ್ನು ವಹಿಸಲಾಗಿದೆ.

ರಥೋತ್ಸವ ಕರ್ತವ್ಯಕ್ಕೆ ನಿಯೋಜನೆಗಳೊಂಡಿರುವ ಎಲ್ಲಾ ಅಧಿಕಾರಿಗಳು ಬೆಳಿಗ್ಗೆ 4 ಗಂಟೆಯಿಂದಲೇ ಹಾಜರಿರಲಿದ್ದಾರೆ. ಭಕ್ತರ ಸಹಾಯಕ್ಕಾಗಿ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ.

ಭದ್ರತಾ ವ್ಯವಸ್ಥೆ: ಘಾಟಿ ಕ್ಷೇತ್ರಕ್ಕೆ ಬಸ್ಗಳು ಗೌರಿಬಿದನೂರು ರಸ್ತೆಯ ಮಾಕಳಿ ಮಾರ್ಗವಾಗಿ ಸಂಚರಿಸಲಿವೆ. ದೇವಾಲಯದಿಂದ ದೂರದಲ್ಲೇ ಬಸ್ ನಿಲುಗಡೆಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.

ಬಸ್ ನಿಲ್ದಾಣದಿಂದ ಹಾಗೂ ಕಾರುಗಳ ನಿಲುಗಡೆ ಸ್ಥಳದಿಂದ ದೇವಾಲಯದ ಬಳಿಗೆ ಹೋಗಲು ಹಿರಿಯ ನಾಗರೀಕರು, ಮಕ್ಕಳಿಗೆ ಉಚಿತ ಆಟೋ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.

ಕಾರು, ಬೈಕ್ಗಳ ಮೂಲಕ ಬರುವ ಜನರು ಕಂಟನಕುಂಟೆ, ಹಾಡೋನಹಳ್ಳಿ ಮಾರ್ಗವಾಗಿ ಘಾಟಿ ಕ್ಷೇತ್ರಕ್ಕೆ ಬರಲು ಪ್ರತ್ಯೇಕ ಮಾರ್ಗ ನಿಗದಿ ಮಾಡಲಾಗಿದೆ. ಕಾರು ಹಾಗೂ ಬೈಕ್ಗಳ ನಿಲುಗಡೆಗಾಗಿಯೇ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ.

ಈ ಎಲ್ಲಾ ಉಸ್ತುವಾರಿಗಳನ್ನು ನೋಡಿಕೊಳ್ಳಲು 10 ಜನ ಇನ್ಸ್ಪೆಕ್ಟರ್, 15 ಜನ ಸಬ್ ಇನ್ಸ್ಪೆಕ್ಟರ್, 400 ಜನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಇದಲ್ಲದೆ ಸಿಸಿ ಟಿವಿ ಕ್ಯಾಮರಗಳನ್ನು ಅಳವಡಿಸಲಾಗಿದೆ. ಬೆಂಗಳೂರು ಸೇರಿದಂತೆ ವಿವಿಧೆಡೆಗಳಿಂದ ಕೆಎಸ್ಆರ್ಟಿಸಿ ಬಸ್ಗಳ ಸೌಲಭ್ಯ ಇರಲಿವೆ.

Exit mobile version