Site icon ಹರಿತಲೇಖನಿ

Basangouda Patil Yatnal| ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳ: ಗಂಡಸರಿಗೆ ಯತ್ನಾಳ್ ಮಹತ್ವದ ಕರೆ..!

ವಿಜಯಪುರ: ಸಾರಿಗೆ ಬಸ್ ಟಿಕೆಟ್ ದರ ಏರಿಕೆ ಸಂಬಂಧಪಟ್ಟಂತೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Basangouda Patil Yatnal )ಅವರು ರಾಜ್ಯದ ಪುರುಷರಿಗೆ ಮಹತ್ವದ ಕರೆಯೊಂದನ್ನು ನೀಡಿದ್ದಾರೆ.

ವಿಜಯಪುರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ನಮ್ಮ ರಾಜ್ಯದಲ್ಲಿ ಮುಂದಿನ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಗಂಡಸರು ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕಬಾರದು ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ವಿರುದ್ಧ ಗುಡುಗಿದ್ದಾರೆ.

ಈ ಸರ್ಕಾರ ಗ್ಯಾರೆಂಟಿ ಹೆಸರಲ್ಲಿ ಹೆಣ್ಣುಮಕ್ಕಳಿಗೆ ಉಚಿತ ಕೊಟ್ಟು, ಅದರ ಬದಲಾಗಿ ಗಂಡಸರಿಂದ ಹೆಚ್ಚಿನ ದುಡ್ಡು ವಸೂಲಿ ಮಾಡುತ್ತಿದ್ದಾರೆ. ಗಂಡಸರು ಏನು ಪಾಪ ಮಾಡಿದ್ದಾರೆ..? ಎಂದು ಯತ್ನಾಳ್ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಸರ್ಕಾರದ ಈ ನೀತಿಯಿಂದ ಕೇವಲ ಗಂಡಸರಲ್ಲ ಹೆಣ್ಣು ಮಕ್ಕಳಿಗೂ ಕೂಡ ಅನ್ಯಾಯವಾಗುತ್ತದೆ.

ಪ್ರತಿ ಮನೆಯ ಮಕ್ಕಳು ಮತ್ತು ಸಂಸಾರ ನಡೆಸುವ ಯಜಮಾನರಿಗೂ ಅನ್ಯಾಯವಾಗುತ್ತದೆ. ಹೀಗಾಗಿ ಇನ್ಮುಂದೆ ಹೆಣ್ಣು ಮಕ್ಕಳೂ ಕೂಡ ಕಾಂಗ್ರೆಸ್‌ಗೆ ಮತ ಹಾಕಬಾರದೆಂದು ಎಂದಿದ್ದಾರೆ.

Exit mobile version