Site icon ಹರಿತಲೇಖನಿ

Astrology: ಜ.05 ದಿನ ಭವಿಷ್ಯ: ಈ ರಾಶಿಯವರು ಅತಿಯಾಗಿ ಬಂದು ಮಿತ್ರರನ್ನು ನಂಬಬೇಡಿ, ಎಚ್ಚರಿಕೆ ಬಹಳ ಅಗತ್ಯ – ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ

Be careful while driving

Be careful while driving

ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಷಷ್ಠಿ ಜ.05,2025 ಭಾನುವಾರ ವಿಶೇಷವಾಗಿ ನವ ನಾಗ ಸ್ತೋತ್ರ ಪಾರಾಯಣವನ್ನು ಮಾಡಿ ನಾಗದೇವನಿಗೆ ಹಾಲಿನಿಂದ ಅಭಿಷೇಕ ಮಾಡಿ ಬಿಳಿಯ ಹೂಗಳಿಂದ ಪೂಜೆಯನ್ನು ಮಾಡಿದರೆ ಈ ದಿನ ಬಹಳ ಶುಭವಾಗುತ್ತದೆ. Astrology

ಮೇಷ ರಾಶಿ: ಈ ದಿನ ದೂರ ಪ್ರಯಾಣ ಬೇಡ, ವಿಶೇಷವಾಗಿ ಸಂತೋಷವನ್ನು ಹೊಂದುವಿರಿ. ಆರೋಗ್ಯ ವಂತರಾಗಿ ದೀರ್ಘಾಯುಷ್ಯವು ಅಭಿವೃದ್ಧಿಯಾಗುತ್ತದೆ, ವಿದ್ಯಾರ್ಥಿಗಳಿಗೆ ಶುಭದಿನ. (ಪರಿಹಾರಕ್ಕಾಗಿ ನವಗ್ರಹ ಸ್ತೋತ್ರವನ್ನು ಕೇಳಿ ನಾಗನ ದೇವಸ್ಥಾನಕ್ಕೆ ಹೋಗಿ ದರ್ಶನ ಮಾಡಿಕೊಂಡು ಬನ್ನಿರಿ)

ವೃಷಭ ರಾಶಿ: ಎಲ್ಲ ವಿಚಾರಗಳಲ್ಲೂ ಭಯ, ಆತಂಕ, ನೇರ ಮಾತುಕತೆ, ದೃಢವಿಲ್ಲದ ನಿರ್ಧಾರ, ಆರೋಗ್ಯದ ಬಗ್ಗೆ ಉತ್ತಮ ಕಾಳಜಿ, ಒಳ್ಳೆಯ ಮಾತುಗಳು ಅನುಕೂಲ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಮ್ಮನವರನ್ನು ಜಾಜಿ ಹೂಗಳಿಂದ ಪೂಜೆ ಮಾಡಿ)

ಮಿಥುನ ರಾಶಿ: ವಿದ್ಯಾರ್ಥಿಗಳಿಗೆ ಹಿನ್ನಡೆ, ದೃಢವಿಲ್ಲದ ನಿರ್ಧಾರ, ಆರೋಗ್ಯ ಸಮಸ್ಯೆ, ಬಲವಿಲ್ಲದ ಕಾರ್ಯಗಳಲ್ಲಿ ಮನಸ್ಸನ್ನು ನಿಲ್ಲಿಸುವುದು ಇದರಿಂದ ಸಂಬಂಧಗಳು ಹಾಳಾಗುತ್ತವೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣರ ದೇವಸ್ಥಾನಕ್ಕೆ ಹೋಗಿ ಪಾರಿಜಾತ ಹೂಗಳಿಂದ ಪೂಜೆ ಮಾಡಿಸಿ)

ಕಟಕ ರಾಶಿ: ಅತ್ಯಂತ ದೀರ್ಘವಾದ ಆಲೋಚನೆ ಬೇಡ, ಆಲೋಚನೆಯಿಂದ ಯಾವುದು ಅನುಕೂಲವಾಗುತ್ತದೆ ಅದು ಸಿಗುವುದಿಲ್ಲ. ಅತಿಯಾಗಿ ಬಂದು ಮಿತ್ರರನ್ನು ನಂಬಬೇಡಿ, ಎಚ್ಚರಿಕೆ ಬಹಳ ಅಗತ್ಯ. ವಿದ್ಯಾಭ್ಯಾಸ ಸ್ವಲ್ಪ ಕೊರತೆ ಆದರೂ ಧೈರ್ಯ ಹೆಚ್ಚು. (ಪರಿಹಾರಕ್ಕಾಗಿ ಗಣಪತಿಯ ಪೂಜೆ ಮಾಡಿ)

ಸಿಂಹ ರಾಶಿ: ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ಪ್ರಗತಿ. ಆದರೆ ಕೆಟ್ಟ ಕೆಟ್ಟ ಆಲೋಚನೆಗಳು ಮನಸ್ಸನ್ನು ಹಿಂಸಿಸುತ್ತವೆ, ದುಃಖ ಪಡಬೇಡಿ ಧೈರ್ಯವಾಗಿ ಎದುರಿಸಿ ಇದರಿಂದ ಕಾರ್ಯಸಾಧನೆಯಾಗುತ್ತದೆ. (ಪರಿಹಾರಕ್ಕಾಗಿ ಭದ್ರಕಾಳಿ ಅಮ್ಮನವರ ದೇವಸ್ಥಾನದಲ್ಲಿ ಕೆಂಪು ಹೂಗಳಿಂದ ಪೂಜೆಯನ್ನು ಮಾಡಿಸಿ)

ಕನ್ಯಾ ರಾಶಿ: ನಂಬಿಕೆ ಇರಬೇಕು ಆದರೆ ವಿಪರೀತ ನಂಬುವುದು ಹಾನಿಕರ. ಮನಸ್ಸನ್ನು ನಿಯಂತ್ರಣದಲ್ಲಿಡಿ, ಅತಿಯಾಗಿ ಧನವನ್ನು ಕಳೆದುಕೊಂಡರೆ ಕಷ್ಟವಾದಿತು ಜೋಕೆ, ಕೆಟ್ಟ ಸಂಘಗಳಿಂದ ದೂರವಿರಿ, ಕೆಟ್ಟ ಅಭ್ಯಾಸಗಳು ಮನುಷ್ಯನನ್ನು ಹಾಳು ಮಾಡುತ್ತವೆ. (ಪರಿಹಾರಕ್ಕಾಗಿ ನರಸಿಂಹನ ದೇವಾಲಯಕ್ಕೆ ಹೋಗಿ ಪೂಜೆ ಮಾಡಿಸಿ)

ತುಲಾ ರಾಶಿ: ಅನಾವಶ್ಯಕ ಕೋಪ, ಅತಿಯಾದ ತಿರುಗಾಟ. ಸರ್ಕಾರಿ ಕಾರ್ಯಗಳು ಯಾವುದು ನಡೆಯುತ್ತಿಲ್ಲ ಎಂಬ ಭಯ, ವಿಪರೀತವಾಗಿ ಆಲೋಚನೆ, ಆಗಬೇಕಾದ ಕಾರ್ಯವು ನಡೆದೆ ತೀರುತ್ತದೆ ಚಿಂತೆ ಬೇಡ. (ಪರಿಹಾರಕ್ಕಾಗಿ ಸೂರ್ಯನ ಪೂಜೆ ಜಪ ಅನುಷ್ಠಾನ ಮಾಡಿ)

ವೃಶ್ಚಿಕ ರಾಶಿ: ದೀರ್ಘವಾದ ಆಲೋಚನೆ, ದೃಢವಾದ ನಿರ್ಧಾರ, ಅತಿಯಾಗಿ ಸಮಾಜ ಸೇವೆ, ಎಲ್ಲವೂ ಒಳ್ಳೆಯದಾಗುತ್ತದೆ. ಧನಾರ್ಜನೆ ಸ್ವಲ್ಪ ಕಡಿಮೆ, ಶ್ರೇಷ್ಠವಾದ ವ್ಯಕ್ತಿತ್ವ ಹಾಗೆ ಉಳಿಯುತ್ತದೆ, ಚಿಂತೆ ಬೇಡ. (ಪರಿಹಾರಕ್ಕಾಗಿ ಲಿಂಗಾಷ್ಟಕವನ್ನು ಪಾರಾಯಣ ಮಾಡಿ)

ಧನಸ್ಸು ರಾಶಿ: ಎಲ್ಲ ಕಾರ್ಯದಲ್ಲೂ ಸಮಗ್ರವಾಗಿ ಬದಲಾವಣೆ. ಚಿಂತೆ ಬೇಡ, ನಿರ್ಧಾರಕ್ಕೆ ಏನು ಕೊರತೆ ಇಲ್ಲ. ಸಮಯವಿದೆ ಯೋಚಿಸಬೇಡಿ ಒಳ್ಳೆಯದಾಗುತ್ತದೆ, ಶಾಂತ ಸ್ವಭಾವ ಎಲ್ಲ ಕಾರ್ಯವನ್ನು ಪೂರ್ಣವಾಗಿಸುತ್ತದೆ. (ಪರಿಹಾರಕ್ಕಾಗಿ ಪಂಚಮುಖ ಆಂಜನೇಯ ಸ್ತೋತ್ರವನ್ನು ಪಾರಾಯಣ ಮಾಡಿ)

ಮಕರ ರಾಶಿ: ಒಳ್ಳೆಯ ಸುದ್ದಿ ಶತ್ರುಗಳು ಸಹ ಮಿತ್ರರಾಗುವ ದಿನ ಬಹಳ ಆಲೋಚನೆಯಿಂದ ಸಂದಾನ ಕಾರ್ಯ ಮುಂದುವರೆಯಲಿ ವಿದ್ಯಾರ್ಜನೆ ಲಾಭ ಏಕಾಗ್ರತೆಯ ಕೊರತೆ ಕಿಂಚಿತ್ ಆರೋಗ್ಯ ಸಮಸ್ಯೆ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಧನವಂತರಿ ಪೂಜೆ ಹೋಮ ಮಾಡಿಸಿಕೊಳ್ಳಿ)

ಕುಂಭ ರಾಶಿ: ಯಾರಿಗೂ ಉಪದೇಶ ಕೊಡಲು ಹೋಗಬೇಡಿ, ಕಾಲ ನಿಮಗಿಂತ ಎತ್ತರದಲ್ಲಿದೆ. ಮೊದಲು ನಿಮ್ಮ ಕೈ ಬೆರಳಿನ ಸಮಕ್ಕೆ ಎಲ್ಲರೂ ಬರುತ್ತಾರೆ, ನಂತರ ನೀವು ಮಾತನಾಡಬಹುದು. ಈಗ ಶಾಂತ ರೀತಿಯಿಂದ ವರ್ತಿಸಿ. ಸಂಬಂಧಗಳು ದೃಢವಾಗಲಿ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಶಿವನಿಗೆ ರುದ್ರಾಭಿಷೇಕ ಮಾಡಿಸಿ)

ಮೀನ ರಾಶಿ: ಅನಾವಶ್ಯಕ ಚಿಂತೆ, ಅಧಿಕ ತಿರುಗಾಟ, ಶತ್ರು ಕಾಟ, ಮನಸ್ಸಿಗೆ ಸ್ವಲ್ಪ ಕಿರಿಕಿರಿ, ಮಕ್ಕಳ ಆರೋಗ್ಯ ದೃಢ. (ಪರಿಹಾರಕ್ಕಾಗಿ ರಾಮರಕ್ಷಾ ಸ್ತೋತ್ರವನ್ನು ಓದಿಕೊಳ್ಳಿ)

ರಾಹುಕಾಲ: 4-30PM ರಿಂದ 6-00PM
ಗುಳಿಕಕಾಲ: 3-00PM ರಿಂದ 4-30 PM
ಯಮಗಂಡಕಾಲ: 12-00PMರಿಂದ 1-30PM

ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572

Exit mobile version