ನವದೆಹಲಿ: ಅಮೆರಿಕದ ನಿರ್ಗಮಿತ ಅಧ್ಯಕ್ಷ ಜೋ ಬೈಡನ್ ಹಾಗೂ ಅವರ ಕುಟುಂಬವು ವಿವಿಧ ದೇಶಗಳ ನಾಯಕರಿಂದ ಬೆಲೆ ಬಾಳುವ ಸಾವಿರಾರು ಡಾಲರ್ ಮೌಲ್ಯದ ಉಡುಗೊರೆ ಗಳನ್ನು ಸ್ವೀಕರಿಸಿದ್ದು, ಆ ಪೈಕಿ ಭಾರತದ ಪ್ರಧಾನಿ ನರೇಂದ್ರ ಮೋದಿ ನೀಡಿದ ಉಡುಗೊರೆ (Modi’s Gift) ಅತ್ಯಂತ ದುಬಾರಿಯಾಗಿದ್ದು ಎನ್ನಲಾಗಿದೆ.
ಮೋದಿ 2023ರಲ್ಲಿ ಅಮೆರಿಕ ಪ್ರವಾಸದಲ್ಲಿ ದ್ದಾಗ ಅಲ್ಲಿನ ಪ್ರಥಮ ಮಹಿಳೆ ಅಧ್ಯಕ್ಷ ಜೋ ಬೈಡೆನ್‌ರವರ ಪತ್ನಿ ಜಿಲ್ ಬೈಡೆನ್‌ರಿಗೆ ದುಬಾರಿ ಉಡುಗೊರೆಯನ್ನು ನೀಡಿದ್ದರು. ಅದರಲ್ಲಿ
ವಿದೇಶಿ ಅಧಿಕಾರಿಗಳಿಂದ US ಅಧಿಕಾರಿಗಳು ಸ್ವೀಕರಿಸಿದ ಉಡುಗೊರೆಗಳ ವಾರ್ಷಿಕ ಲೆಕ್ಕಪತ್ರವನ್ನು ಪ್ರಕಟಿಸಿದೆ.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಶ್ವೇತಭವನಕ್ಕೆ ಭೇಟಿ ನೀಡಿದ್ದ ಸಂರ್ಭದಲ್ಲಿ ಯುಎಸ್‌ನ ಪ್ರಥಮ ಮಹಿಳೆ ಜಿಲ್ ಬೈಡನ್ ಅವರಿಗೆ ವಜ್ರವನ್ನು ಉಡುಗೊರೆಯಾಗಿ ನೀಡಿದ್ದರು. ಇದು 2023ರಲ್ಲಿ ಅತ್ಯಂತ ದುಬಾರಿ ಉಡುಗೊರೆಯಾಗಿದೆ. ಇದರ ಬೆಲೆ 20,000 ಡಾಲರ್ (17 ಲಕ್ಷಕ್ಕಿಂತ ಹೆಚ್ಚು ರೂ) ಎಂದು ತಿಳಿಸಿದೆ.
ಮೋದಿ ಅವರು ಜೋ ವೈಡೆನ್ ಅವರಿಗೆ ಶ್ರೀಗಂಧದ ಪೆಟ್ಟಿಗೆ, ಪ್ರತಿಮೆ ಎಣ್ಣೆ ದೀಪ ಮತ್ತು ದಿ ಟೆನ್ ಪ್ರಿನ್ಸಿಪಾಲ್ ಉಪನಿಷದ್ ಎಂಬ ಪುಸ್ತಕವನ್ನು ಉಡುಗೊರೆಯಾಗಿ ನೀಡಿದ್ದರು.
ಇವೆಲ್ಲವೂ 6,232 ಡಾಲರ್ ಮೌಲ್ಯವಾಗಿದೆ. US ಅಧಿಕಾರಿಗಳಿಗೆ ಸುಮಾರು 35,000 ಡಾಲರ್ ಮೌಲ್ಯದ ಉಡುಗೊರೆಗಳನ್ನು ನೀಡಿದ್ದರು ಎಂದು ರಾಜ್ಯ ಇಲಾಖೆ ತಿಳಿಸಿದೆ.
ಕಾಂಗ್ರೆಸ್ ಕಿಡಿ: ಪ್ರಧಾನಿ ಮೋದಿ ವಜ್ರ ಗಿಪ್ಟ್ ನೀಡಿರುವ ಕುರಿತು ಕಿಡಿಕಾರಿರುವ ಕಾಂಗ್ರೆಸ್, ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮೇರಿಕಾ ಭೇಟಿ ವೇಳೆ ನೀಡಿದ ಕಾಣಿಕೆಯನ್ನು ವಿವರಿಸಿ, ಇಬ್ಬರ ನಡುವಿನ ವೆತ್ಯಾಸ ಹೇಳಿದೆ.
ಈ ಕುರಿತು ಟ್ವಿಟ್ ಮಾಡಿರುವ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಅವರು ಜಿಲ್ ಬಿಡೆನ್‌ಗೆ ಲ್ಯಾಬ್‌ನಲ್ಲಿ ಬೆಳೆದ ಕೃತಕ ವಜ್ರವನ್ನು 💎 $20,000 (ಅದು ನಿಜವಾಗಿಯೂ ಮೌಲ್ಯದ್ದಾಗಿದೆ ಎಂದು ಭಾವಿಸುತ್ತೇವೆ) ಮತ್ತು $ 2,500 ಮೌಲ್ಯದ ಬ್ರೇಸ್ಲೆಟ್ ಅನ್ನು ಇವಾಂಕಾ ಟ್ರಂಪ್‌ಗೆ ಉಡುಗೊರೆಯಾಗಿ ನೀಡಿದ್ದಾರೆ.
2009 ರಲ್ಲಿ ವಾಷಿಂಗ್ಟನ್‌ಗೆ ತಮ್ಮ ರಾಜ್ಯ ಭೇಟಿಯ ಸಂದರ್ಭದಲ್ಲಿ ದಿವಂಗತ ಪ್ರಧಾನಿ ಮನಮೋಹನ್ ಸಿಂಗ್ ಅವರು ಯುಎಸ್ ಮೊದಲ ದಂಪತಿಗೆ ಉಡುಗೊರೆಯಾಗಿ ನೀಡಿದ ವಸ್ತುಗಳಲ್ಲಿ ಪಂಚತಂತ್ರದ ಕಥೆಗಳು ಮತ್ತು ಗಾಂಧಿ ಯುಗದ ಚಿತ್ರಗಳ ಸಂಗ್ರಹ ಮತ್ತು ಪಶ್ಮಿನಾ ಶಾಲು ಸೇರಿದೆ.
2 PM ಗಳ ಬುದ್ಧಿವಂತಿಕೆಯನ್ನು ಅರ್ಥಮಾಡಿಕೊಳ್ಳಲು ಈ ಹೋಲಿಕೆ ಸಾಕು ಎಂದು ಕಾಂಗ್ರೆಸ್ ಕುಟುಕಿದೆ.