ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಪುಣ್ಯಕ್ಷೇತ್ರ ಘಾಟಿಯ ಶ್ರೀ ಸುಬ್ರಹ್ಮಣ್ಯಸ್ವಾಮಿ (Ghati Subrahmanya) ದೇವಾಲಯದಲ್ಲಿ ಬ್ರಹ್ಮ ರಥೋತ್ಸವ ಜ.5ರಂದು ಬೆಳಿಗ್ಗೆ 12.10 ರಿಂದ 12.20 ಗಂಟೆಯವರೆಗೆ ನಡೆಯಲಿದ್ದು, ಬ್ರಹ್ಮ ರಥೋತ್ಸವಕ್ಕಾಗಿ ದೇವಾಲಯದಲ್ಲಿ ಸಕಲ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ.
ಬ್ರಹ್ಮ ರಥೋತ್ಸವದ ಅಂಗವಾಗಿ ಜ.5ರಂದು ಬೆಳಗಿನ ಜಾವ ಸ್ವಾಮಿಗೆ ವಿವಿಧ ಅಭಿಷೇಕ ನಂತರ ವಿಶೇಷ ಅಲಂಕಾರ ಮಾಡಲಾಗುವುದು. ನಂತರ ಮಹಾಮಂಗಳಾರತಿ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ದೇವಾಲಯದಲ್ಲಿ ವಿಶೇಷ ಅಲಂಕಾರ, ಪೂಜಾ ಕಾರ‍್ಯಕ್ರಮಗಳಿವೆ.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ
ಬ್ರಹ್ಮ ರಥೋತ್ಸವದ ಹಿನ್ನೆಲೆಯಲ್ಲಿ ಇಂದು ಮೇಲಿನ ಜುಗಾನಹಳ್ಳಿ ಗ್ರಾಮಪಂಚಾಯಿತಿವತಿಯಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನಾಟಕಗಳ ಕಾರ್ಯಕ್ರಮಗಳಿಗೆ ಚಾಲನೆ ನೀಡಲಾಯಿತು.
ಇಂದು ಮತ್ತು ನಾಳೆ ನಡೆಯುವ ಈ ಕಾರ್ಯಕ್ರಮಗಳಿಗೆ ದೊಡ್ಡಬಳ್ಳಾಪುರ ತಾಲೂಕು ಪಂಚಾಯಿತಿ ಇಒ ಮುನಿರಾಜು ಚಾಲನೆ ನೀಡಿದರು.
ಈ ವೇಳೆ ಗ್ರಾಮಪಂಚಾಯಿತಿ ಅಧ್ಯಕ್ಷೆ ಉಮಾಬಾಯಿ, ಪಿಡಿಒ ರಮಿತಾ ಕೆಟಿ, ಕಾರ್ಯದರ್ಶಿ ಮಧುಸೂಧನ್, ಬಿಲ್ ಕಲೆಕ್ಟರ್ ಶ್ರೀನಿವಾಸ್, ಲೋಕೇಶ್ ನಾಯಕ್ ಮತ್ತಿತರರಿದ್ದರು.