Daily story: ಹರಿತಲೇಖನಿ ದಿನಕ್ಕೊಂದು ಕಥೆ: ಸಜ್ಜನರ ಸಹವಾಸ

Daily story: ಬಹಳ ವರ್ಷಗಳ ಹಿಂದೆ ಕಾಶಿಯ ರಾಜ ಬ್ರಹ್ಮದತ್ತನಾಗಿದ್ದ. ಆತ ತಾರುಣ್ಯ­ದಲ್ಲೇ ಪಟ್ಟಕ್ಕೇರಿದವನು. ಆತ ಧರ್ಮಜ್ಞ. ಅವನಿಗೆ ಸಕಲ ವಿದ್ಯೆಗಳೂ ಕರ­ತ­ಲಾಮಲಕವಾಗಿದ್ದವು.

ಆತನ. ಮಾತು, ನಡೆ ಅತ್ಯಂತ ನಯ. ಅವನ ಬಾಯಿಯಿಂದ ತಪ್ಪು ಮಾತುಗಳು ಬರುವುದೇ ಸಾಧ್ಯವಿರಲಿಲ್ಲ. ಅವನ ಕರುಣೆ, ನ್ಯಾಯಪರತೆ, ಜನಪ್ರೀತಿ ದಂತಕಥೆಗಳೇ ಆಗಿದ್ದವು.

ಅವನ ರಾಜ್ಯದಲ್ಲಿ ಕಳವು, ಅಪರಾಧಿಗಳೇ ಇರಲಿಲ್ಲ. ನ್ಯಾಯಾಧೀಶರಿಗೆ, ಶಿಸ್ತು­ಪಾಲನೆ ಮಾಡುವ ಸೈನಿಕರಿಗೆ ಯಾವ ಕೆಲಸವೂ ಇರಲಿಲ್ಲ. ಸಮಾಜದಲ್ಲಿ ಅತ್ಯಂತ ಶಾಂತಿ ಇತ್ತು.ಬ್ರಹ್ಮದತ್ತ ಇಷ್ಟಾದರೂ ತನ್ನಲ್ಲಿ ಯಾವುದಾದರೂ ದುರ್ಗುಣವಿದೆಯೇ ಎಂದು ಪರೀಕ್ಷಿಸಿ­ಕೊಳ್ಳುತ್ತಿದ್ದ. ಆಸ್ಥಾನದಲ್ಲಿ ಯಾರನ್ನು ಕೇಳಿದರೂ ಅವರು ಅವನಲ್ಲಿ ಒಂದು ಕೆಟ್ಟಗುಣವನ್ನೂ ಹೇಳಲಿಲ್ಲ. ಅವರು ಹೆದರಿಕೆಯಿಂದ ಹೇಳಿರಲಿ­ಕ್ಕಿಲ್ಲ­ವೆಂದುಕೊಂಡು ವೇಷ ಮರೆಸಿಕೊಂಡು ತನ್ನ ದೇಶದ ಹಳ್ಳಿಹಳ್ಳಿಗಳಲ್ಲಿ ಸಂಚರಿ­ಸಿದ.

ಅಲ್ಲಿಯೂ ಸಾಮಾನ್ಯರನ್ನು ಪ್ರಶ್ನಿಸಿದ. ಅವರಲ್ಲಿ ಒಬ್ಬರೂ ರಾಜನ ಒಂದು ದುರ್ಗುಣವನ್ನೂ ಹೇಳಲಿಲ್ಲ. ಬದಲಾಗಿ ಅವನನ್ನು ದೇವರೆಂದೇ ಭಾವಿಸುವು-ದಾಗಿ ಹೇಳಿದರು. ಬ್ರಹ್ಮದತ್ತ ಅಂದಿನ ಕಾಲದ ಮಹಾಜ್ಞಾನಿ ಎಂದು ಹೆಸರಾದ ವಿಷ್ಣುಗೋಪನನ್ನು ಕಂಡು ತನ್ನಲ್ಲಿ ಯಾವುದಾದರೂ ದೋಷವಿದ್ದರೆ ತಿಳಿಸಿ ಅದನ್ನು ಕಳೆದುಕೊಳ್ಳುವ ವಿಧಾನ­ವನ್ನು ಹೇಳಲು ಕೇಳಿಕೊಂಡ.

ಇದೇ ರೀತಿಯ ಪರಿಸ್ಥಿತಿ ಕೋಸಲ ದೇಶದ ರಾಜನಾದ ಮಲಿಕಸಿಂಹನಿಗೂ ಬಂದಿತ್ತು. ಅವನನ್ನು ಜನ ದೇವರೆಂದೇ ನಂಬುತ್ತಿದ್ದರು. ಅವನ ರಾಜ್ಯದಲ್ಲೂ ಒಂದೇ ಒಂದು ಕಳವು, ಅನ್ಯಾಯದ ಪ್ರಸಂಗ­­ಗಳು ನಡೆಯುತ್ತಿರಲಿಲ್ಲ. ಅವನೂ ಕೂಡ ವಿಷ್ಣುಗೋಪನನ್ನು ಕಂಡು ತನ್ನ ದುರ್ಗುಣಗಳನ್ನು ಕಂಡು ಹಿಡಿಯಲು ಬೇಡಿಕೊಂಡಿದ್ದ. ವಿಷ್ಣು­ಗೋಪ ಇಬ್ಬರೂ ರಾಜರ ವಿವರಗಳನ್ನೆಲ್ಲ ತರಿಸಿಕೊಂಡ. ಆಶ್ಚರ್ಯವೆಂದರೆ ಇಬ್ಬರೂ ಒಂದೇ ವಯಸ್ಸಿನವರು. ಅವರ ರಾಜ್ಯದ ವಿಸ್ತಾರ, ಐಶ್ವರ್ಯ, ಸೈನ್ಯದ ಶಕ್ತಿ, ಅವರು ಪಡೆದ ಯಶಸ್ಸು ಎಲ್ಲವೂ ಸಮನಾಗಿಯೇ ಇದ್ದವು. ಎರಡೂ ದೇಶದ ಜನರು ತಮ್ಮ ತಮ್ಮ ರಾಜನಲ್ಲಿ ಒಂದೇ ಒಂದು ತಪ್ಪನ್ನು ಕಂಡುಹಿಡಿ­ಯಲು ಅಸಮರ್ಥ­ರಾಗಿದ್ದರು. ಇಬ್ಬ­ರಲ್ಲಿ ಯಾರು ಹೆಚ್ಚು ಒಳ್ಳೆಯವರು ಎಂಬು­ದನ್ನು ಗುರುತಿಸುವುದು ಹೇಗೆ ಎಂಬುದು ವಿಷ್ಣುಗೋಪನಿಗೆ ಸವಾಲಾ­ಯಿತು.

ಆಗ ಒಂದು ದಿನ ಯೋಚನೆ ಮಾಡಿ ಇಬ್ಬರೂ ರಾಜರ ರಥಗಳನ್ನು ಒಂದೆಡೆಗೆ ಕಳುಹಿಸುವಂತೆ ಸೂಚನೆ ನೀಡಿದ. ರಾಜರ ಸಾರಥಿಗಳು ತಮ್ಮ ರಥಗಳನ್ನು ತೆಗೆದುಕೊಂಡು ತಿಳಿಸಿದ ಸ್ಥಳಕ್ಕೆ ಹೊರಟರು. ಅವರಿಬ್ಬರ ರಥಗಳೂ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಬರುವಂತೆ ವಿಷ್ಣುಗೋಪ ನೋಡಿ­ಕೊಂಡ. ಸೇತುವೆಯ ಮಧ್ಯದಲ್ಲಿ ಎರಡೂ ರಥಗಳು ಮುಖಾಮುಖಿ­ಯಾಗಿ ನಿಂತವು. ಈಗ ಯಾವು­ದಾದರೂ ಒಂದು ರಥ ಹಿಂದೆ ಹೋಗದೇ ಗತಿಯಲ್ಲ..! ಆದರೆ ಹಿಂದೆ ಹೋಗು­ವವರು ಯಾರು? ವಿಷ್ಣುಗೋಪ ಇಬ್ಬರೂ ಸಾರಥಿಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ. ಸ್ವಲ್ಪ ಸಮಯದ ಮೇಲೆ ಬ್ರಹ್ಮದತ್ತನ ಸಾರಥಿ ರಥವನ್ನು ಹಿಂದೆ ತೆಗೆದುಕೊಂಡು ಹೋದ.

ಮಲಿಕಸಿಂಹನ ಸಾರಥಿ ಸಂತೋಷದಿಂದ ರಥ ಓಡಿಸಿಕೊಂಡು ನಡೆದ. ನಂತರ ವಿಷ್ಣುಗೋಪ ಇಬ್ಬರೂ ರಾಜರನ್ನು ಒಟ್ಟಿಗೇ ಕರೆದು ಹೇಳಿದ, ‘ನೀವಿಬ್ಬರೂ ಒಳ್ಳೆಯ ರಾಜರೇ, ಅಸಾಮಾನ್ಯ ಗುಣಗಳನ್ನು ಹೊಂದಿದ್ದೀರಿ. ಆದರೆ, ಮಲಿಕಸಿಂಹನಿಗೆ ಇನ್ನೂ ಸ್ವಲ್ಪ ದರ್ಪ, ಅಹಂಕಾರವಿದೆ. ಅದು ಕರಗಬೇಕು. ಯಾಕೆಂದರೆ ನಿಮ್ಮ ಸಾರಥಿ ಆ ದರ್ಪ­ವನ್ನು ತೋರಿಸಿದ. ಆದರೆ ಬ್ರಹ್ಮದತ್ತನ ಸಾರಥಿ ನಗು ಮುಖದಿಂದ ರಥವನ್ನು ಹಿಂದೆ ತೆಗೆದ. ಯಜಮಾನನ ದರ್ಪ ಸೇವಕನಿಗೂ ತಟ್ಟುತ್ತದೆ’ ಮಲಿಕಸಿಂಹ ಈ ಮಾತು ಒಪ್ಪಿದ ಹಾಗೂ ಇನ್ನೂ ವಿನಯಶೀಲನಾಗಲು ಪ್ರಯತ್ನಿಸಿ ಯಶಸ್ವಿ­ಯಾದ.

ಯಜ-ಮಾನನ ಗುಣ, ದುರ್ಗುಣಗಳು ಅವನ ಹಿಂಬಾಲಕರಿಗೂ ಅಂಟಿಕೊಳ್ಳುತ್ತವೆ. ಮೌಲ್ಯಗಳು ಮೇಲಿ­ನಿಂದ ಕೆಳಕ್ಕೆ ಇಳಿಯುತ್ತವೆ. ಯಜಮಾನ ಹೇಗಿದ್ದಾನೆ ಎಂದು ತಿಳಿಯಲು ಅವನನ್ನೇ ನೋಡಬೇಕಿಲ್ಲ, ಅವನೊಂದಿಗೇ ಇರುವ ಸಹಚರರನ್ನು ಗಮನಿಸಿದರೆ ಸಾಕು. ಸಜ್ಜನ­ನಾದ ಯಜಮಾನ ತನ್ನೊಂದಿಗೆ ಇರುವವರನ್ನೂ ಸಜ್ಜನರನ್ನಾಗಿ ಮಾಡು­ತ್ತಾನೆ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕಾಂಗ್ರೆಸ್ ವಿರುದ್ಧ ಗುಡುಗಿದ ಮಾಜಿ ಪ್ರಧಾನಿ ಹೆಚ್‌.ಡಿ.ದೇವೇಗೌಡರು

ಕರ್ನಾಟಕವನ್ನು ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ. ಅದು ಎಷ್ಟರ ಮಟ್ಟಿಗೆ ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದರೆ ಪರಿಶಿಷ್ಟ ಜನರ ಕಲ್ಯಾಣಕ್ಕಾಗಿ ಮೀಸಲಿಟ್ಟಿದ್ದ ಹಣವನ್ನು ಹಣವನ್ನು ಚುನಾವಣೆಗೆ ಬಳಸಿಕೊಂಡಿದೆ. HD Deve Gowda

[ccc_my_favorite_select_button post_id="102362"]
ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ದೇವನಹಳ್ಳಿ: ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ರಮದಲ್ಲಿ ನಿಖಿಲ್ ಭಾಗಿ

ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಬದಲಾವಣೆ ವಿಚಾರಕ್ಕೆ ಪ್ರತಿಕ್ರಿಯೆಸಿದರು. ಭಾರತೀಯ ಜನತಾ ಪಾರ್ಟಿ ರಾಷ್ಟ್ರೀಯ ಪಕ್ಷ. ನಾನು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ, nikhil kumaraswamy

[ccc_my_favorite_select_button post_id="102348"]
Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ ಆಕ್ರೋಶ

Video: ಸಂಕೋಲೆಗಳಲ್ಲಿ ಕಟ್ಟಿ ಭಾರತೀಯರ ಅವಮಾನಿಸಿದ ಮೋದಿ ಮಿತ್ರ ಟ್ರಂಪ್ ಸರ್ಕಾರ.. ವ್ಯಾಪಕ

ವೈರಲ್ ವಿಡಿಯೋದಲ್ಲಿ ಅಕ್ರಮ ವಲಸಿಗರ ಕಾಲನ್ನು ಸಂಕೋಲೆಗಳಲ್ಲಿ ಕಟ್ಟಿರುವುದು ಹಾಗೂ ಕೈಗಳನ್ನು ಕೋಳಗಳಿಂದ ಬಂಧಿಸಿರುವುದು ಸ್ಪಷ್ಟವಾಗಿ ಕಂಡುಬಂದಿದೆ. Video

[ccc_my_favorite_select_button post_id="102365"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ಕ್ರೀಡಾ ಶಾಲೆ/ ವಸತಿ ನಿಲಯ ಪ್ರವೇಶಾತಿಗೆ ಆಯ್ಕೆ ಪ್ರಕ್ರಿಯೆ

ವಿಭಾಗ ಮಟ್ಟಕ್ಕೆ ಆಯ್ಕೆಯಾಗುವ ಕಿರಿಯ ಕ್ರೀಡಾಪಟುಗಳಿಗೆ ವಿಭಾಗ ಮಟ್ಟಕ್ಕೆ ತೆರಳಲು ಇಲಾಖೆಯಿಂದ ಪ್ರಯಾಣಭತ್ಯೆ ನೀಡಲಾಗುವುದು. hostel admission

[ccc_my_favorite_select_button post_id="101814"]

Kho kho world cup ಫೈನಲ್‌ನಲ್ಲಿ ಗೆದ್ದು

[ccc_my_favorite_select_button post_id="101277"]

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ

[ccc_my_favorite_select_button post_id="99992"]

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್..

[ccc_my_favorite_select_button post_id="98503"]
ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಮನೆ ಮಾರಿ ಪ್ರೇಮಿಯೊಂದಿಗೆ ಪತ್ನಿ ಪರಾರಿ.. ಗಂಡ ಆತ್ಮಹತ್ಯೆ..!

ಪ್ರಿಯಕರೊಂದಿಗೆ ಓಡಿ ಹೋಗಿರುವ ವಿವಾಹಿತ ಮಹಿಳೆ ವಿದೇಶದಲ್ಲಿದ್ದ ತನ್ನ ಗಂಡನನ್ನು ಬಿಟ್ಟಿರುವುದಲ್ಲದೆ, ಗಂಡ ತನಗಾಗಿ ಕಟ್ಟಿದ್ದ ಮನೆಯನ್ನು ಮಾರಿದ್ದಾಳೆ. Suicide

[ccc_my_favorite_select_button post_id="102360"]
ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ ಸಾವು

ಬಸ್ -ಬೈಕ್ ಡಿಕ್ಕಿ: 1 ವರ್ಷದ ಮಗು ಸೇರಿ ಒಂದೇ ಕುಟುಂಬದ ಐವರ

ಹುಲಿಗೆಮ್ಮ ದೇವಿಯ ದೇವರ ಕಾರ್ಯಕ್ರಮಕ್ಕಾಗಿ ಗುರುಗುಂಟಾಗೆ ತೆರಳುತ್ತಿದ್ದಾಗ ತಿಂಥಣಿ ಸಮೀಪ ಮುಂದೆ ಸಾಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವಾಗ ಎದುರಿಗೆ ಬಂದ ಬಸ್ಸಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಮಕ್ಕಳು ಸೇರಿ ಐವರು ಸ್ಥಳದಲ್ಲೇ

[ccc_my_favorite_select_button post_id="102325"]

ಆರೋಗ್ಯ

ಸಿನಿಮಾ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಅನಂತ್ ನಾಗ್, ಬಾಲಕೃಷ್ಣ ಸೇರಿ 139 ಮಂದಿಗೆ ಪದ್ಮ ಗೌರವ

ಕನ್ನಡ ಸಿನಿಮಾ ಇಡೀ ದೇಶದ ಚಿತ್ರರಂದ ಮಂದಿ ಗೌರವಿ ಸುವ ಹೆಸರು ಅನಂತ್ ನಾಗ್ ಅವರದು. ಆದರೆ 140ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ, ಅಂಕು‌ರ್ ಸೇರಿದಂತೆ 10ಕ್ಕೂ ಹೆಚ್ಚು ಹಿಂದಿ ಚಿತ್ರಗಳಲ್ಲಿ ನಟಿಸಿ, ರಾಷ್ಟ್ರಪ್ರಶಸ್ತಿಗೂ

[ccc_my_favorite_select_button post_id="101669"]
error: Content is protected !!