Daily story: ಹರಿತಲೇಖನಿ ದಿನಕ್ಕೊಂದು ಕಥೆ: ಸಜ್ಜನರ ಸಹವಾಸ

Daily story: ಬಹಳ ವರ್ಷಗಳ ಹಿಂದೆ ಕಾಶಿಯ ರಾಜ ಬ್ರಹ್ಮದತ್ತನಾಗಿದ್ದ. ಆತ ತಾರುಣ್ಯ­ದಲ್ಲೇ ಪಟ್ಟಕ್ಕೇರಿದವನು. ಆತ ಧರ್ಮಜ್ಞ. ಅವನಿಗೆ ಸಕಲ ವಿದ್ಯೆಗಳೂ ಕರ­ತ­ಲಾಮಲಕವಾಗಿದ್ದವು.

ಆತನ. ಮಾತು, ನಡೆ ಅತ್ಯಂತ ನಯ. ಅವನ ಬಾಯಿಯಿಂದ ತಪ್ಪು ಮಾತುಗಳು ಬರುವುದೇ ಸಾಧ್ಯವಿರಲಿಲ್ಲ. ಅವನ ಕರುಣೆ, ನ್ಯಾಯಪರತೆ, ಜನಪ್ರೀತಿ ದಂತಕಥೆಗಳೇ ಆಗಿದ್ದವು.

ಅವನ ರಾಜ್ಯದಲ್ಲಿ ಕಳವು, ಅಪರಾಧಿಗಳೇ ಇರಲಿಲ್ಲ. ನ್ಯಾಯಾಧೀಶರಿಗೆ, ಶಿಸ್ತು­ಪಾಲನೆ ಮಾಡುವ ಸೈನಿಕರಿಗೆ ಯಾವ ಕೆಲಸವೂ ಇರಲಿಲ್ಲ. ಸಮಾಜದಲ್ಲಿ ಅತ್ಯಂತ ಶಾಂತಿ ಇತ್ತು.ಬ್ರಹ್ಮದತ್ತ ಇಷ್ಟಾದರೂ ತನ್ನಲ್ಲಿ ಯಾವುದಾದರೂ ದುರ್ಗುಣವಿದೆಯೇ ಎಂದು ಪರೀಕ್ಷಿಸಿ­ಕೊಳ್ಳುತ್ತಿದ್ದ. ಆಸ್ಥಾನದಲ್ಲಿ ಯಾರನ್ನು ಕೇಳಿದರೂ ಅವರು ಅವನಲ್ಲಿ ಒಂದು ಕೆಟ್ಟಗುಣವನ್ನೂ ಹೇಳಲಿಲ್ಲ. ಅವರು ಹೆದರಿಕೆಯಿಂದ ಹೇಳಿರಲಿ­ಕ್ಕಿಲ್ಲ­ವೆಂದುಕೊಂಡು ವೇಷ ಮರೆಸಿಕೊಂಡು ತನ್ನ ದೇಶದ ಹಳ್ಳಿಹಳ್ಳಿಗಳಲ್ಲಿ ಸಂಚರಿ­ಸಿದ.

ಅಲ್ಲಿಯೂ ಸಾಮಾನ್ಯರನ್ನು ಪ್ರಶ್ನಿಸಿದ. ಅವರಲ್ಲಿ ಒಬ್ಬರೂ ರಾಜನ ಒಂದು ದುರ್ಗುಣವನ್ನೂ ಹೇಳಲಿಲ್ಲ. ಬದಲಾಗಿ ಅವನನ್ನು ದೇವರೆಂದೇ ಭಾವಿಸುವು-ದಾಗಿ ಹೇಳಿದರು. ಬ್ರಹ್ಮದತ್ತ ಅಂದಿನ ಕಾಲದ ಮಹಾಜ್ಞಾನಿ ಎಂದು ಹೆಸರಾದ ವಿಷ್ಣುಗೋಪನನ್ನು ಕಂಡು ತನ್ನಲ್ಲಿ ಯಾವುದಾದರೂ ದೋಷವಿದ್ದರೆ ತಿಳಿಸಿ ಅದನ್ನು ಕಳೆದುಕೊಳ್ಳುವ ವಿಧಾನ­ವನ್ನು ಹೇಳಲು ಕೇಳಿಕೊಂಡ.

ಇದೇ ರೀತಿಯ ಪರಿಸ್ಥಿತಿ ಕೋಸಲ ದೇಶದ ರಾಜನಾದ ಮಲಿಕಸಿಂಹನಿಗೂ ಬಂದಿತ್ತು. ಅವನನ್ನು ಜನ ದೇವರೆಂದೇ ನಂಬುತ್ತಿದ್ದರು. ಅವನ ರಾಜ್ಯದಲ್ಲೂ ಒಂದೇ ಒಂದು ಕಳವು, ಅನ್ಯಾಯದ ಪ್ರಸಂಗ­­ಗಳು ನಡೆಯುತ್ತಿರಲಿಲ್ಲ. ಅವನೂ ಕೂಡ ವಿಷ್ಣುಗೋಪನನ್ನು ಕಂಡು ತನ್ನ ದುರ್ಗುಣಗಳನ್ನು ಕಂಡು ಹಿಡಿಯಲು ಬೇಡಿಕೊಂಡಿದ್ದ. ವಿಷ್ಣು­ಗೋಪ ಇಬ್ಬರೂ ರಾಜರ ವಿವರಗಳನ್ನೆಲ್ಲ ತರಿಸಿಕೊಂಡ. ಆಶ್ಚರ್ಯವೆಂದರೆ ಇಬ್ಬರೂ ಒಂದೇ ವಯಸ್ಸಿನವರು. ಅವರ ರಾಜ್ಯದ ವಿಸ್ತಾರ, ಐಶ್ವರ್ಯ, ಸೈನ್ಯದ ಶಕ್ತಿ, ಅವರು ಪಡೆದ ಯಶಸ್ಸು ಎಲ್ಲವೂ ಸಮನಾಗಿಯೇ ಇದ್ದವು. ಎರಡೂ ದೇಶದ ಜನರು ತಮ್ಮ ತಮ್ಮ ರಾಜನಲ್ಲಿ ಒಂದೇ ಒಂದು ತಪ್ಪನ್ನು ಕಂಡುಹಿಡಿ­ಯಲು ಅಸಮರ್ಥ­ರಾಗಿದ್ದರು. ಇಬ್ಬ­ರಲ್ಲಿ ಯಾರು ಹೆಚ್ಚು ಒಳ್ಳೆಯವರು ಎಂಬು­ದನ್ನು ಗುರುತಿಸುವುದು ಹೇಗೆ ಎಂಬುದು ವಿಷ್ಣುಗೋಪನಿಗೆ ಸವಾಲಾ­ಯಿತು.

ಆಗ ಒಂದು ದಿನ ಯೋಚನೆ ಮಾಡಿ ಇಬ್ಬರೂ ರಾಜರ ರಥಗಳನ್ನು ಒಂದೆಡೆಗೆ ಕಳುಹಿಸುವಂತೆ ಸೂಚನೆ ನೀಡಿದ. ರಾಜರ ಸಾರಥಿಗಳು ತಮ್ಮ ರಥಗಳನ್ನು ತೆಗೆದುಕೊಂಡು ತಿಳಿಸಿದ ಸ್ಥಳಕ್ಕೆ ಹೊರಟರು. ಅವರಿಬ್ಬರ ರಥಗಳೂ ಒಂದು ಇಕ್ಕಟ್ಟಾದ ಸೇತುವೆಯ ಮೇಲೆ ಬರುವಂತೆ ವಿಷ್ಣುಗೋಪ ನೋಡಿ­ಕೊಂಡ. ಸೇತುವೆಯ ಮಧ್ಯದಲ್ಲಿ ಎರಡೂ ರಥಗಳು ಮುಖಾಮುಖಿ­ಯಾಗಿ ನಿಂತವು. ಈಗ ಯಾವು­ದಾದರೂ ಒಂದು ರಥ ಹಿಂದೆ ಹೋಗದೇ ಗತಿಯಲ್ಲ..! ಆದರೆ ಹಿಂದೆ ಹೋಗು­ವವರು ಯಾರು? ವಿಷ್ಣುಗೋಪ ಇಬ್ಬರೂ ಸಾರಥಿಗಳ ಮಾತುಗಳನ್ನು ಕೇಳಿಸಿಕೊಳ್ಳುತ್ತಿದ್ದ. ಸ್ವಲ್ಪ ಸಮಯದ ಮೇಲೆ ಬ್ರಹ್ಮದತ್ತನ ಸಾರಥಿ ರಥವನ್ನು ಹಿಂದೆ ತೆಗೆದುಕೊಂಡು ಹೋದ.

ಮಲಿಕಸಿಂಹನ ಸಾರಥಿ ಸಂತೋಷದಿಂದ ರಥ ಓಡಿಸಿಕೊಂಡು ನಡೆದ. ನಂತರ ವಿಷ್ಣುಗೋಪ ಇಬ್ಬರೂ ರಾಜರನ್ನು ಒಟ್ಟಿಗೇ ಕರೆದು ಹೇಳಿದ, ‘ನೀವಿಬ್ಬರೂ ಒಳ್ಳೆಯ ರಾಜರೇ, ಅಸಾಮಾನ್ಯ ಗುಣಗಳನ್ನು ಹೊಂದಿದ್ದೀರಿ. ಆದರೆ, ಮಲಿಕಸಿಂಹನಿಗೆ ಇನ್ನೂ ಸ್ವಲ್ಪ ದರ್ಪ, ಅಹಂಕಾರವಿದೆ. ಅದು ಕರಗಬೇಕು. ಯಾಕೆಂದರೆ ನಿಮ್ಮ ಸಾರಥಿ ಆ ದರ್ಪ­ವನ್ನು ತೋರಿಸಿದ. ಆದರೆ ಬ್ರಹ್ಮದತ್ತನ ಸಾರಥಿ ನಗು ಮುಖದಿಂದ ರಥವನ್ನು ಹಿಂದೆ ತೆಗೆದ. ಯಜಮಾನನ ದರ್ಪ ಸೇವಕನಿಗೂ ತಟ್ಟುತ್ತದೆ’ ಮಲಿಕಸಿಂಹ ಈ ಮಾತು ಒಪ್ಪಿದ ಹಾಗೂ ಇನ್ನೂ ವಿನಯಶೀಲನಾಗಲು ಪ್ರಯತ್ನಿಸಿ ಯಶಸ್ವಿ­ಯಾದ.

ಯಜ-ಮಾನನ ಗುಣ, ದುರ್ಗುಣಗಳು ಅವನ ಹಿಂಬಾಲಕರಿಗೂ ಅಂಟಿಕೊಳ್ಳುತ್ತವೆ. ಮೌಲ್ಯಗಳು ಮೇಲಿ­ನಿಂದ ಕೆಳಕ್ಕೆ ಇಳಿಯುತ್ತವೆ. ಯಜಮಾನ ಹೇಗಿದ್ದಾನೆ ಎಂದು ತಿಳಿಯಲು ಅವನನ್ನೇ ನೋಡಬೇಕಿಲ್ಲ, ಅವನೊಂದಿಗೇ ಇರುವ ಸಹಚರರನ್ನು ಗಮನಿಸಿದರೆ ಸಾಕು. ಸಜ್ಜನ­ನಾದ ಯಜಮಾನ ತನ್ನೊಂದಿಗೆ ಇರುವವರನ್ನೂ ಸಜ್ಜನರನ್ನಾಗಿ ಮಾಡು­ತ್ತಾನೆ.

ಕೃಪೆ: ಸಾಮಾಜಿಕ ಜಾಲತಾಣ (ಲೇಖಕರ ಮಾಹಿತಿ ಲಭ್ಯವಾಗಿಲ್ಲ)

ರಾಜಕೀಯ

Doddaballapura; ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ರಕ್ಷಾ ರಾಮಯ್ಯ, ಚುಂಚೇಗೌಡ

Doddaballapura; ನೂತನ ವರ್ಷದ ಕ್ಯಾಲೆಂಡರ್ ಬಿಡುಗಡೆ ಮಾಡಿದ ರಕ್ಷಾ ರಾಮಯ್ಯ, ಚುಂಚೇಗೌಡ

ಯುವ ಕಾಂಗ್ರೆಸ್ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪುನೀತ್ ಗೌಡ ಮಲ್ಲೋಹಳ್ಳಿ ಹೊರತಂದಿರುವ 2025ರ Doddaballapura

[ccc_my_favorite_select_button post_id="100366"]
Fog: “ಮುಂಜಾನೆ ಮಂಜಲ್ಲಿ….” ದೊಡ್ಡಬಳ್ಳಾಪುರದ ವಿವಿಧೆಡೆ ಮಂಜು ಮುಸುಕಿದ ವಾತಾವರಣ

Fog: “ಮುಂಜಾನೆ ಮಂಜಲ್ಲಿ….” ದೊಡ್ಡಬಳ್ಳಾಪುರದ ವಿವಿಧೆಡೆ ಮಂಜು ಮುಸುಕಿದ ವಾತಾವರಣ

ಸಮಯ ಬೆಳಗ್ಗೆ 8.30 ಆದರೂ ಅನೇಕ ಗ್ರಾಮಗಳಲ್ಲಿ ಸೂರ್ಯ ಕಂಡು ಬಂದಿದಲ್ಲ ವಾಗಿದ್ದು..Fog

[ccc_my_favorite_select_button post_id="100281"]
Naxal attack ನಕ್ಸಲರ ಅಟ್ಟಹಾಸ; 8 ಯೋಧರು ಹುತಾತ್ಮ..!

Naxal attack ನಕ್ಸಲರ ಅಟ್ಟಹಾಸ; 8 ಯೋಧರು ಹುತಾತ್ಮ..!

ಭದ್ರತಾ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ಮುಗಿಸಿ ವಾಪಸ್ ಆಗುತ್ತಿದ್ದರು Naxal attack

[ccc_my_favorite_select_button post_id="100335"]

Chinmoy Das: ಬಂಧನವಾಗಿ 42 ದಿನ.. ಹಿಂದೂ

[ccc_my_favorite_select_button post_id="99989"]

Election commission: ಗ್ರಾಮಪಂಚಾಯಿತಿ ಸದಸ್ಯರಿಗೆ ಬಿಗ್ ಶಾಕ್..!

[ccc_my_favorite_select_button post_id="99971"]

ಹಣ ಹಂಚಿ ಮತ ಕೊಳ್ಳುವ BJPಯನ್ನು RSS

[ccc_my_favorite_select_button post_id="99908"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

Khel ratna: ಗುಕೇಶ್ ಸೇರಿ 4 ಕ್ರೀಡಾಪಟುಗಳಿಗೆ ಖೇಲ್ ರತ್ನ ಪ್ರಶಸ್ತಿ ಘೋಷಣೆ..!

ಜನವರಿ 17 ರಂದು ದೆಹಲಿಯ ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಈ ಕ್ರೀಡಾಪಟುಗಳಿಗೆ ಪ್ರಶಸ್ತಿಯನ್ನು ನೀಡಲಿದ್ದಾರೆ. Khel ratna

[ccc_my_favorite_select_button post_id="99992"]
Cylinder Blast: ಗ್ಯಾಸ್ ಸಿಲಿಂಡರ್ ಸ್ಪೋಟ; ಇಬ್ಬರ ಸ್ಥಿತಿ ಗಂಭೀರ

Cylinder Blast: ಗ್ಯಾಸ್ ಸಿಲಿಂಡರ್ ಸ್ಪೋಟ; ಇಬ್ಬರ ಸ್ಥಿತಿ ಗಂಭೀರ

ಸಿಲಿಂಡ‌ರ್ ಸ್ಫೋಟದ ತೀವ್ರತೆಗೆ ಅಕ್ಕಪಕ್ಕದ ನಾಲೈದು ಮನೆಗಳಿಗೆ ಹಾನಿಯಾಗಿದ್ದು, ವಾಟರ್ ಲೈನ್, ಕಿಟಕಿ, ಬಾಗಿಲುಗಳೆಲ್ಲ ಫುಲ್ ಪೀಸ್ ಪೀಸ್ ಆಗಿವೆ. Cylinder Blast

[ccc_my_favorite_select_button post_id="100309"]

ಆರೋಗ್ಯ

ಸಿನಿಮಾ

Darshan Sudeep| ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ತಂದಿಟ್ಟ ಖಾಸಗಿ ಸುದ್ದಿ ವಾಹಿನಿ..! ಮಾತಲ್ಲೆ ಜಾಡಿಸಿದ ಕಿಚ್ಚ ಸುದೀಪ್

Darshan Sudeep| ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ತಂದಿಟ್ಟ ಖಾಸಗಿ ಸುದ್ದಿ ವಾಹಿನಿ..! ಮಾತಲ್ಲೆ

ಇಬ್ಬರು ಅಭಿಮಾನಿಗಳ ನಡುವೆ ವಿಷ ಬೀಜ ಬಿತ್ತಲು ಆರಂಭಿಸಿದ ಖಾಸಗಿ ಚಾನಲ್ ಹಾಗೂ ಅದರ ನಿರೂಪಕಿಯ ಹೆಸರೇಳದೆ ಮಂಗಳಾರತಿ ಮಾಡಿದರು. Darshan Sudeep

[ccc_my_favorite_select_button post_id="99843"]

Pavan kalyan| ದಟ್ ಈಸ್ ರೇವಂತ್ ರೆಡ್ಡಿಗಾರು:

[ccc_my_favorite_select_button post_id="99803"]

Pushpa 2 ಅಲ್ಲು ಅರ್ಜುನ್ ಅವಾಂತರ; ಸಿಎಂ

[ccc_my_favorite_select_button post_id="99541"]

HD Kumaraswamy ಸಮಾಜದ ಶಾಂತಿ ಕಾಪಾಡುವ ಸಿನಿಮಾಗಳು

[ccc_my_favorite_select_button post_id="99321"]
error: Content is protected !!