ಬೆಂಗಳೂರು: ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಗಾಯಕ, ಸಾಹಿತಿ ಹಾಗೂ ರಂಗಭೂಮಿ ಕಲಾವಿದ
ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರಿಗೆ ಸರಸ್ವತಿ ಸುತ ರಾಷ್ಟ್ರೀಯ ಪ್ರಶಸ್ತಿಯನ್ನು (National Award) ನೀಡಿ ಗೌರವಿಸಲಾಗಿದೆ.
ಯಲಹಂಕದ ಆರ್‌ಟಿ ನಗರ್ ಶಾಲೆಯಲ್ಲಿ ಮಾನವ ಹಕ್ಕುಗಳು ಹಾಗೂ ಭ್ರಷ್ಟಾಚಾರ ವಿರೋಧಿ ಸಂಸ್ಥೆ ದೆಹಲಿ ಕರ್ನಾಟಕ ಶಾಖೆ ಯಲಹಂಕ ಇವರು ಆಯೋಜಿಸಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿಯನ್ನು ನೀಡಲಾಗಿದೆ.
ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮಾಜಿ ಲೋಕಾಯುಕ್ತ ಆಯುಕ್ತರಾದ ಎನ್.ಸಂತೋಷ್ ಹೆಗ್ಗಡೆ ಅವರು ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರಿಗೆ ಸರಸ್ವತಿ ಸುತ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಿದರು.
ಕಾರ್ಯಕ್ರಮದಲ್ಲಿ ಹೆಚ್‌ಆರ್ಎಸಿಬಿ ಅಧ್ಯಕ್ಷ ಕೆ.ಶಿವಶಂಕರ್, ನ್ಯಾಯಮೂರ್ತಿ ಎಂ.ಎಲ್.ರಘುನಾಥ್, ಕರ್ನಾಟಕ ಮಹಿಳಾ ಆಯೋಗದ ಅಧ್ಯಕ್ಷೆ ಕೆ.ನಾಗಲಕ್ಷ್ಮಿ, ಜಯದೇವ ಇನ್ಸ್ಟಿಟ್ಯೂಟ್ನ ಪ್ರೊಫೆಸರ್ ಡಾ.ಶಿವನಂದ ಪಾಟೀಲ್, ಇನ್ಸ್ಪೆಕ್ಟರ್ ದಿಲೀಪ್ ಕುಮಾರ್, ನಟ ಡಾ.ಸುಗ್ಗುರು ತಿಪ್ಪೆಸ್ವಾಮಿ ಮತ್ತಿತರರಿದ್ದರು.
ದೊಡ್ಡಬಳ್ಳಾಪುರ ತಾಲೂಕಿನ ಸಾಸಲು ಹೋಬಳಿ ಶ್ರೀರಾಮನಹಳ್ಳಿ ಗ್ರಾಮದಲ್ಲಿ ಜನಿಸಿದ ಚಿನ್ನು ಪ್ರಕಾಶ್ ಶ್ರೀರಾಮನಹಳ್ಳಿ ಅವರು ಸಂಪಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಎಎಸ್‌ಐ ಆಗಿದ್ದರು ಕೂಡ ಗಾಯಕರಾಗಿ, ರಂಗಭೂಮಿ ಕಲಾವಿದರಾಗಿ ಹಾಗೂ ಸಾಹಿತಿಯಾಗಿ ಕಲಾದೇವಿಯ ಸೇವೆ ಸಲ್ಲಿಸುತ್ತಿದ್ದಾರೆ.