ಬೆಂಗಳೂರು: ವಿರೋಧ ಪಕ್ಷದ ನಾಯಕ ಆರ್ ಅಶೋಕ (R Ashoka) ಅವರು ರಾಜ್ಯ ಸರ್ಕಾರ ಸಾರಿಗೆ ಬಸ್ ಟಿಕೆಟ್ ದರ ಹೆಚ್ಚಳದ ಪ್ರತಿಭಟನೆ ಸಂದರ್ಭದಲ್ಲಿ ಪೊಲೀಸ್ ಅಧಿಕಾರಿಗಳ ಕುರಿತು ತಾಳ್ಮೆ ಕಡೆದುಕೊಂಡು, ಅತಿರೇಕದ ಮಾತುಗಳನ್ನಾಡಿ ಜನರ ಆಕ್ರೋಶ ಒಳಗಾಗಿದ್ದಾರೆ.
ಇಂದು ನಗರದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಸಾರಿಗೆ ಟಿಕೆಟ್ ದರ ಶೇ.15 ರಷ್ಟು ಹೆಚ್ಚಳ ಖಂಡಿಸಿ ಆರ್.ಅಶೋಕ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ವಿರೋಧ ಪಕ್ಷದ ನಾಯಕರಾದ ಆರ್ ಅಶೋಕ್ ಅವರು, ಪೊಲೀಸ್ ಅಧಿಕಾರಿಗಳ ಮೇಲೆ ಗರಂ ಆಗಿರುವ ಘಟನೆ ನಡೆದಿದೆ. ಮಾತ್ರವಲ್ಲ ಏಕವಚನದಲ್ಲಿ ನಿಂದಿಸುವ ಮೂಲಕ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದ್ದಾರೆ.
ಪ್ರತಿಭಟನೆ ತಡೆಯಲು ಬಂದ ಅಧಿಕಾರಿಗಳಿಗೆ ಬೈದ ಆರ್.ಅಶೋಕ್, ನನ್ನ ತಳ್ಳೋದು ಮಾಡಿದ್ರೆ ಹುಷಾರ್, ಏಯ್ ಬರ್ಕೊಡೋ, ಏಯ್ ಹೊಡಿತಿಯಾ ಹೊಡಿ, ಕೊಡ್ರಿ ಲಾಟಿ, ಏಯ್ ನಾಟಕ ಆಡ್ತಾ ಇದ್ಯಾ..
ಏ ಹುಷಾರ್ ಇದೆ ಸರ್ಕಾರ ಇರಲ್ಲ ನಿಮ್ ಹೆಸರೆಲ್ಲ ನೋಟ್ ಮಾಡ್ಕೋತೀನಿ ಎನ್ನುವ ಮೂಲಕ ಬೆದರಿಸಿರುವ ಆರ್ ಅಶೋಕ್ ತಡೆಯಲು ಮುಂದಾದ ಪೊಲೀಸ್ ಅಧಿಕಾರಿಗಳನ್ನು ತಳ್ಳಿದ ಘಟನೆಯೂ ನಡೆದಿದೆ.
ಇದರ ಬೆನ್ನಲ್ಲೇ ಕಾಂಗ್ರೆಸ್ ವಿಡಿಯೋ ಒಂದನ್ನು ಟ್ವಿಟ್ ಮಾಡಿದ್ದು, ಅಶೋಕ್ ಅವರೇ ವಿಪಕ್ಷ ನಾಯಕರಾಗಿಬಿಟ್ಟರೆ ಕರ್ತವ್ಯದಲ್ಲಿರುವ ಪೊಲೀಸ್ ಅಧಿಕಾರಿಗೆ ಅವಾಚ್ಯವಾಗಿ ನಿಂದಿಸಬಹುದೇ? ಅವರ ತಾಯಿ ಬಗ್ಗೆ ಪದ ಬಳಕೆ ಎಷ್ಟು ಸರಿ ಎಂದು ಕಾಂಗ್ರೆಸ್ ಘಟನೆಯ ವಿಡಿಯೋವನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡುವ ಮೂಲಕ ಟೀಕಿಸಿದೆ.
ಗೂಂಡಾಗಿರಿ ವಿಪಕ್ಷ ನಾಯಕನ ಕೆಲಸವೇ? ನಾಲಿಗೆ ಸಂಸ್ಕಾರ ಹೇಳುತ್ತದೆ, ಸಿ.ಟಿ.ರವಿ ನಂತರ ಈಗ ನಿಮ್ಮ ಸರದಿಯೇ? ನೀವು ವಿರೋಧಪಕ್ಷ ನಾಯಕನಾಗಿ ಉಳಿಯಲು ಅರ್ಹರಲ್ಲ ಎಂಬುವುದನ್ನು ನಿಮ್ಮ ನಡತೆ ಹೇಳುತ್ತಿದೆ. ಸಂಸ್ಕೃತಿ, ಸಂಸ್ಕಾರದ ಬಗ್ಗೆ ಮಾರುದ್ದದ ಭಾಷಣ ಬಿಗಿಯುವ ನಿಮ್ಮ ನಾಯಕರ ಹೊಲಸು ನಾಲಿಗೆಯನ್ನು ಯಾವ ಫೆನಾಯಿಲ್‌ನಿಂದ ತೊಳೆಯಬೇಕು ಎಂದು ಕೈಪಡೆ ಪ್ರಶ್ನಿಸಿದೆ.
ಅಲ್ಲದೆ ಮಹಿಳೆಯರ ಬಗ್ಗೆ ಬಿಜೆಪಿ ನಾಯಕರಿಗೆ ಎಂತಹಾ ಭಾವನೆ ಇದೆ ಎಂಬುದಕ್ಕೆ ಅವರ ನಾಲಗೆಯೇ ಸಾಕ್ಷಿ ಹೇಳುತ್ತಿದೆ!
ಪರಿಷತ್ ಕಲಾಪದಲ್ಲೇ ಮಹಿಳಾ ಸಚಿವರನ್ನು ಅವಾಚ್ಯವಾಗಿ ನಿಂಧಿಸಿದ ಸಿಟಿ ರವಿ ನಂತರ ಈಗ ವಿಪಕ್ಷ ನಾಯಕ ಆರ್ ಅಶೋಕ್ ತನ್ನ ನಾಲಗೆ ಹರಿಬಿಟ್ಟು ‘ಸ್ತ್ರೀ ಕುಲ’ವನ್ನು ಅಪಮಾನಿಸಿದ್ದಾರೆ ಎಂದು ಕಿಡಿಕಾರಿದೆ.
ನೀವು ಹೇಳುವ ‘ಹಿಂದುತ್ವ’ ಇದೇನಾ? ಅಥವಾ ಮನುಸ್ಮೃತಿಯ ಪ್ರಭಾವವೇ ಬಿಜೆಪಿ ಎಂದು ಪ್ರಶ್ನಿಸಿದೆ.