ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ಚತುರ್ಥಿ ಡಿ.03.2025 ಶುಕ್ರವಾರ ವಿಶೇಷವಾಗಿ ಮಹಾಲಕ್ಷ್ಮಿ ಅಮ್ಮನವರ ಪೂಜೆಯಿಂದ ದಿನ ಶುರು ಮಾಡಿ ಎಲ್ಲ ಕಾರ್ಯದಲ್ಲೂ ಜಯವಾಗುತ್ತದೆ. (astrology)
ಮೇಷ ರಾಶಿ: ಚಿಂತೆ ಧನಾಗಮನದಲ್ಲಿ ವ್ಯತ್ಯಾಸ, ಕಿರಿಕಿರಿ, ಉತ್ಸಾಹ ಕಮ್ಮಿ. ವಿದ್ಯಾಭ್ಯಾಸದಲ್ಲಿ ಕೊರತೆ, ನಿರ್ಧಾರಗಳು ಒಳ್ಳೆಯದಲ್ಲ, ಯೋಚಿಸಿ ಕಾರ್ಯವನ್ನು ಮಾಡಿ. (ಪರಿಹಾರಕ್ಕಾಗಿ ಧೈರ್ಯ ಲಕ್ಷ್ಮಿ ಅಮ್ಮನವರಿಗೆ ಕೆಂಪು ಹೂಗಳಿಂದ ಪೂಜೆ ಮಾಡಿ)
ವೃಷಭ ರಾಶಿ: ಮನೆಯಲ್ಲಿ ಒಳ್ಳೆಯ ಕಾರ್ಯಗಳು ಜರುಗುತ್ತದೆ. ಎಲ್ಲರೂ ಖುಷಿಯಾಗುತ್ತಾರೆ, ಸಂತೋಷದ ಕ್ಷಣಗಳನ್ನು ಅನುಭವಿಸುತ್ತೀರಿ, ಜೊತೆಗೆ ನೆಮ್ಮದಿ ಆರೋಗ್ಯ, ಭಯ ನಾಶ. (ಪರಿಹಾರಕ್ಕಾಗಿ ಹಾದಿಲಕ್ಷ್ಮಿ ಅಮ್ಮನವರನ್ನು ಬಿಳಿಯ ಹೂಗಳಿಂದ ಪೂಜೆ ಮಾಡಿ)
ಮಿಥುನ ರಾಶಿ: ಸಂಸ್ಕಾರವಂತರಾಗಿ ಧರ್ಮ ನಿರತವಾಗಿ ಬಾಳುವುದು ಸ್ವಲ್ಪ ಕಷ್ಟವಾಗುತ್ತದೆ. ಕೋಪಿಗಳಾಗಬೇಡಿ ಅದರಿಂದ ಕೇಡಾಗುತ್ತದೆ, ಧನಾರ್ಜನೆಯಲ್ಲಿ ಸ್ವಲ್ಪ ಕಷ್ಟ. ಅತಿಯಾದ ಮಾತು ನಿಮಗೆ ತೊಂದರೆ. (ಪರಿಹಾರಕ್ಕಾಗಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ )
ಕಟಕ ರಾಶಿ: ಎಲ್ಲಾ ಕಾರ್ಯದಲ್ಲೂ ವಿಶೇಷವಾದ ಜಯ. ಎಲ್ಲರಿಂದಲೂ ಸಹ ಸನ್ಮಾನದ ಮಾತುಗಳು, ಭಯ ಜೊತೆಗೆ ಉತ್ಸಾಹ ಅತಿಯಾದ ಆಲೋಚನೆ. ಜಾಗೃತಿ, ಬುದ್ಧಿಶಕ್ತಿಯತ್ತ ಮನಸ್ಸಿನ ಪ್ರವಾಹ. (ಪರಿಹಾರಕ್ಕಾಗಿ ಹನುಮಂತನ ದೇವಾಲಯದಲ್ಲಿ ಪೂಜೆ ಮಾಡಿಸಿ)
ಸಿಂಹ ರಾಶಿ: ಎಲ್ಲ ಕಾರ್ಯದಲ್ಲೂ ಶತ್ರುಗಳ ನಾಶ ಶುದ್ರವಾಗಿ ಮನಸ್ಸು ಅನುಕೂಲ. ದ್ವೇಷಿಸುವವರು ನಿಮಗೆ ಅನುಕೂಲವನ್ನು ಮಾಡಿಕೊಡುತ್ತಾರೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯಭಾರಾಯಣ ಮಾಡಿಸಿ)
ಕನ್ಯಾ ರಾಶಿ: ಕೇಳಿದ ನಾನಾ ವಿಷಯಗಳು ಸುಳ್ಳು ಎಂಬ ಮನಸ್ಥಿತಿ, ಉದ್ವೇಗ. ಆಲೋಚನೆಗಳಿಗೆ ಕೊನೆಯಿಲ್ಲ. ಆದರೆ ಅದರ ಮೇಲೆ ನಿಮ್ಮ ಪ್ರಯಾಣ ಯೋಚಿಸಿ ಕಾರ್ಯದತ್ತ ಮುಖ ಮಾಡಿ. (ಪರಿಹಾರಕ್ಕಾಗಿ ಹನುಮಂತನ ಸ್ಮರಣೆ ಮಾಡಿ)
ತುಲಾ ರಾಶಿ: ಮಾಡಬೇಕೆಂಬ ಉತ್ಸಾಹ. ಆದರೆ ಆ ಕಾಲು ಎಳೆಯುವವರು ಸಂಖ್ಯೆ ತೀರ ಜಾಸ್ತಿ. ಹೆಜ್ಜೆಯನ್ನು ಹಿಂದೆ ತೆಗೆದುಕೊಳ್ಳಬೇಡಿ, ಯೋಚಿಸಿ ಕಾರ್ಯಯೋನ್ಮುಖರಾಗಿ. ಒಳ್ಳೆಯ ಕಾರ್ಯಗಳಿಗೆ ಭಗವಂತ ಸಂಪೂರ್ಣ ಬೆಂಬಲ ಕೊಡುತ್ತಾನೆ ಚಿಂತಿಸಬೇಡಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಶ್ರೀ ಸೂಕ್ತ ಪಾರಾಯಣ ಮಾಡಿಸಿ)
ವೃಶ್ಚಿಕ ರಾಶಿ: ಕಠಿಣ ಸಾಧನೆಯಿಂದ ಮನಸ್ಸನ್ನು ನಿಗ್ರಹಿಸಬಹುದು ಆದರೆ ಅವಕಾಶಗಳಿಗೆ ಕಾಯಿರಿ ಇಲ್ಲವಾದರೆ ತೊಂದರೆಗೆ ಸಿಕ್ಕುತ್ತೀರಿ. (ಗಣಪತಿಯ ದೇವಾಲಯದಲ್ಲಿ ಪೂಜೆ ಮಾಡಿ)
ಧನಸ್ಸು ರಾಶಿ: ಯತ್ನ ಕಾರ್ಯ ಅನುಕೂಲ, ತಿರುಗಾಟ ಜಾಸ್ತಿ, ಚೆನ್ನಾಗಿ ಓಡಾಡಬೇಕು, ಜೊತೆಗೆ ಹೋರಾಟವು ಅಗತ್ಯ. ಮಾತಿನಲ್ಲಿ ಹಿಡಿತವಿರಲಿ ಇಲ್ಲವಾದರೆ ಶತ್ರುಗಳು ಜಾಸ್ತಿ ಆಗುತ್ತಾರೆ. (ಪರಿಹಾರಕ್ಕಾಗಿ ಮಹಾಸರಸ್ವತಿಯ ಸ್ತೋತ್ರಗಳನ್ನು ಮಾನನ ಮಾಡಿ)
ಮಕರ ರಾಶಿ: ಪೂರ್ಣವಾಗಿ ಧೈರ್ಯ ಸ್ಥೈರ್ಯದಿಂದ ಮನಸ್ಸು ಉಲ್ಲಾಸಿತವಾಗುತ್ತದೆ. ಮಾಡಬೇಕಾದ ಕಾರ್ಯ, ಅರ್ಧಕ್ಕೆ ನಿಂತ ಕಾರ್ಯ ಎಲ್ಲವೂ ಯಶಸ್ವಿಯಾಗುತ್ತದೆ. ಒಂದು ರೀತಿಯಲ್ಲಿ ಅನುಕೂಲ ಆದರೆ ಮನಸ್ಸಿನಲ್ಲಿ ಒಂದು ಆಳವಾದ ಚಿಂತೆ ಕೊರೆಯುತ್ತಿದೆ ಅದರಿಂದ ಹೊರಬರಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಶಿವನ ದೇವಸ್ಥಾನದಲ್ಲಿ ಅಭಿಷೇಕ ಮಾಡಿಸಿ)
ಕುಂಭ ರಾಶಿ: ಎಂದೋ ಯಾವಾಗಲೂ ಆಗಿ ಹೋದ ವಿಚಾರ ಈಗ ಮನಸ್ಸಿಗೆ ಬಾದೆಯನ್ನು ಕೊಡುತ್ತಿದೆ. ಅದರಿಂದ ಹೊರಬರಲು ಪ್ರಯತ್ನ ಮಾಡಿ ಪಶ್ಚಾತಾಪವೇ ಮೂಲ, ಅನುಕೂಲವಾಗುತ್ತದೆ ಚಿಂತಿಸಬೇಡಿ. (ಪರಿಹಾರಕ್ಕಾಗಿ ಗಣಪತಿ ಸ್ತೋತ್ರಗಳನ್ನು ಓದಿ)
ಮೀನ ರಾಶಿ: ಏನೋ ಮಾಡಲು ಹೋಗಿ ಒಂದೊಂದು ಬಾರಿ ಏನೇನೋ ಅನಾಹುತಗಳು ಆಗುತ್ತವೆ, ಎಚ್ಚರಿಕೆ ದೃಢವಾದ ನಿರ್ಧಾರ ಕಾರ್ಯಸಾಧನೆ ಬಹಳ ಮುಖ್ಯ. ಅಂತಸತ್ವವನ್ನು ಜಾಗೃತ ಮಾಡಿ, ಇಲ್ಲವಾದರೆ ಸಮಸ್ಯೆಗೆ ಸಿಗುತ್ತೀರಿ. ಒಂದೇ ಮನಸ್ಸಿನಿಂದ ಕೆಲಸ ಕಾರ್ಯಗಳು ಮಾಡಿದರೆ ಯಶಸ್ಸು ಆಗುತ್ತದೆ. (ಪರಿಹಾರಕ್ಕಾಗಿ ಅಮ್ಮನವರ ಪೂಜೆ ಆರಾಧನೆ ಮಾಡಿ ಶುಭವಾಗುತ್ತದೆ )
ರಾಹುಕಾಲ: 10-30AM ರಿಂದ 12-00PM
ಗುಳಿಕಕಾಲ: 7-30AM ರಿಂದ 9-00 AM
ಯಮಗಂಡಕಾಲ: 3-00PMರಿಂದ 4-30PM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572.