ದೊಡ್ಡಬಳ್ಳಾಪುರ: ಹೊಸ ವರ್ಷ ಸಂಭ್ರಮಾಚರಣೆ ಮುಗಿಸಿ ಬರುವ ವೇಳೆ ಸಂಭವಿಸಿದ್ದ ಅಪಘಾತದಲ್ಲಿ (Accident) ತೀವ್ರವಾಗಿ ಗಾಯಗೊಂಡಿದ್ದ. ಮೂವರಲ್ಲಿ ಓರ್ವ ಸಾವನಪ್ಪಿದ್ದು, ಮತ್ತಿಬ್ಬರಿಗೆ ಚಿಕಿತ್ಸೆ ಮುಂದುವರಿದಿದೆ.
ಮೃತರನ್ನು ಕಚೇರಿ ಪಾಳ್ಯದ ನಿವಾಸಿ ಶಿವಕುಮಾರ್ ಎಂದು ತಿಳಿದು ಬಂದಿದೆ.
ಮಂಗಳವಾರ ರಾತ್ರಿ 12.45 ರ ಸುಮಾರಿಗೆ ಶಾಂತಿನಗರ ಮುಖ್ಯ ರಸ್ತೆಯ ಕಚೇರಿಪಾಳ್ಯದ ಸಮೀಪ ಎರಡು ದ್ವಿಚಕ್ರ ವಾಹನಗಳ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿತ್ತು.
ಘಟನೆಯಲ್ಲಿ ಕಚೇರಿ ಪಾಳ್ಯದ ನಿವಾಸಿಗಳಾದ ಗಜೇಂದ್ರ ಹಾಗೂ ಶಿವಕುಮಾರ್, ಅರೆಗುಡ್ಡದಹಳ್ಳಿ ಪ್ರಮೋದ್ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದರು.
ಕೂಡಲೇ ಶಿವಕುಮಾರ್ ಅವರನ್ನು ನಗರದ ಖಾಸಗಿ ಆಸ್ಪತ್ರೆಗೆ, ಗಜೇಂದ್ರ ಅವರನ್ನು ನಿಮಾನ್ಸ್ ಆಸ್ಪತ್ರೆಗೆ, ಪ್ರಮೋದ್ ಅವರನ್ನು ಬ್ಯಾಟರಾಯನ ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಶಿವಕುಮಾರ್ ಸಾವನಪ್ಪಿದ್ದಾರೆಂದು ಪೊಲೀಸ್ ಮೂಲಗಳು ತಿಳಿಸಿವೆ.
ಘಟನೆ ಕುರಿತು ದೊಡ್ಡಬಳ್ಳಾಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.