Site icon ಹರಿತಲೇಖನಿ

Crime news: ಮಗನಿಗೆ ಹೆಣ್ಣು ತೋರಿಸುವುದಾಗಿ ನಂಬಿಸಿ ಮಾಂಗಲ್ಯ ಸರ ಕಸಿದು ಪರಾರಿ..!

ಮಧುಗಿರಿ (Crime news): ಮಗನಿಗೆ ಹೆಣ್ಣು ತೋರಿಸುವುದಾಗಿ ನಂಬಿಸಿ ಮಹಿಳೆಯನ್ನು ಮನೆಗೆ ಕರೆದುಕೊಂಡು ಹೋದ ದುಷ್ಕರ್ಮಿಯೋರ್ವ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಮಾಂಗಲ್ಯ ಸರ ಕಸಿದು ಪರಾರಿಯಾಗಿರುವ ಘಟನೆ ಮಾರುತಿ ನಗರದಲ್ಲಿ ನಡೆದಿದೆ.

ಮಾರುತಿ ನಗರದ ನಿವಾಸಿಯಾದ ನಾಗಮ್ಮ (62 ವರ್ಷ) ಚಿನ್ನದ ಸರ ಕಳೆದುಕೊಂಡವರು.

ಅದೇ ಮಾರುತಿ ನಗರದ ನಿವಾಸಿ ನಂಜಪ್ಪ ಸರ ಕಸಿದು ಪರಾರಿಯಾಗಿರುವ ವ್ಯಕ್ತಿ.

ನಾಗಮ್ಮ ಅವರನ್ನು ತನ್ನ ಮನೆಯೊಳಗೆ ಕರೆದುಕೊಂಡು ಹೋಗಿ ನಮ್ಮ ಮನೆಯ ವಾಸ್ತು ತೋರಿಸುವ ನೆಪದಲ್ಲಿ ಮಹಿಳೆಯ ಕೊರಳಲ್ಲಿದ್ದ ಚಿನ್ನದ ಸರವನ್ನು ಕಸಿದುಕೊಂಡು, ಆಕೆಯನ್ನು ನೇಣು ಬಿಗಿಯಲು ಯತ್ನಿಸುವಾಗ ಮಹಿಳೆಯ ಚೀರಾಟದಿಂದಾಗಿ ಅಕ್ಕ – ಪಕ್ಕದ ಮನೆಯವರು ಸ್ಥಳಕ್ಕೆ ಬಂದು ಕೊರಳಲ್ಲಿದ್ದ ಹಗ್ಗವನ್ನು ತೆಗೆದು ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.

ಆರೋಪಿ ನಂಜಪ್ಪ ಘಟನಾ ಸ್ಥಳದಿಂದ ಪರಾರಿಯಾಗಿದ್ದಾನೆ.

ಮಧುಗಿರಿ ಪಿಎಸ್‌ಐ ವಿಜಯಕುಮಾ‌ರ್ ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Exit mobile version