ಶ್ರೀ ಕ್ರೋಧಿನಾಮ ಸಂವತ್ಸರ ಪುಷ್ಯ ಶುಕ್ಲ ತದಿಗೆ ದಿನಾಂಕ 2-1- 2025 ಗುರುವಾರ ವಿಶೇಷವಾಗಿ ಗುರು ದತ್ತಾತ್ರೇಯರ ಆರಾಧನೆಯನ್ನು ಮಾಡಿ ಬಿಳಿಯ ಹೂಗಳಿಂದ ಗುರುಗಳಿಗೆ ಅರ್ಜಿಸಿ ಎಲ್ಲ ಕಾರ್ಯಗಳಲ್ಲೂ ಜಯ ಸಂಭವಿಸುತ್ತದೆ. Astrology
ಮೇಷ ರಾಶಿ: ಸ್ವಲ್ಪ ಆರೋಗ್ಯದಲ್ಲಿ ಚಿಂತೆ, ಅನಾವಶ್ಯಕ ಕಿರಿಕಿರಿ, ಉತ್ಸಾಹ ಕಮ್ಮಿ, ಎಲ್ಲವನ್ನು ಸಾಧಿಸಬೇಕೆಂಬ ಛಲ, ಆಟ ಇದರಿಂದ ಸ್ವಲ್ಪ ತೊಂದರೆಗೊಳಗಾಗುತ್ತೀರಿ ಎಚ್ಚರಿಕೆಯಿಂದ ವರ್ತಿಸಿ. (ಪರಿಹಾರಕ್ಕಾಗಿ ರಾಮರಕ್ಷಾ ಸ್ತೋತ್ರವನ್ನು ಪಾರಾಯಣ ಮಾಡಿ)
ವೃಷಭ ರಾಶಿ: ಈಶ್ವರಿಯ ಅನುಗ್ರಹದಿಂದ ಎಲ್ಲಾ ಕಾರ್ಯವು ಸಹ ಸಾಧ್ಯ. ಸಾಧಿಸುವ ಮನೋದೈರ್ಯವನ್ನು ಮಾಡಿ ನಿರ್ವಿಘ್ನವಾಗಿ ಸಾಧನೆಗೆ ಎಲ್ಲ ಫಲಗಳು ದೊರಕುತ್ತವೆ. ಧನಾರ್ಜನೆ ಮನಸ್ಸಿನಲ್ಲಿ ನೆಮ್ಮದಿ, ಪ್ರಶಾಂತತೆ ಉಂಟಾಗುತ್ತದೆ. (ಪರಿಹಾರಕ್ಕಾಗಿ ಮಹಾಗಣಪತಿಯ ಪೂಜೆಯನ್ನು ಮಾಡಿ)
ಮಿಥುನ ರಾಶಿ: ಅತಿಥಿ ಅಭ್ಯಾಗತರ ಸೇವೆಯನ್ನು ಮಾಡಿ. ಧನಾರ್ಜನೆ ಸ್ವಲ್ಪ ಹಿನ್ನಡೆ, ಜ್ಞಾನಿಗಳನ್ನು ಆಧರಿಸಿ ನಮಸ್ಕರಿಸಿ, ಅನ್ನದಾನವನ್ನು ಮಾಡಿ, ಸ್ಥಿರವಾದ ಭೋಗ ಭಾಗ್ಯಗಳು. (ಪರಿಹಾರಕ್ಕಾಗಿ ಗುರು ದತ್ತಾತ್ರೇಯರ ಪೂಜೆಯನ್ನು ಮಾಡಿ)
ಕಟಕ ರಾಶಿ: ವಿಚಾರಗಳ ಮೇಲೆ ಹಿಡಿತ ಇರಲಿ, ಯಾವುದೇ ವಿಚಾರವಿದ್ದರೂ ಆಲೋಚಿಸಿ ಮಾತನಾಡಿ. ದಿನೇ ದಿನೇ ಭಾದೆಯು ನಿವಾರಣೆ ಯಾಗುತ್ತದೆ. ಹರ್ಷ ಚಿತ್ತರಾಗಿರಿ ಮನಸ್ಸನ್ನು ಶಾಂತವಾಗಿರಿಸಲು ಪ್ರಯತ್ನ ಮಾಡಿ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಯ ಪೂಜೆಯನ್ನು ಮಾಡಿ )
ಸಿಂಹ ರಾಶಿ: ಎಲ್ಲಾ ಕಾರ್ಯದಲ್ಲೂ ದಕ್ಷತೆ ಬಹಳ ಮುಖ್ಯ. ಚೆನ್ನಾಗಿ ಯೋಚಿಸಿ, ಅನುಭವಿಸಿ, ಚಿಂತಿಸಿ. ಅರ್ಥ ಮಾಡಿಕೊಂಡು ಮಾತನಾಡಿ. ಭವಿಷ್ಯದಲ್ಲಿ ನಿಮ್ಮ ಮಾತೆ ನಿಮಗೆ ಕಂಟಕವಾಗಬಹುದು ಎಚ್ಚರ. (ಪರಿಹಾರಕ್ಕಾಗಿ ಅಮ್ಮನವರ ಸ್ತೋತ್ರವನ್ನು ಪಾರಾಯಣ ಮಾಡಿ)
ಕನ್ಯಾ ರಾಶಿ: ವಿಪರೀತ ಬುದ್ಧಿ ಚಾತುರ್ಯ ಅಷ್ಟೊಂದು ಅನುಕೂಲವಲ್ಲ. ಎಲ್ಲ ವಿಷಯದಲ್ಲೂ ತನ್ನದೇ ಆದಂತ ಜಾಗರೂಕತೆ ಬೇಕಾಗುತ್ತದೆ. ಎಚ್ಚರಿಕೆ ಮತ್ತು ತೀವ್ರವಾದ ಅನುಸರಣೆ ಮಾಡಬೇಕು. (ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಕೇಳಿಸಿಕೊಳ್ಳಿ)
ತುಲಾ ರಾಶಿ: ಕೋಪ ಬೇಡ, ಸಮಯ ಆನಂದದಾಯಕವಾಗಿದೆ. ಮನಸ್ಸನ್ನು ಪ್ರಶಾಂತತೆಯ ಕಡೆ ತಲುಪಿಸಲು ಪ್ರಯತ್ನಿಸಿ. ಬೋಧನೆ ಮಾಡುವುದು ಸುಲಭ ಅನುಸರಣೆ ಮಾಡುವುದು ಬಹಳ ಕಷ್ಟ, ಎಂಬ ವಿಚಾರ ಮನದಟ್ಟಾಗಿರುತ್ತದೆ. ಯತ್ನ ಕಾರ್ಯದಲ್ಲಿ ಸ್ವಲ್ಪ ಜಯ. (ಪರಿಹಾರಕ್ಕಾಗಿ ಮಹಾಲಕ್ಷ್ಮಿ ಅಷ್ಟಕವನ್ನು 18 ಬಾರಿ ಓದಿ)
ವೃಶ್ಚಿಕ ರಾಶಿ: ಸಾಧನೆಯುಕ್ತ ಮನಸ್ಸನ್ನು ತಲುಪಿಸಲು ಪ್ರಯತ್ನಿಸಬೇಕು. ಮನಸ್ಸು ನಾನಾ ವಿಕಾರಗಳಿಗೆ ವಾಲುತ್ತದೆ. ಎಲ್ಲ ಕಾರ್ಯದಲ್ಲೂ ಮನಸ್ಸನ್ನು ತೊಡಗಿಸಿ, ಇಲ್ಲವಾದರೆ ಜಯ ಅಪಜಯವಾಗುತ್ತದೆ. ಧನಾರ್ಜನೆ ಇಲ್ಲ ವ್ಯಾಪಾರದಲ್ಲಿ ನಷ್ಟ ಎಚ್ಚರಿಕೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯ ಪಾರಾಯಣ ಮಾಡಿ)
ಧನಸ್ಸು ರಾಶಿ: ಅಧಿಕವಾದ ತಿರುಗಾಟ, ಕೆಲವು ನೋವಿನ ವಿಚಾರಗಳು, ದಾನದ ಬಗ್ಗೆ ಸ್ವಲ್ಪ ಆಲೋಚನೆ. ಮನಸ್ಸಿನ ವಿಕಾರ ಎಲ್ಲವೂ ಇದ್ದರೂ ನಾನು ಎಂಬ ಸಣ್ಣ ಅಲಂಕಾರ ಇದರಿಂದ ಕಷ್ಟ ನಷ್ಟಗಳು ಅನುಭವಿಸಬೇಕಾಗುತ್ತದೆ. (ಪರಿಹಾರಕ್ಕಾಗಿ ತಿರುಪತಿ ಕ್ಷೇತ್ರಕ್ಕೆ ಭೇಟಿ ಕೊಡಿ)
ಮಕರ ರಾಶಿ: ಅತ್ಯಂತ ಜ್ಞಾನವಿದ್ದರೂ ಅಹಂಕಾರದ ಪ್ರಕೃತಿ, ಸ್ವಾಭಿಮಾನಕ್ಕಿಂತ ನಾನು ಎನ್ನುವುದು ವಿಪರೀತ ಇದರಿಂದ ತೊಂದರೆ ಜಾಸ್ತಿ ಆಗುತ್ತದೆ. ಕೆಲವು ತೊಂದರೆಗಳು ಅದರಿಂದ. ಅನಿಷ್ಟ ಆಚರಣೆಗೆ ಮನಸ್ಸು ಹೋಗುತ್ತದೆ, ವಿದ್ಯಾರ್ಜನೆ ಧನಾರ್ಜನೆ ಎಲ್ಲವೂ ಶೂನ್ಯವಾಗುತ್ತದೆ. (ಪರಿಹಾರಕ್ಕಾಗಿ ಶಿವನ ಪೂಜೆ ಮಾಡಿ)
ಕುಂಭ ರಾಶಿ: ಅಂದ ಮಾತುಗಳು ಹಿಂದೆ ತೆಗೆದುಕೊಳ್ಳಲಾಗುವುದಿಲ್ಲ, ಅನಾವಶ್ಯಕವಾಗಿ ಮಾತನಾಡುವುದು ಕಮ್ಮಿ ಮಾಡಿ. ಎಲ್ಲರನ್ನೂ ಪ್ರೀತಿಸಿ, ಎಲ್ಲರೊಳಗೆ ಒಂದಾಗಿ ನೀವು ಸುಖವಾಗಿ ಇರುತ್ತೀರ. (ಪರಿಹಾರಕ್ಕಾಗಿ ಮನೆಯಲ್ಲಿ ನವಗ್ರಹ ಪೂಜೆ ಮಾಡಿಸಿ)
ಮೀನ ರಾಶಿ: ನಾನಾ ರೀತಿಯಲ್ಲಿ ಯೋಚನೆ, ಒಳ್ಳೆಯ ಮನಸ್ಸಿದ್ದರೂ ವಿವೇಕದ ಚಿಂತೆ ತೀರ ಕಮ್ಮಿ, ಮನಸ್ಸನ್ನು ದೃಢವಾದ ನಿರ್ಧಾರದ ಕಡೆಗೆ ತಿರುಗಿಸಿ ಇಲ್ಲವಾದರೆ ಅಹಿತಕರ ಘಟನೆ ನಡೆಯುತ್ತದೆ. ಎಚ್ಚರಿಕೆ ಬಹಳ ಅಗತ್ಯ, ಯಾರನ್ನು ಅವಹೇಳನ ಮಾಡಬೇಡಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಸಿದ್ದಲಕ್ಷ್ಮಿ ಸ್ತೋತ್ರ ಪಾರಾಯಣ ಮಾಡಿ)
ರಾಹುಕಾಲ: 1-30PM ರಿಂದ 3-00PM
ಗುಳಿಕಕಾಲ: 9-00AM ರಿಂದ 10-30 AM
ಯಮಗಂಡಕಾಲ: 6-00AMರಿಂದ 7-30AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ, ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572