ದೊಡ್ಡಬಳ್ಳಾಪುರ (Doddaballapura): ತಾಲೂಕು ಕೃಷಿಕ ಸಮಾಜದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರತಿನಿಧಿಯಾಗಿ ಅಶೋಕ್ ಬಿಎಂ ಅವರು ಅವಿರೋಧವಾಗಿ ಆಯ್ಕೆಯಾದರು.
ಇಂದು ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ದೊಡ್ಡಬಳ್ಳಾಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಮುರುಳಿಧರ್ ಆರ್., ಉಪಾಧ್ಯಕ್ಷರಾಗಿ ಅರಸೇಗೌಡ ಕೆಹೆಚ್., ಖಜಾಂಚಿಯಾಗಿ ಎ ಮುನಿಆಂಜಿನಪ್ಪ, ಪ್ರಧಾನ ಕಾರ್ಯದರ್ಶಿಯಾಗಿ ರಾಜಶೇಖರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಿ.ಮುನೇಗೌಡ ಅಭಿನಂದನೆ
ಕೃಷಿಕ ಸಮಾಜದ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪ್ರತಿನಿಧಿಯಾಗಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾರುವ ಅಶೋಕ್ ಬಿಎಂ ಮತ್ತು ರಾಜಶೇಖರ್ ಅವರನ್ನು ಬೆಂಗಳೂರು ಗ್ರಾಮಾಂತರ ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಿ.ಮುನೇಗೌಡ ಅಭಿನಂದಿಸಿದರು.
ಈ ವೇಳೆ ವಕೀಲರಾದ ಮುರುಳೀಧರ್, ಟಿಎಪಿಎಂಸಿಎಸ್ ಉಪಾಧ್ಯಕ್ಷ ಲಕ್ಷ್ಮೀನಾರಾಯಣ್, ಮುಖಂಡರಾದ ಗೌರೀಶ್, ಪುರುಷೋತ್ತಮ್, ಬಿಡೀಕೆರೆ ರವಿ, ಮುಕ್ಕೇನಹಳ್ಳಿ ಕುಮಾರ್, ಮುರುಳೀಧರ್, ಹಾಡೋನಹಳ್ಳಿ ನಾರಾಯಣಪ್ಪ, ಮುನೇಗೌಡ, ಜಗನಾಥ್ ಚಾರ್, ಕುಂಟನಹಳ್ಳಿ ಮಂಜುನಾಥ್, ಸುಣ್ಣಗಟ್ಟಹಳ್ಳಿ ಮಂಜುನಾಥ್, ಜೂಗೇನಹಳ್ಳಿ ಮಂಜುನಾಥ್, ಹರೀಶ್ ನಾಯಕ್, ಬಚ್ಚಹಳ್ಳಿ ನಾಗರಾಜ್, ತಳವಾರ್ ನಾಗರಾಜ್, ಎಲೆಪೇಟೆ ನಾಗರಾಜ್, ಬಚ್ಚಹಳ್ಳಿ ಶ್ರೀನಿವಾಸ್, ಮತ್ತಿತರರಿದ್ದರು.