ಹಾಸನ: ಹೊಸ ವರ್ಷಾಚರಣೆ ಹೊತ್ತ ಲ್ಲಿ ಮದ್ಯಪಾನ ಪ್ರಿಯರ ಹೋರಾಟ ಸಂಘ (Drinkers association) ಅಸ್ತಿತ್ವಕ್ಕೆ ಬಂದಿದೆ.
ಹಾಸನ ಜಿಲ್ಲೆ ಬೇಲೂರಿನಲ್ಲಿ ಮದ್ಯಪಾನ ಪ್ರಿಯರ ಹೋರಾಟ ಸಂಘದ ಕಚೇರಿ ಓಪನ್ ಮಾಡಲಾಗಿದೆ.
ಕಚೇರಿ ಮುಂದೆ ಕೇಕ್‌ಕತ್ತರಿಸಿ ಸಂಘಟನೆಗೆ ಚಾಲನೆ ನೀಡಲಾಗಿದೆ.
ಸರ್ಕಾರದ ಆದಾಯದ ಮೂಲ ಮದ್ಯಪಾನ ಪ್ರಿಯರಿಗೆ ಸೂಕ್ತ ಸೌಲಭ್ಯ ನೀಡುವಂತೆ ಎಂದು ಆಗ್ರಹಿಸಲಾಗಿದೆ.
ಇಂದು ವರ್ಷಾಂತ್ಯ ಹಿನ್ನೆಲೆಯಲ್ಲಿ ನೂತನ ಕಚೇರಿ ಉದ್ಘಾಟನೆ ಗೊಂಡಿದ್ದು, ಮದ್ಯಪಾನ ಪ್ರಿಯರಿಗೆ ಇನ್ಸೂರೆನ್ಸ್, ಬಾರ್ ಗಳಲ್ಲಿ ರೆಸ್ಟ್ ರೂಂ, ಮದ್ಯಪ್ರಿಯರ ಮಕ್ಕಳಿಗೆ ವಿದ್ಯಾರ್ಥಿ ವೇತನಕ್ಕೆ ಬೇಡಿಕೆಯನ್ನು ಇಡಲಾಗಿದೆ.
ಮದ್ಯಪ್ರಿಯರ ಹಲವು ಬೇಡಿಕೆ ಮುಂದಿಟ್ಟು ಸಂಘದ ತಾಲ್ಲೂಕು ಘಟಕ ಆರಂಭ ತೋಟೇಶ್ ಹೆಸರಿನ ವ್ಯಕ್ತಿಯೊಬ್ಬರು ಕುಡುಕರ ಸಂಘವನ್ನು ಸ್ಥಾಪಿಸಿದ್ದಾರೆ.