Site icon ಹರಿತಲೇಖನಿ

Death news| ನಿಧನ ವಾರ್ತೆ: ನಿವೃತ್ತ ಮುಖ್ಯಶಿಕ್ಷಕ ವೀರೇಗೌಡ

ದೊಡ್ಡಬಳ್ಳಾಪುರ (Death news); ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ಉಪಾಧ್ಯಕ್ಷ, ನಿವೃತ್ತ ಮುಖ್ಯೋಪಾಧ್ಯಾಯರಾದ ವೀರೇಗೌಡ ಅವರು ಇಂದು ನಿಧನರಾಗಿದ್ದಾರೆ. ಅವರಿಗೆ 97 ವರ್ಷ ವಯಸ್ಸಾಗಿತ್ತು.

ನರಸಿಂಹಯ್ಯನ ಅಗ್ರಹಾರ ಗ್ರಾಮದ ವೀರೇಗೌಡ ಅವರು ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದಾರೆ.

ಮೃತರು ಮಡದಿ ಪುಟ್ಟಮ್ಮ, ಮಕ್ಕಳು ಸೇರಿದಂತೆ, ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದು, ಅಂತ್ಯಕ್ರಿಯೆ ನಾಳೆ(ಜ.01) ಬೆಳಗ್ಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ವೀರೇಗೌಡ ಅಗಲಿಕೆಗೆ ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಮುನಿರಾಜು, ಜಿಲ್ಲಾ ಸಂಘದ ಅಧ್ಯಕ್ಷ ಕೆ.ಮಹಾಲಿಂಗಯ್ಯ ಕಾರ್ಯದರ್ಶಿ ಬಿ.ಎನ್ ಪ್ರಭಾಕರ್ ಕೆ.ಚನ್ನಪ್ಪ ಸಂತಾಪ ಸೂಚಿಸಿದ್ದಾರೆ.

Exit mobile version