Darshan Sudeep| ದಚ್ಚು-ಕಿಚ್ಚ ಅಭಿಮಾನಿಗಳ ನಡುವೆ ತಂದಿಟ್ಟ ಖಾಸಗಿ ಸುದ್ದಿ ವಾಹಿನಿ..! ಮಾತಲ್ಲೆ ಜಾಡಿಸಿದ ಕಿಚ್ಚ ಸುದೀಪ್

ಬೆಂಗಳೂರು (Darshan Sudeep): ಕನ್ನಡ ಚಿತ್ರರಂಗದ ಖ್ಯಾತನಟ ಸುದೀಪ್ ಅವರ ನಟನೆ ‘ಮ್ಯಾಕ್ಸ್’ ಸಿನಿಮಾ ಎಲ್ಲೆಡೆ ಯಶಸ್ವಿ ಪ್ರದರ್ಶನವಾಗುತ್ತಿದ್ದು, ಪ್ರೇಕ್ಷಕರಿಂದ ಉತ್ತಮ ಪಾಸಿಟಿವ್ ರೆಸ್ಪಾನ್ಸ್ ದೊರೆತಿದೆ. ಆ ಮೂಲಕ ವರ್ಷದ ಕೊನೆಯಲ್ಲಿ ಕಿಚ್ಚ ಸುದೀಪ್ ಯಶಸ್ಸು ಪಡೆದಿದ್ದಾರೆ.

ಆದರೆ ತಂದಿಟ್ಟು ತಮಾಷೆ ನೋಡುವುದನ್ನೇ ಕಾಯಕ ಮಾಡಿಕೊಂಡಿರುವ ಕೆಲ ಖಾಸಗಿ ಸುದ್ದಿ ವಾಹಿನಿಗಳು ಮ್ಯಾಕ್ಸ್ ಸಿನಿಮಾ ಬಿಡುಗಡೆ ಬೆನ್ನಲ್ಲೇ ದರ್ಶನ್ ಅಭಿಮಾನಿಗಳನ್ನು ಸುದೀಪ್ ವಿರುದ್ಧ ಎತ್ತಿಕಟ್ಟಲೆಂದು ಕೆಲ ವರದಿ ಪ್ರಸಾರ ಮಾಡಿದ್ದು, ಅಭಿಮಾನಿಗಳಿಂದ ಛೀಮಾರಿಗೆ ಒಳಗಾಗಿದಲ್ಲದೆ, ಸ್ವತಃ ನಟ ಸುದೀಪ್ ಅವರು ಕೂಡ ಮಾತಿನ ಮೂಲಕವೇ ಜಾಡಿಸಿದ್ದಾರೆ.

ಸಿನಿಮಾ ಯಶಸ್ಸಿನ ಸಂಭ್ರಮಾಚರಣೆ ವೇಳೆ ಕೇಕ್ಗೆ ಸಂಬಂಧಿಸಿದಂತೆ ಹಲವು ಅಂತೆಕಂತೆಗಳು ಕಟ್ಟಿದ ಸುದ್ದಿವಾಹಿನಿ ವಿರುದ್ಧ ವಾಗ್ದಾಳಿ ನಡೆಸಿರುವ ಸುದೀಪ್. ಇದಕ್ಕೆ ಸಂಬಂಧಿಸಿದಂತೆ ಸ್ಪಷ್ಟನೆ ನೀಡಿದ್ದಾರೆ.

ತಮ್ಮ ಸಿನಿಮಾ ಸಂಭ್ರಮದಲ್ಲಿ ಸುದೀಪ್ ಅವರು ಪತ್ನಿ ಮತ್ತು ತಮ್ಮವರೊಂದಿಗೆ ಸೇರಿ ಕೇಕ್ ಕತ್ತರಿಸಿದ್ದರು. ಆ ಕೇಕ್ ಮೇಲೆ ‘Bossism ಕಾಲ ಮುಗೀತು, Maximum Mass ಕಾಲ ಶುರುವಾಯ್ತು’ ಎಂದು ಬರೆಯಲಾಗಿತ್ತು. ಇದನ್ನು ದೊಡ್ಡ ವರದಿ ಮಾಡಿದ ಸುದ್ದಿವಾಹಿನಿ, ದರ್ಶನ್ ಕುರಿತಾಗಿಯೇ ಮಾಡಿದ್ದಾರೆ ಎಂಬಂತೆ ಅಭಿಮಾನಿಗಳ ನಡುವೆ ಬೆಂಕಿ ಹಚ್ಚಲು ಶುರುಮಾಡಿತು. ಈ ವಿಡಿಯೋಗಳು ವೈರಲ್ ಆದ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಪರ ವಿರೋಧದ ಅಭಿಪ್ರಾಯಗಳು ವ್ಯಕ್ತವಾಗಲು ಶುರುವಾಯಿತು.

ನಿನ್ನೆ ನಡೆದ ಮಾಧ್ಯಮದವರೊಂದಿಗಿನ ಸಂವಾದದಲ್ಲಿ ಸ್ವತಃ ಕಿಚ್ಚ ಸುದೀಪ್ ಅವರೇ ಈ ಬಗ್ಗೆ ಸ್ಪಷ್ಟನೆ ಕೊಟ್ಟಿದ್ದು, ಆ ರೀತಿ ಇಬ್ಬರು ಅಭಿಮಾನಿಗಳ ನಡುವೆ ವಿಷ ಬೀಜ ಬಿತ್ತಲು ಆರಂಭಿಸಿದ ಖಾಸಗಿ ಚಾನಲ್ ಹಾಗೂ ಅದರ ನಿರೂಪಕಿಯ ಹೆಸರೇಳದೆ ಮಂಗಳಾರತಿ ಮಾಡಿದರು.

ಸುದೀಪ್ ಹೇಳಿದ್ದಿಷ್ಟು; ದರ್ಶನ್ ಅವರಿಗೂ ನಂಗೂ ಏನೂ ಇಲ್ಲ ಸರ್. ಬಹಳ ಕಷ್ಟಪಟ್ಟು ಅವರು ಮೇಲೆ ಬಂದಿದ್ದಾರೆ. ಕನ್ನಡ ಚಿತ್ರರಂಗ ಬೆಳೆಯಬೇಕು. ಇವೆಲ್ಲಾ ಸಮಸ್ಯೆಗಳು ಬೇಡ” ಎಂದು ಸುದೀಪ್ ಮನವಿ ಮಾಡಿಕೊಂಡಿದ್ದಾರೆ.

ಆ ವಾಹಿನಿಯಲ್ಲಿ ಒಂದು ಕಲಾವಿದನ ಹೆಸರು ತೆಗೆದುಕೊಂಡು ಟಾಂಟ್ ಅಂತಾ ಹೇಳಿದ್ರು. ಹಾಗೆಲ್ಲಾ ಏನೂ ಇಲ್ಲ. ತಮ್ಮ ಮೆಚ್ಚಿನ ತಾರೆಯರಿಗೆ ಅಭಿಮಾನಿಗಳು ಬಾಸ್ ಅಂತಾನೆ ಉಲ್ಲೇಖಿಸುತ್ತಾರೆ. ”ಯಶ್, ಶಿವಣ್ಣ, ಧ್ರುವ ಇವರಿಗೆಲ್ಲರಿಗೂ ಅವರವರ ಫ್ಯಾನ್ಸ್ ಬಾಸ್ ಅಂತಾನೆ ಕರೆಯುತ್ತಾರೆ.

ಒಬ್ಬ ಸ್ನೇಹಿತ, ನನ್ನ ಹುಡುಗ ಬೆಳಗ್ಗೆ ಚಿತ್ರಮಂದಿರಕ್ಕೆ ಹೋಗ್ತಾರೆ. ಈಗ ಈ ಮಾತನ್ನು ಏಕೆ ಹೇಳುತ್ತಿದ್ದೇನಂದ್ರೆ ನನ್ ಹುಡುಗ ಸರ್. ಅವನಿಗೇನಾದ್ರು ಆದ್ರೆ ಮೊದ್ಲು ಎದೆ ಕೊಟ್ಟು ನಿಲ್ಲೋನು ನಾನು. ಅವನು ಒಂದು ಮಾತು ಹೇಳ್ತಾನೆ, ಇವತ್ತಿಂದ ಕಿಚ್ಚ ಬಾಸ್ ಅಂತಾ ಕರೆಯೋದನ್ನು ನಿಲ್ಲಿಸಿ, ಕಿಚ್ಚ ಮಾಸ್ ಅನ್ನೋಣ ಅಂತಾನೆ. ಅದನ್ನೇ ಕೇಕ್ ಮೇಲೆ ಬರೆಸಿಕೊಂಡು ಬರ್ತಾನೆ.

ಅದನ್ನೇ ಹಿಡಿದು ಆ ಒಂದು ಮಾಧ್ಯಮ ‘ಯಾರಿಗೋ ಟಾಂಟ್ ಕೊಟ್ರಾ ಕಿಚ್ಚ’ ಅಂತಾ ಹೇಳಲು ಶುರುವಾಗುತ್ತೆ. ಇದಾದ ಮೇಲೆ ಯಾರದ್ದೋ ಫ್ಯಾನ್ಸ್, ಆ ಹುಡುಗನಿಗೆ ಬೆದರಿಕೆ ಹಾಕೋದೋ ಅಥವಾ ಏನಾದ್ರು ಹೆಚ್ಚು ಕಡಿಮೆ ಮಾಡಿದ್ರು ಅಂದ್ಕೊಳೋಣ….!! ಅದಕ್ಕೆ ನಾನು ಬಿಡೋದಿಲ್ಲ. ಮಾಡಿದ್ರು ಅಂದುಕೊಳ್ಳೋಣ.. ಹಾಗೆ ಹೇಳಿದವರು ಅಥವಾ ಸುದ್ದಿ ಹಬ್ಬಿಸಿದವರು ಜವಾಬ್ದಾರಿ ತೆಗೊಳ್ತಾರಾ ಸರ್ ಎಂದು ಸುದೀಪ್ ಪ್ರಶ್ನಿಸಿದ್ದಾರೆ.

ಯಾರು ಸುದ್ದಿಯನ್ನು ಶುರು ಮಾಡಿದ್ರೋ ಆ ಮಾಧ್ಯಮದವರು ಅವರು ಅವರ ಯಜಮಾನ್ರಿಗೆ ಕರಿಯೋದು ಬಾಸ್ ಅಂತಾನೇ ಅಲ್ವಾ? ಹಾಗಾದ್ರೆ ನಾನ್ ಅವ್ರ ಬಾಸ್ಗೆ ಮಾಡಿಸಿದ್ನಾ ಕೇಕ್? ಎಂದು ಪ್ರಶ್ನಿಸಿದ ಸುದೀಪ್, ನಾನು ನನ್ನ ತಂದೆಗೆ ಬಾಸ್ ಅಂತಾ ಕರೆಯುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಯಶ್, ದರ್ಶನ್, ಧ್ರುವ, ಉಪ್ಪಿ, ಶಿವಣ್ಣ ಹೀಗೆ ಎಲ್ಲಾ ಸೇರಿದ್ರೇನೆ ಒಂದು ಕನ್ನಡ ಚಿತ್ರರಂಗ ಸರ್. ಇದೇ ಒಂದು ವಾಹಿನಿಯಲ್ಲಿ ದರ್ಶನ್ ಫ್ಯಾನ್ಸ್ ವಿಷಯ ಬಂದಾಗ ನಾನ್ ಹೇಳಿದ್ದೆ, ಫ್ಯಾನ್ಸ್ಗೆ ಬೈಯೋಕೆ ಹೋಗ್ಬೇಡಿ, ಅವ್ರಿಗೆ ಗೊತ್ತಾಗ್ತಿಲ್ಲ ಏನು ಮಾಡ್ಬೇಕು ಅನ್ನೋದು. ನೋವಲ್ಲಿ ಇದ್ದಾರೆ ಅವ್ರು ಅನ್ನೋದನ್ನ ತಿಳಿಸಿದ್ದೆ. ಹೀಗೆ ನಾನೇ ನನ್ನ ಬಾಯಲ್ಲಿ ಹೇಳಿದ್ಮೇಲೆ ಅವರಿಗೇಕೆ ಟಾಂಟ್ ಕೊಡಲಿ? ಎಂದು ಕಿಚ್ಚ ಪ್ರಶ್ನಿಸಿದರು.

ನಮ್ಮ ಹಿರಿಯರು ಚಿತ್ರರಂಗವನ್ನು ಅದ್ಭುತವಾಗಿ ಬೆಳೆಸಿ, ಅದನ್ನು ನಮ್ಮ ಕೈಗೆ ಕೊಟ್ಟು ಹೋಗಿದ್ದಾರೆ. ಅದನ್ನು ನೀವು ಇನ್ನಷ್ಟು ಬೆಳೆಸಿ ಅಂತಾ ನಮಗೆ ಜವಾಬ್ದಾರಿ ವಹಿಸಿದ್ದಾರೆ. ಈಗ ಚಿತ್ರರಂಗ ನೋವಲ್ಲಿದೆ. ನಾವಿದನ್ನು ಬೆಳೆಸಿ ನಮ್ಮ ಮುಂದಿನ ಪೀಳಿಗೆಗೆ ಜವಾಬ್ದಾರಿ ವಹಿಸಬೇಕಿದೆ. ತಮ್ಮಂದಿರೇ ನೀವಿದನ್ನು ಬೆಳೆಸಿ ಎಂದು ನಾವು ಹೇಳಬೇಕಿದೆ. ಇದೊಂದು ಕುಟುಂಬ.

ನಾನು ನನ್ನ ತಂದೆಗೆ ಬಾಸ್ ಅಂತಾ ಕರೆಯೋದು. ಆ ಕೇಕ್ ಮಾಡಿಸಿದ ಹುಡುಗನ ಮನಸ್ಸು ಕೂಡಾ ನನಗೆ ಗೊತ್ತು. ಸುದ್ದಿ ಹಬ್ಬಿಸಿದವರಲ್ಲಿ ನಾನು ಕೇಳಿಕೊಳ್ಳೋದು ಇಷ್ಟೇನೆ, ನಾವು ನೀವು ಪ್ರತಿದಿನ ಮುಖ ನೋಡಿಕೊಳ್ಳಬೇಕು. ಪ್ರೀತಿಯಿಂದ ಮಾತನಾಡಿಕೊಳ್ಳಬೇಕಾಗುತ್ತೆ.

ನಿಮ್ಮಲ್ಲೂ ಆ ಬೇಧಭಾವ ಬೇಡ, ನಮ್ಮಲ್ಲೂ ಬೇಡ. ಬಹಳ ವರ್ಷಗಳಿಂದ ನಾವು ಪ್ರಯಾಣ ಮಾಡಿಕೊಂಡು ಇಲ್ಲಿವರೆಗೂ ಬಂದಿದ್ದೀವಿ ಅಂದ್ಮೇಲೆ, ನಿಮ್ಮ ಬಗ್ಗೆ ನನಗೆ ಮತ್ತು ನನ್ನ ಬಗ್ಗೆ ನಿಮಗೆ ಗೊತ್ತಿದೆ. ಇಂತಹ ಕ್ಷುಲ್ಲಕ ವಿಷಯಗಳನ್ನು ಅಲ್ಲಲ್ಲೇ ಬಿಟ್ಟು ಮುನ್ನಡೆಯಬೇಕು ಎಂದು ಸಲಹೆ ನೀಡಿದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿರುವ ದರ್ಶನ್-ಸುದೀಪ್ ಅಭಿಮಾನಿಗಳ ಕಲ್ಪನೆಯ ಫೋಟೋ ಬಳಸಲಾಗಿದೆ.

ರಾಜಕೀಯ

ರಾಜ್ಯದಲ್ಲಿ 50% ಭ್ರಷ್ಟಾಚಾರ; ಬಸವರಾಜ ಬೊಮ್ಮಾಯಿ ಆರೋಪ

ರಾಜ್ಯದಲ್ಲಿ 50% ಭ್ರಷ್ಟಾಚಾರ; ಬಸವರಾಜ ಬೊಮ್ಮಾಯಿ ಆರೋಪ

ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಎಲ್ಲ ಇಲಾಖೆಗಳಲ್ಲಿಯೂ ಐವತ್ತು ಪರ್ಸೆಂಟ್ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಸಂಸದ Basavaraj Bommai

[ccc_my_favorite_select_button post_id="105001"]
ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಮೈ ಫ್ರೆಂಡ್ ಮೋದಿ ಎನ್ನುತ್ತಲೇ ಭಾರತಕ್ಕೆ ಬರೆ ಎಳೆದ ಟ್ರಂಪ್

ಇಷ್ಟು ದಿನ ಬಾಯಿ ಮಾತಲ್ಲೇ ಸುಂಕ ಸಂಘರ್ಷದ ಮಾತುಗಳನ್ನು ಆಡುತ್ತಾ ಬಂದಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಮಂಗಳವಾರ ಮಧ್ಯರಾತ್ರಿ 2.20 (ಭಾರತೀಯ ಕಾಲಮಾನ) trump

[ccc_my_favorite_select_button post_id="104924"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ಬೆಂ.ಗ್ರಾ.ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಸ್ಪರ್ಧೆಗೆ ಚಾಲನೆ

ನೌಕರರ ಕ್ಷೇಮಾಭಿವೃದ್ಧಿಗೆ ಎಲ್ಲಾ ಸಹಕಾರ ನೀಡಲಾಗುವುದು, ಜಿಲ್ಲೆಯ ಅಭಿವೃದ್ಧಿಯಲ್ಲಿ ಸರ್ಕಾರಿ ನೌಕರರ ಪಾತ್ರ ಬಹಳ ಮುಖ್ಯ, ಜಿಲ್ಲೆಯ ಎಲ್ಲಾ ಅಭಿವೃದ್ಧಿ ಕೆಲಸಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು. Sports Meet

[ccc_my_favorite_select_button post_id="104998"]
‘ಪ್ರೀತಿಸಿದವಳಿಗಾಗಿ ದೊಡ್ಡಬಳ್ಳಾಪುರ ಬಾರ್ನಲ್ಲಿ ಬಡಿದಾಟ: ದೂರು ದಾಖಲು’

‘ಪ್ರೀತಿಸಿದವಳಿಗಾಗಿ ದೊಡ್ಡಬಳ್ಳಾಪುರ ಬಾರ್ನಲ್ಲಿ ಬಡಿದಾಟ: ದೂರು ದಾಖಲು’

ಗುಂಪುಗಳ ನಡುವಿನ ಕಂಡು ಬೆಚ್ಚಿ ಬಿದ್ದ ಜನರು. ದೊಡ್ಡಬಳ್ಳಾಪುರ ನಗರದಲ್ಲಿ ಇತ್ತೀಚೆಗೆ ಪುಂಡರ ಹಾವಳಿ ಮೀತಿ ಮೀರಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. Doddaballapura

[ccc_my_favorite_select_button post_id="105003"]
ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಡಿವೈಡರ್‌ಗೆ ಡಿಕ್ಕಿ.. 15 ಬಾರಿ ನಿರಂತರವಾಗಿ ಉರುಳಿ ಬಿದ್ದ ಕಾರು..!| Video

ಕಾರು ಹೆದ್ದಾರಿ ವಿಭಜಕಕ್ಕೆ ಡಿಕ್ಕಿ ಹೊಡೆದು 15 ಬಾರಿ ನಿರಂತರವಾಗಿ ಉರುಳಿ ಬಿದ್ದಿರುವುದು ಸಿಸಿಟಿವಿ ದೃಶ್ಯಗಳಲ್ಲಿ ಕಂಡುಬಂದಿದೆ. Video

[ccc_my_favorite_select_button post_id="104851"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!