Astrology ಶ್ರೀ ಕ್ರೋಧಿನಾಮ ಸಂವತ್ಸರ, ಪುಷ್ಯ ಶುಕ್ಲ ಪಾಡ್ಯ ಡಿ.31,2024: ಮಂಗಳವಾರ ವಿಶೇಷವಾಗಿ ಆಂಜನೇಯನ ದೇವಸ್ಥಾನದಲ್ಲಿ ವೀಳ್ಯದ ಎಲೆಯಿಂದ ಅಲಂಕಾರ ಮಾಡಿ ಪೂಜೆ ಮಾಡಿದರೆ ಸಮೃದ್ಧಿ ಉಂಟಾಗುತ್ತದೆ.
ಮೇಷ ರಾಶಿ: ಎಲ್ಲ ಕಾರ್ಯಗಳಲ್ಲೂ ಜಯ, ವಿಶೇಷವಾಗಿ ಕೋಪವನ್ನು ಸ್ವಲ್ಪ ಕಮ್ಮಿ ಮಾಡಿಕೊಳ್ಳಬೇಕು, ಇದರಿಂದ ಆನಿಷ್ಠಗಳು ನಾಶವಾಗಿ ಸುಖ ಸಂಭವಿಸುತ್ತದೆ. ವಿದ್ಯಾರ್ಥಿಗಳಿಗೆ ಅನುಕೂಲವಾದ ದಿನ ಒಳ್ಳೆಯ ಧನಾರ್ಜನೆ. (ಪರಿಹಾರಕ್ಕಾಗಿ ಅಮ್ಮನವರಿಗೆ ಕೆಂಪು ಹೂಗಳಿಂದ ಪೂಜೆ ಮಾಡಿ)
ವೃಷಭ ರಾಶಿ: ಅತ್ಯಂತ ಶ್ರೇಷ್ಠವಾದ ಶುಭದಿನ. ಯತ್ನ ಕಾರ್ಯಗಳಲ್ಲಿ ಅನುಕೂಲ ಎಲ್ಲ ಕಾರ್ಯಗಳನ್ನು ಜಯ. ಆದರೂ ಸ್ವಲ್ಪ ಭಯ ಅನುಕೂಲವಾಗುತ್ತದೆ. (ಪರಿಹಾರಕ್ಕಾಗಿ ಸಮಸ್ಯೆಗಳ ನಿವಾರಣೆಗಾಗಿ ಮಹಾಲಕ್ಷ್ಮಿಯ ಆರಾಧನೆಯನ್ನು ಮಾಡಿ)
ಮಿಥುನ ರಾಶಿ: ವಿದ್ಯಾರ್ಜನೆ ಸ್ವಲ್ಪ ಹಿನ್ನಡೆ, ಘನದ ಅನುಕೂಲ ಉತ್ಪತ್ತಿ ಆರ್ಜನೆ ತೀರ ಕಮ್ಮಿ ಸ್ವಲ್ಪ ಮನೋಭಾವವನ್ನು ಬದಲಾಯಿಸಿಕೊಳ್ಳಬೇಕು. ಸಂತೃಪ್ತಿಯನ್ನು ತಂದುಕೊಳ್ಳಬೇಕು, ಭಯ ಆತಂಕ ಕಮ್ಮಿ ಮಾಡಿಕೊಳ್ಳಿ ಶುಭವಾಗುತ್ತದೆ. (ಪರಿಹಾರಕ್ಕಾಗಿ ಮಹಾಲಕ್ಷ್ಮಿಗೆ ಬಿಳಿಯ ಹೂಗಳಿಂದ ಪೂಜೆ ಮಾಡಿ)
ಕಟಕ ರಾಶಿ: ಸಾಲ ಭಾದೆಯಿಂದ ವಿಮುಕ್ತಿ. ದುಃಖ ನಾಶ, ಸ್ವಲ್ಪಮಟ್ಟಿಗೆ ಆರೋಗ್ಯ ಸಮಸ್ಯೆಗೆ ಬಾಧೆ ಖೇದ, ಆರಾಮದಾಯಕವಲ್ಲದ ಪರಿಸ್ಥಿತಿ. (ಪರಿಹಾರಕ್ಕಾಗಿ ಆಂಜನೇಯನಿಗೆ ತುಪ್ಪದ ದೀಪಗಳನ್ನು ಹಚ್ಚಿ)
ಸಿಂಹ ರಾಶಿ: ಹಿತ ಶತ್ರುಗಳ ಕಾಟ ಜೊತೆಯಲ್ಲೇ ಇರುವವರಿಂದ ಬಾಧೆ, ತೊಂದರೆ, ಓಡಾಟ, ತಿರುಗಾಟ, ಹೊಸ ಹೊಸ ಮುಖಗಳ ಪರಿಚಯ. (ಪರಿಹಾರಕ್ಕಾಗಿ ಶನೇಶ್ಚರ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿಸಿ)
ಕನ್ಯಾ ರಾಶಿ: ಅತಿಯಾದ ಕೋಪ, ವಿಶ್ವಾಸವಿಲ್ಲದ ಮಾತುಕತೆ, ಸ್ವಲ್ಪ ಸ್ವಲ್ಪದಲ್ಲಿಯೇ ಹಾರಾಟ ಮನಸ್ಸಿಗೆ ಆಲಸ್ಯ, ಸೋಂಬೇರಿತನ, ಎಲ್ಲವನ್ನು ಕಮ್ಮಿ ಮಾಡಿಕೊಳ್ಳಿ. (ಪರಿಹಾರಕ್ಕಾಗಿ ಸುದರ್ಶನ ಗಾಯತ್ರಿ ಯನ್ನು ಜಪ ಮಾಡಿ)
ತುಲಾ ರಾಶಿ: ಆರೋಗ್ಯದಲ್ಲಿ ವ್ಯತ್ಯಾಸ, ಅನಾವಶ್ಯಕ ತಿರುಗಾಟ, ನಾನಾ ಚಿಂತೆ, ಮನಸ್ಸಿಗೆ ಬಾದೆ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಸ್ವಲ್ಪ ಕಷ್ಟದ ಪರಿಸ್ಥಿತಿ. ಆದರೂ ಮುನ್ನುಗ್ಗುವ ಯೋಚನೆ, ಆಲೋಚನೆ. (ಪರಿಹಾರಕ್ಕಾಗಿ ಅಮ್ಮನವರಿಗೆ ಬೆಲ್ಲದ ದೀಪಗಳನ್ನು ಬೆಳಗಿ)
ವೃಶ್ಚಿಕ ರಾಶಿ: ಆರೋಗ್ಯದಾಯಕವಾದ ಮನಸ್ಸು, ಪರಮೇಶ್ವರನ ಅನುಗ್ರಹವಿದೆ. ಮಾತಿನಲ್ಲಿ ಹಿಡಿತವಿರಲಿ, ಕಾರ್ಯಗಳಲ್ಲಿ ಯತ್ನ, ಲಾಭ ಶುಭ ಫಲವನ್ನು ನಿರೀಕ್ಷಿಸುತ್ತೀರಿ. (ಪರಿಹಾರಕ್ಕಾಗಿ ಶಿವನ ದೇವಸ್ಥಾನದಲ್ಲಿ ಬಿಲ್ವಪತ್ರೆಯನ್ನು ಅರ್ಪಿಸಿ)
ಧನಸ್ಸು ರಾಶಿ: ಒಳ್ಳೆಯ ಧನಾರ್ಜನೆ, ಬಂಧು ಮಿತ್ರರ ಕೋಪ, ವಾಸ್ತು ವಿನ್ಯಾಸದ ತೊಂದರೆ, ಅನುಭವಗಳಿಂದ ಉತ್ತರಗಳು, ಒಳ್ಳೆಯ ಮಾತುಕತೆ, ಜೀವನ ಸೌಖ್ಯ. (ಪರಿಹಾರಕ್ಕಾಗಿ ವಿಷ್ಣು ಸಹಸ್ರನಾಮವನ್ನು ಮನೆಯಲ್ಲಿ ಎಲ್ಲರಿಗೂ ಕೇಳುವಂತೆ ಹಾಕಿ)
ಮಕರ ರಾಶಿ: ಅನಾರೋಗ್ಯ ನಿವಾರಣೆ, ಆರೋಗ್ಯದಲ್ಲಿ ಪ್ರಗತಿ, ಶತ್ರುಗಳ ಬಗ್ಗೆ ಎಚ್ಚರಿಕೆ, ವಿಶ್ವಾಸ ಎಲ್ಲರ ಮೇಲು ಇಡುವುದು ಅಷ್ಟೊಂದು ಸಮಾಜವಲ್ಲ, ಯೋಚಿಸಿ ವ್ಯವಹರಿಸಿ. (ಪರಿಹಾರಕ್ಕಾಗಿ ನಾರಾಯಣ ಅಷ್ಟಾಕ್ಷರಿಯನ್ನು ಜಪ ಮಾಡಿ)
ಕುಂಭ ರಾಶಿ: ಸ್ವಲ್ಪ ರೀತಿಯ ಹಣದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ, ಜೀವನದ ಹಿಂದಿನ ಕಹಿ ಘಟನೆಗಳ ನೆನಪು, ಲಕ್ಷ್ಮಿ ಕಟಾಕ್ಷ ಅನುಗ್ರಹ ಕಡಿಮೆ ಇರುತ್ತದೆ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ಹೃದಯ ಪಾರಾಯಣವನ್ನು ಮಾಡಿ)
ಮೀನ ರಾಶಿ: ಧರ್ಮದಿಂದ ಧನಾರ್ಜುನೆ, ಸ್ವಲ್ಪ ಮನಸ್ಸಿಗೆ ಕಿರಿಕಿರಿ, ಶತ್ರುಗಳಿಂದ ತೊಂದರೆ, ಅನಾರೋಗ್ಯ ಬಾಧೆ, ಕೌಟುಂಬಿಕ ಸಮಸ್ಯೆಗಳು, ಬಂದು ಮಿತ್ರ ವಿರೋಧ. (ಪರಿಹಾರಕ್ಕಾಗಿ ಅಮ್ಮನವರ ಆರಾಧನೆಯನ್ನು ಮಾಡಿ)
ರಾಹುಕಾಲ: 3-13PM ರಿಂದ 4-39PM
ಗುಳಿಕಕಾಲ: 12-00PM ರಿಂದ 1-30PM
ಯಮಗಂಡಕಾಲ: 9-00AMರಿಂದ 10-30AM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮರು, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572