ಚಿಕ್ಕಬಳ್ಳಾಪುರ; ಚಿಕ್ಕಬಳ್ಳಾಪುರ ನಗರದ ಚಿತ್ರಾವತಿ ಬಳಿಯ ಆರ್‌ಟಿಒ (RTO) ಕಚೇರಿಯ ಬೀಗ ಮುರಿದು ಓಳನುಗ್ಗಿರುವ ಕಳ್ಳರು ಕಚೇರಿಯಲ್ಲಿರೋ ಮೂರು ಕಂಪ್ಯೂಟರ್ ಸಿಪಿಐ ಹಾಗೂ ಮಾನಿಟರ್ ಗಳನ್ನ ಕದ್ದೊಯ್ದಿದ್ದಾರೆ.
ಭಾನುವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಕಚೇರಿ ಹಿಂಭಾಗದ ಮೂಲಕ ಎಂಟ್ರಿ ಕೊಟ್ಟಿರೋ ಇಬ್ಬರು ಕಳ್ಳರು, ಕಚೇರಿಯ ಬೀಗ ಕಟ್ ಮಾಡಿ, ಕಚೇರಿಯಲ್ಲಿರೋ ಕಂಪ್ಯೂಟರ್ ಗಳನ್ನ ಕಳವು ಮಾಡಿದ್ದಾರೆ.
ಇನ್ನೂ ಕಚೇರಿಯಲ್ಲಿ ಇಬ್ಬರು ಹೊಂ ಗಾರ್ಡ್‍ಗಳನ್ನ ಭದ್ರತೆಗೆ ನಿಯೋಜನೆ ಮಾಡಿದ್ರೂ ಹೋಂ ಗಾರ್ಡ್‍ಗಳು ನಿದ್ದೆಗೆ ಜಾರಿದ್ದಾರೆ. ಇದ್ರಿಂದ ಕಳ್ಳತನ ಮಾಡಿ ಕಳ್ಳರು ಎಸ್ಕೇಪ್ ಆಗಿದ್ದಾರೆ.
ಬೆಳಿಗ್ಗೆ ಕಚೇರಿ ತರೆಯಲು ಹೋದಾಗ ಘಟನೆ ಬೆಳಕಿಗೆ ಬಂದಿದೆ. ವಿಷಯ ತಿಳಿದು ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರ್ ಟಿ ಒ ವಿವೇಕಾನಂದ ಬಳಿ ಮಾಹಿತಿ ಪಡೆದುಕೊಂಡಿದ್ದಾರೆ.
ಸಿಸಿಟಿವಿ ಪರಿಶೀಲನೆ ಮಾಡಲಾಗಿದ್ದು ಇಬ್ಬರು ಮುಸುಕುಧಾರಿಗಳು ಈ ಕೃತ್ಯ ನಡೆಸಿರೋದು ಗೊತ್ತಾಗಿದೆ.