ಚಿಕ್ಕಬಳ್ಳಾಪುರ: ಇಸ್ರೋ ಸಂಸ್ಥೆ ವತಿಯಿಂದ ಇಂದು ಡಾಕಿಂಗ್ ಎಕ್ಸ್‍ಪಿರಿಮೆಂಟ್ ನ ಸ್ಪೈಡೇಕ್ಸ್ ಸ್ಯಾಟಲೈಟ್ ಉಡಾವಣೆ ಮಾಡಲಾಗುತ್ತಿದ್ದು, ಸ್ಯಾಟಲೈಟ್ ಗೆ ರಾಜ್ಯದ ಪ್ರತಿಷ್ಟಿತ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಗಳ ವತಿಯಿಂದ (BGS) ಅರ್ಪಿತ್ ಪೆಲೋಡ್ ಒದಗಿಸುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಕ್ರಾಂತಿಗೆ ಚಿಕ್ಕಬಳ್ಳಾಪುರದ ಎಸ್ ಜೆಸಿ ಐಟಿ ಇಂಜಿನಿಯರಿಂಗ್ ಕಾಲೇಜಿನ ತಂಡ ಮುಂದಾಗಿದೆ.
ಅಂದಹಾಗೆ ಇಂದು ರಾತ್ರಿ 9 ಗಂಟೆ 58 ನಿಮಿಷಕ್ಕೆ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಈ ಸ್ಯಾಟ್ ಲೈಟ್ ಉಡಾವಣೆಯಾಗಲಿದೆ. ಹೀಗಾಗಿ ಈಗಾಗಲೇ ಅರ್ಪಿತ್ ಅನ್ನೋ ಪೆಲೋಡ್ ಸೃಷ್ಟಿಸಿರುವ ಎಸ್ ಜೆ ಸಿ ಐಟಿ ಇಂಜಿನಿಯರಿಂಗ್ ಕಾಲೇಜಿನ ತಂಡ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ ತಲುಪಿದೆ.
ಈ ಪೆಲೋಡ್ ನ ಮುಖ್ಯ ಉದ್ದೇಶ ಎಂದರೆ ಸಾರ್ವಜನಿಕರು ಸಹ ಸ್ಯಾಟಲೈಟ್ ಜೊತೆ ಸಂಪರ್ಕ ಸಾಧಿಸುವುದು, ಸ್ಯಾಟಲೈಟ್ ನಿಂದ ರೇಡಿಯೋ ತರಂಗಾಂತರ ಮೂಲಕ ಪೋಟೋ, ವಿಡಿಯೋ, ಆಡಿಯೋ ಹಂಚಿಕೊಳ್ಳಬಹುದಾಗಿದೆ.
ಇನ್ನೂ ಈ ಸ್ಪೈಡೆಕ್ಸ್ ಸ್ಯಾಟಲೈಟ್ ಯೋಜನೆ ಬಾಹ್ಯಾಕಾಶದಲ್ಲಿ ಎರಡು ಉಪಗ್ರಹಗಳನ್ನ ಒಂದಕ್ಕೊಂದು ಸಂಪರ್ಕ ಜೋಡಿಸುವುದಾಗಿದೆ. ಇದರ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಹೊಸ ಮೈಲಿಗಲ್ಲು ಸಾಧಿಸಲಿದೆ.
ಈ ಯೋಜನೆಯಲ್ಲಿ ಎರಡು ಉಗ್ರಹಗಳಿದ್ದು ಒಂದಕ್ಕೊಂದು ಸಂವಹನ ಸಾಧಿಸುವ ಪ್ರಯೋಗ ನಡೆಸಲಾಗುತ್ತದೆ. ಇದರಲ್ಲಿ 24 ಪೆಲೋಡ್ ಗಳಿದ್ದು 14 ಪೆಲೋಡ್ ಗಳನ್ನ ಇಸ್ರೋ ಸಂಸ್ಥೆ ನಿರ್ಮಾಣ ಮಾಡಿದ್ರೆ ಉಳಿದ 10 ಪೆಲೋಡ್ ಇತರೆ ಸಂಸ್ಥೆಗಳು ತಯಾರಿ ಮಾಡಿವೆ.