ಬೆಂಗಳೂರು: ಸದಾ ಒಂದಿಲ್ಲೊಂದು ವಿಚಾರದಲ್ಲಿ ಲೈವ್‌ಗೆ ಬಂದು ಸುದ್ದಿಯಲ್ಲಿರುವ ಬಿಗ್‌ಬಾಸ್ ಕನ್ನಡ ಸೀಸನ 11 ರ ಸ್ಪರ್ಧಿಯಾಗಿದ್ದ ಜಗದೀಶ್, ಇದೀಗ ತಮಿಳುನಾಡು ಬಿಜೆಪಿ ಅಧ್ಯಕ್ಷ ಅಣ್ಣಾಮಲೈ (Annamalai )ಅವರ ಪ್ರತಿಭಟನೆಯನ್ನು ಅಣಕಿಸುವ ಮೂಲಕ ಸುದ್ದಿಯಾಗಿದ್ದಾರೆ.
ತಮಿಳುನಾಡಿನ ಅಣ್ಣಾ ವಿವಿಯಲ್ಲಿ ನಡೆದ ಅತ್ಯಾಚಾರ ಖಂಡಿಸಿ ಡಿಎಂಕೆ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ತಮಗೆ ತಾವೇ ಚಾಟಿಯಿಂದ ಬಾರಿಸಿಕೊಂಡು ವಿಭಿನ್ನ ಪ್ರತಿಭಟಿಸುವ ಮೂಲಕ ಟ್ರೋಲ್ಗೆ ಒಳಗಾಗಿದ್ದಾರೆ.
ಮುಂದುವರೆದು ಅವರ ಈ ಪ್ರತಿಭಟನೆಯನ್ನು ಬಿಗ್ ಬಾಸ್ ಸ್ಪರ್ಧಿ ಜಗದೀಶ್ ಅಣಕ ಮಾಡಿದ್ದು, ಪೆನ್ನು ಪೆನ್ಸಿಲ್, ರಬ್ಬರ್ ಮೇಲೂ ಜಿಎಸ್‌ಟಿ ಹಾಕಿದ್ದಾರೆ. ಹೀಗಾಗಿ ಜಿಎಸ್‌ಟಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಚಡಿ ಏಟಿನ ಮೂಲಕ ಪ್ರತಿಭಟಿಸುವ ರೀತಿ ಕೈಯಲ್ಲಿ ಪಂಚೆ ಹಿಡಿದು ವ್ಯಂಗ್ಯವಾಗಿ ಪ್ರತಿಭಟನೆ ಮಾಡಿದ್ದಾರೆ.
ಈ ವಿಡಿಯೋದಲ್ಲಿ ನನ್ನ ಹೆಸರು ಸ್ವರ್ಣಾಮಲೈ ಎಂದು ಹೇಳಿರುವ ಜಗದೀಶ ಅಣ್ಣಾಮಲೈರನ್ನ ವ್ಯಂಗ್ಯ ಮಾಡಿದ್ದಾರೆ.
ನಾನು ಸ್ವರ್ಣಾಮಲೈ ಕರ್ನಾಟಕದಲ್ಲಿ ಸಿಂಗಂ ತರ ಒಳ್ಳೆ ಪೊಲೀಸ್ ಅಧಿಕಾರಿಯಾಗಿದ್ದರು. ಆದರೆ ಈಗ ಸ್ವರ್ಣಾಮಲೈನ ಗುಜರಾತಿ ಟೀ ಮಾರೋರು, ಗುಜರಾತಿ ಸೇಟುಗಳು ಕೆಲಸದಿಂದ ಬಿಡಿಸಿಬಿಟ್ಟು, ತಮಿಳುನಾಡಲ್ಲಿ ಸಿಎಂ ಮಾಡ್ತಿನಿ ಅಂತ ಕರ್ಕೊಂಡ್ ಹೋದ್ರು, ಎರಡು ಸರಿ ಸೋಲಿಸಿಬಿಟ್ರು.. ಅದಕ್ಕೆ ಬೇಸರ ಆಗಿಬಿಟ್ಟಿದೆ. ಆದರು ಸಿಎಂ ಮಾಡ್ತಿನಿ ಅಂತ ಹೇಳಿದ್ದಾರೆ.
ಅದಕ್ಕೆ ಪೆನ್ನು ಪೆನ್ಸಿಲ್, ರಬ್ಬರ್ ಮೇಲೂ ಜಿಎಸ್‌ಟಿ ಹಾಕಿದ್ದಾರೆ. ಹೀಗಾಗಿ ಜಿಎಸ್‌ಟಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದೇನೆ ಎಂದು ಚಡಿ ಏಟಿನ ಮೂಲಕ ಪ್ರತಿಭಟಿಸುವ ರೀತಿ ಕೈಯಲ್ಲಿ ಪಂಚೆ ಹಿಡಿದು ವ್ಯಂಗ್ಯವಾಗಿ ಪ್ರತಿಭಟನೆ ಮಾಡಿದ್ದಾರೆ.