Murder news update: ಬಾಶೆಟ್ಟಿಹಳ್ಳಿ ದೇವರಾಜ್ ಹತ್ಯೆ ಪ್ರಕರಣ; 3ನೇ ಆರೋಪಿ ಬಂಧನ..!

ದೊಡ್ಡಬಳ್ಳಾಪುರ, Murder news update: ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ರಿಯಲ್ ಎಸ್ಟೇಟ್ ಹಣದ ಮನಸ್ತಾಪದಿಂದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆಳೆಯರಿಂದಲೇ ಕೊಲೆಯಾದ ಪ್ರಕರಣಕ್ಕೆ ಸಂಭಂಧಿಸಿದಂತೆ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಕಡಪ ಮೂಲದ ನಾಗಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಕೊಲೆಯಾದ ವ್ಯಕ್ತಿ ಬಾಶೆಟ್ಟಿಹಳ್ಳಿ ನಿವಾಸಿ ದೇವರಾಜ ಅವರ ಶವವನ್ನು ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.

ಸವಾಲಿನ ಈ ಪ್ರಕರಣವನ್ನು ಭೇದಿಸಿರುವ ಸಾಧಿಕ್ ಪಾಷಾ ನೇತೃತ್ವದ ಪೊಲೀಸರು, ಇದಕ್ಕೂ ಮುನ್ನ ಗೌರಿಬಿದನೂರಿನ ರಾಜಕುಮಾ‌ರ್ ಮತ್ತು ಅಂಧ್ರಪ್ರದೇಶದ ಕಂಡಪದ ಅನಿಲ್ ಮೋರೆ ಎಂಬುವರನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.

ಹಿನ್ನಲೆ: ಬಾಶೆಟ್ಟಿಹಳ್ಳಿಯಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ದೇವರಾಜ ಎಂದು ಕುಟುಂಬಸ್ಥರು ಇದೇ ಅಕ್ಟೋಬರ್ 18 ರಂದು ಕಾಣೆಯಾಗಿದ್ದಾರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.

ತನಿಖೆ ಆರಂಭಿಸಿದ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ದೇವರಾಜ ಮೊಬೈಲ್ ಕರೆಗಳ ಆಧಾರದ ಮೇಲೆ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ವಿಷಯ ಬಹಿರಂಗಗೊಂಡಿದೆ.

ಕಟ್ಟಡ ನಿರ್ಮಾಣ ಗುತ್ತಿಗೆದಾರ ಅನಿಲ್ ಮೋರೆ ಹಾಗೂ ರಾಜಕುಮಾರ್ ಈ ಇಬ್ಬರೂ ತನಗೆ ₹20 ಲಕ್ಷ ಕೊಡಬೇಕಿರುವ ಸಂಗತಿಯನ್ನು ದೇವರಾಜ ತಮ್ಮ ಪತ್ನಿ ಬಳಿ ಹೇಳಿಕೊಂಡಿದ್ದರು.

ಆರೋಪಿಗಳಾದ ರಾಜಕುಮಾರ್, ಅನಿಲ್ ಮೋರೆ ಮೃತ ದೇವರಾಜ ಸ್ನೇಹಿತರು. ಮೂವರು ಸೇರಿ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ತೊಡಗಿದ್ದರು. ಹಣಕಾಸಿನ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರು. ಇದರಿಂದ ಉಂಟಾದ ಮನಸ್ತಾಪದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೊಲೆ ನಡೆಸುವ ಸಂಚಿನಿಂದ ಆರೋಪಿಗಳು ದೆಹಲಿಯಿಂದ ಕಾರು ಖರೀದಿಸಿ ತಂದಿದ್ದರು. ಹಣ ನೀಡುವುದಾಗಿ ಪುಸಲಾಯಿಸಿ ದೇವರಾಜ ಅವರನ್ನು ಕಾರಿನಲ್ಲಿ ಕರೆದೊಯ್ದು ಸ್ನೇಹಿತರು ಕಾರಿನಲ್ಲಿಯೇ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಕೊಲೆ ಮಾಡಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.

ನಂತರ ಶವವನ್ನು ದೊಡ್ಡಬಳ್ಳಾಪುರ ಹೊರವಲಯದ ಇನ್ಫೊ ಸಿಟಿಯಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದರು. ಪೊಲೀಸರ ತನಿಖೆ ಸುಳಿವು ಸಿಗುತ್ತಿದ್ದಂತೆಯೇ ಬಂಧಿತ ಮೂರನೇ ಆರೋಪಿ ನಾಗಪ್ರಸಾದ್ ಮೂಲಕ ಶವವನ್ನು ಹೊರತೆಗೆದಿದ್ದ ಆರೋಪಿಗಳು, ಅರೆಬರೆಯಾಗಿ ಸುಟ್ಟು ತಾಲ್ಲೂಕಿನ ಮಧುರೆ ಕೆರೆಗೆ ಎಸೆದಿದ್ದರು. ಕೊಲೆ ನಂತರ ಆರೋಪಿಗಳು ಕಾರನ್ನು ಕೋಲಾರ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೃತನ ತಲೆ ಕೂದಲು, ಚಪ್ಪಲಿ ಮತ್ತಿತರ ವಸ್ತುಗಳು ಸಿಕ್ಕಿವೆ. ಈ ವಸ್ತುಗಳು ದೇವರಾಜ್ ಅವರಿಗೆ ಸೇರಿದ್ದು ಎಂದು ಕುಟುಂಬ ಸದಸ್ಯರು ಗುರುತಿಸಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ ಮಧುರೆ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಅರೆ ಬೆಂದಿದ್ದ ಮೂಳೆಗಳು ದೊರೆತಿವೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನಂತರ ಮೂಳೆ ಯಾರವು ಎಂದು ಖಚಿತವಾಗಲಿದೆ.

ರಾಜಕೀಯ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಕಪ್ಪುಪಟ್ಟಿ ಧರಿಸಿ ಬಿಜೆಪಿ ಪ್ರತಿಭಟನೆ; ಆರ್‌.ಅಶೋಕ

ಜಮ್ಮು-ಕಾಶ್ಮೀರದಲ್ಲಿ ಉಗ್ರರ ದಾಳಿ, ಕಪ್ಪುಪಟ್ಟಿ ಧರಿಸಿ ಬಿಜೆಪಿ ಪ್ರತಿಭಟನೆ; ಆರ್‌.ಅಶೋಕ

ಬೆಂಗಳೂರು: ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ತಕ್ಕ ಪ್ರತ್ಯುತ್ತರ ನೀಡಲಿದೆ. ರಾಜ್ಯದಲ್ಲೂ ಸರ್ಕಾರ ಸ್ಲೀಪರ್‌ ಸೆಲ್‌ಗಳನ್ನು ಪತ್ತೆ ಹಚ್ಚಿ ಕಾನೂನು ಸುವ್ಯವಸ್ಥೆ ಕಾಪಾಡಬೇಕಿದೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ (R Ashoka)

[ccc_my_favorite_select_button post_id="105683"]
ಸಂಕಷ್ಟದಲ್ಲಿ ನೆರವು: ಸಚಿವ ಸಂತೋಷ್ ಲಾಡ್ ಅವರಿಗೆ ಧನ್ಯವಾದ ಹೇಳಿದ ಪ್ರವಾಸಿಗರು..!

ಸಂಕಷ್ಟದಲ್ಲಿ ನೆರವು: ಸಚಿವ ಸಂತೋಷ್ ಲಾಡ್ ಅವರಿಗೆ ಧನ್ಯವಾದ ಹೇಳಿದ ಪ್ರವಾಸಿಗರು..!

ಉಗ್ರರ ದಾಳಿಯಲ್ಲಿ ಮೃತಪಟ್ಟಿರುವವರ ಗುರುತು ಪತ್ತೆಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ (Santosh lad) ಅವರು ಮೃತರ ಸಂಬಂಧಿಕರಿಗೆ ನೆರವು ನೀಡಿದ್ದಾರೆ.

[ccc_my_favorite_select_button post_id="105692"]
ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

ಇಬ್ಬರು ಉಗ್ರರ ಹೊಡೆದುರುಳಿಸಿದ ಭಾರತೀಯ ಸೇನೆ

ಶ್ರೀನಗರ: ಮಂಗಳವಾರ ಜಮ್ಮು ಕಾಶ್ಮೀರದ ಪಹಲ್ಯಾಮ್‌ನಲ್ಲಿ ನಡೆದ ಉಗ್ರರ ದಾಳಿ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿರುವ ಭಾರತೀಯ ಸೇನೆ ಕೆಲವೇ ಗಂಟೆಗಳಲ್ಲಿ ಭದ್ರತಾಪಡೆಗಳು ಇಬ್ಬರು ಉಗ್ರರನ್ನು (terrorists) ಹೊಡೆದುರುಳಿಸಿದ್ದಾರೆ. ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ

[ccc_my_favorite_select_button post_id="105676"]
los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

los angeles fire| ಅಮೆರಿಕ ಕಾಡ್ಗಿಚ್ಚು: ಸಾವಿನ ಸಂಖ್ಯೆ 11ಕ್ಕೆ| Video

ಹಾಲಿವುಡ್ ಹಿಲ್ ಹಾಗೂ ಸ್ಟುಡಿಯೋ ಸಿಟಿಗೆ ಹೊತ್ತಿಕೊಂಡಿದ್ದ ಬೆಂಕಿಯನ್ನು ವಿಮಾನ, ಹೆಲಿಕಾಪ್ಟರ್ ಗಳ ಮೂಲಕ ನೀರು ಸಿಂಪಡಿಸಿ ನಂದಿಸಲಾಗಿತ್ತು los Angeles fire

[ccc_my_favorite_select_button post_id="100721"]

ಕ್ರೀಡೆ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಆರ್‌ಸಿಬಿ ತವರಲ್ಲಿಂದು ಪಂಜಾಬ್ ಸವಾಲು..!: ಮಳೆ ಆತಂಕ

ಬೆಂಗಳೂರು (Harithalekhani): ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ ನಡೆಯುವ ಐಪಿಎಲ್ ಪಂದ್ಯದಲ್ಲಿ ಅತಿಥೇಯ ರಾಯಲ್ ಚಾಲೆಂಜರ್ ಬೆಂಗಳೂರು (RCB) ತಂಡವು ಪಂಜಾಬ್ ಕಿಂಗ್ ತಂಡವನ್ನು ಎದುರಿಸಲಿದೆ. ತಾನು ಆಡಿದ ಒಟ್ಟು 6 ಪಂದ್ಯಗಳ ಪೈಕಿ ಆರ್‌ಸಿಬಿ

[ccc_my_favorite_select_button post_id="105462"]
ದೊಡ್ಡಬಳ್ಳಾಪುರ: ಮಧುರೆ ಕೆರೆಯಲ್ಲಿ ಶವ ಪತ್ತೆ..!

ದೊಡ್ಡಬಳ್ಳಾಪುರ: ಮಧುರೆ ಕೆರೆಯಲ್ಲಿ ಶವ ಪತ್ತೆ..!

ದೊಡ್ಡಬಳ್ಳಾಪುರ: ತಾಲೂಕಿನ ಪ್ರಸಿದ್ಧ ಮಧುರೆ ಕೆರೆಯಲ್ಲಿ ಅಪರಿಚಿತ ಶವ ಪತ್ತೆಯಾಗಿದೆ. ಸುಮಾರು 35-40 ವರ್ಷದ ಅಪರಿಚಿತ ಶವ ಇದಾಗಿದ್ದು, ಮೂರು ದಿನಗಳ ಹಿಂದೆ ಕೆರೆಗೆ ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಇಂದು ಸ್ಥಳೀಯರು ಇದನ್ನು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ದೊಡ್ಡಬೆಳವಂಗಲ ಪೊಲೀಸ್

[ccc_my_favorite_select_button post_id="105685"]
ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ದೇವನಹಳ್ಳಿ ಏರ್ಪೋರ್ಟ್ನಲ್ಲಿ ಸರಣಿ ಅಪಘಾತ.. ವಿಮಾನಕ್ಕೆ ಟಿಟಿ ಡಿಕ್ಕಿ…!

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (Airport) ಸಂಭವಿಸಿದ ಸರಣಿ ಅಪಘಾತಗಳು ಆತಂಕಕ್ಕೆ ಕಾರಣವಾಗಿದೆ. harithalekhani

[ccc_my_favorite_select_button post_id="105576"]

ಆರೋಗ್ಯ

ಸಿನಿಮಾ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ಕಲಾವಿದರು ಮಾಸಾಶನ ಪಡೆಯಲು ಜೀವಿತಾವಧಿ ಪ್ರಮಾಣ ಪತ್ರ ಸಲ್ಲಿಸಿ

ನಿಗದಿತ ಅರ್ಜಿ ನಮೂನೆಯನ್ನು ಸಹಾಯಕ ನಿರ್ದೇಶಕರ ಕಛೇರಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಜಿಲ್ಲಾಡಳಿತ ಭವನ, ಕೊಠಡಿ ಸಂಖ್ಯೆ:118 Affidavit

[ccc_my_favorite_select_button post_id="104955"]
error: Content is protected !!