ದೊಡ್ಡಬಳ್ಳಾಪುರ, Murder news update: ಎರಡು ತಿಂಗಳ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯೊಬ್ಬ ರಿಯಲ್ ಎಸ್ಟೇಟ್ ಹಣದ ಮನಸ್ತಾಪದಿಂದ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಗೆಳೆಯರಿಂದಲೇ ಕೊಲೆಯಾದ ಪ್ರಕರಣಕ್ಕೆ ಸಂಭಂಧಿಸಿದಂತೆ ಮೂರನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಕಡಪ ಮೂಲದ ನಾಗಪ್ರಸಾದ್ ಬಂಧಿತ ಆರೋಪಿಯಾಗಿದ್ದು, ಕೊಲೆಯಾದ ವ್ಯಕ್ತಿ ಬಾಶೆಟ್ಟಿಹಳ್ಳಿ ನಿವಾಸಿ ದೇವರಾಜ ಅವರ ಶವವನ್ನು ನಾಶಪಡಿಸಲು ಯತ್ನಿಸಿದ ಆರೋಪದ ಮೇಲೆ ಬಂಧಿಸಲಾಗಿದೆ.
ಸವಾಲಿನ ಈ ಪ್ರಕರಣವನ್ನು ಭೇದಿಸಿರುವ ಸಾಧಿಕ್ ಪಾಷಾ ನೇತೃತ್ವದ ಪೊಲೀಸರು, ಇದಕ್ಕೂ ಮುನ್ನ ಗೌರಿಬಿದನೂರಿನ ರಾಜಕುಮಾರ್ ಮತ್ತು ಅಂಧ್ರಪ್ರದೇಶದ ಕಂಡಪದ ಅನಿಲ್ ಮೋರೆ ಎಂಬುವರನ್ನು ಕೊಲೆ ಆರೋಪದಲ್ಲಿ ಬಂಧಿಸಿದ್ದಾರೆ.
ಹಿನ್ನಲೆ: ಬಾಶೆಟ್ಟಿಹಳ್ಳಿಯಲ್ಲಿ ನಂದಿನಿ ಮಿಲ್ಕ್ ಪಾರ್ಲರ್ ನಡೆಸುತ್ತಿದ್ದ ದೇವರಾಜ ಎಂದು ಕುಟುಂಬಸ್ಥರು ಇದೇ ಅಕ್ಟೋಬರ್ 18 ರಂದು ಕಾಣೆಯಾಗಿದ್ದಾರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಇನ್‌ಸ್ಪೆಕ್ಟರ್ ಸಾದಿಕ್ ಪಾಷಾ ನೇತೃತ್ವದ ತಂಡ ದೇವರಾಜ ಮೊಬೈಲ್ ಕರೆಗಳ ಆಧಾರದ ಮೇಲೆ ಸ್ನೇಹಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ಕೊಲೆ ವಿಷಯ ಬಹಿರಂಗಗೊಂಡಿದೆ.

ಕಟ್ಟಡ ನಿರ್ಮಾಣ ಗುತ್ತಿಗೆದಾರ ಅನಿಲ್ ಮೋರೆ ಹಾಗೂ ರಾಜಕುಮಾರ್ ಈ ಇಬ್ಬರೂ ತನಗೆ ₹20 ಲಕ್ಷ ಕೊಡಬೇಕಿರುವ ಸಂಗತಿಯನ್ನು ದೇವರಾಜ ತಮ್ಮ ಪತ್ನಿ ಬಳಿ ಹೇಳಿಕೊಂಡಿದ್ದರು.
ಆರೋಪಿಗಳಾದ ರಾಜಕುಮಾರ್, ಅನಿಲ್ ಮೋರೆ ಮೃತ ದೇವರಾಜ ಸ್ನೇಹಿತರು. ಮೂವರು ಸೇರಿ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ತೊಡಗಿದ್ದರು. ಹಣಕಾಸಿನ ವಿಷಯದಲ್ಲಿ ಜಗಳ ಮಾಡಿಕೊಂಡಿದ್ದರು. ಇದರಿಂದ ಉಂಟಾದ ಮನಸ್ತಾಪದಿಂದ ಈ ಕೊಲೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆ ನಡೆಸುವ ಸಂಚಿನಿಂದ ಆರೋಪಿಗಳು ದೆಹಲಿಯಿಂದ ಕಾರು ಖರೀದಿಸಿ ತಂದಿದ್ದರು. ಹಣ ನೀಡುವುದಾಗಿ ಪುಸಲಾಯಿಸಿ ದೇವರಾಜ ಅವರನ್ನು ಕಾರಿನಲ್ಲಿ ಕರೆದೊಯ್ದು ಸ್ನೇಹಿತರು ಕಾರಿನಲ್ಲಿಯೇ ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾರೆ ಕೊಲೆ ಮಾಡಿದ್ದಾರೆ. ಎಂದು ಪೊಲೀಸರು ತಿಳಿಸಿದ್ದಾರೆ.
ನಂತರ ಶವವನ್ನು ದೊಡ್ಡಬಳ್ಳಾಪುರ ಹೊರವಲಯದ ಇನ್ಫೊ ಸಿಟಿಯಲ್ಲಿ ಗುಂಡಿ ತೋಡಿ ಮುಚ್ಚಿ ಹಾಕಿದ್ದರು. ಪೊಲೀಸರ ತನಿಖೆ ಸುಳಿವು ಸಿಗುತ್ತಿದ್ದಂತೆಯೇ ಬಂಧಿತ ಮೂರನೇ ಆರೋಪಿ ನಾಗಪ್ರಸಾದ್ ಮೂಲಕ ಶವವನ್ನು ಹೊರತೆಗೆದಿದ್ದ ಆರೋಪಿಗಳು, ಅರೆಬರೆಯಾಗಿ ಸುಟ್ಟು ತಾಲ್ಲೂಕಿನ ಮಧುರೆ ಕೆರೆಗೆ ಎಸೆದಿದ್ದರು. ಕೊಲೆ ನಂತರ ಆರೋಪಿಗಳು ಕಾರನ್ನು ಕೋಲಾರ ಮೂಲದ ವ್ಯಕ್ತಿಯೊಬ್ಬರಿಗೆ ಮಾರಾಟ ಮಾಡಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ವಿಧಿವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳೊಂದಿಗೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದಾಗ ಮೃತನ ತಲೆ ಕೂದಲು, ಚಪ್ಪಲಿ ಮತ್ತಿತರ ವಸ್ತುಗಳು ಸಿಕ್ಕಿವೆ. ಈ ವಸ್ತುಗಳು ದೇವರಾಜ್ ಅವರಿಗೆ ಸೇರಿದ್ದು ಎಂದು ಕುಟುಂಬ ಸದಸ್ಯರು ಗುರುತಿಸಿದ್ದಾರೆ.
ಕಳೆದ ಶುಕ್ರವಾರ ಮಧ್ಯಾಹ್ನ ಮಧುರೆ ಕೆರೆಯಲ್ಲಿ ಹುಡುಕಾಟ ನಡೆಸಿದಾಗ ಅರೆ ಬೆಂದಿದ್ದ ಮೂಳೆಗಳು ದೊರೆತಿವೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ನಂತರ ಮೂಳೆ ಯಾರವು ಎಂದು ಖಚಿತವಾಗಲಿದೆ.