ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಅಮಾವಾಸ್ಯೆ ಸೋಮವಾರ ಡಿ. 30. 2024: ವಿಶೇಷ ಪ್ರತ್ಯಂಗಿರಾ ಅಮ್ಮನಿಗಾಗಿ ಕೆಂಪು ಹೂಗಳಿಂದ ಅರ್ಚನೆ ಮಾಡಿ ಪಾಯಸವನ್ನು ನೈವೇದ್ಯ ಮಾಡಿದರೆ ಎಲ್ಲರಿಗೂ ಎಲ್ಲ ಕಾರ್ಯದಲ್ಲೂ ಶುಭವಾಗುತ್ತದೆ. Astrology
ಮೇಷ ರಾಶಿ: ಯತ್ನ ಮತ್ತು ಗ್ರಹ ದಶಗಳಿಂದ ಎಲ್ಲಾ ಕಾರ್ಯಗಳು ಜಯ, ಭಗವಂತನ ಅನುಗ್ರಹ ಮಾಡುವ ಕೆಲಸಗಳಿಗೆ ಧನಸಹಾಯ ನಿರೀಕ್ಷೆ, ಉತ್ತಮವಾದ ಸಂಚಲನ, ಆರೋಗ್ಯ ವೃದ್ಧಿ. (ಪರಿಹಾರಕ್ಕಾಗಿ ಹನುಮಂತನ ದೇವಸ್ಥಾನದಲ್ಲಿ ನಮಸ್ಕಾರವನ್ನು ಮಾಡಿ ಕಾರ್ಯವನ್ನು ಮುಂದುವರಿಸಿ)
ವೃಷಭ ರಾಶಿ: ಸಮಸ್ಯೆಗಳಿಂದ ಹೊರಬರುವ ಕಾತರ, ಜೀವನ ಮೌಲ್ಯಗಳು ಬಗ್ಗೆ ಎಚ್ಚರಿಕೆ ಇರಲಿ, ಸತ್ಯ ಧರ್ಮ ನ್ಯಾಯ ನಿಷ್ಠೆಯಿಂದ ಕೆಲಸ ಮಾಡಿದರೆ ಉನ್ನತ ಫಲ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣನ ದೇವಸ್ಥಾನದಲ್ಲಿ ಪೂಜೆ)
ಮಿಥುನ ರಾಶಿ: ಯತ್ನ ಕಾರ್ಯಾ ಅನುಕೂಲ, ಸಮಯ ಸಾಧನೆ ಮಾಡಬೇಕಾದ ಕೆಲಸಗಳಲ್ಲಿ ಮುನ್ನುಗ್ಗುವ ಸ್ಥಿತಿ, ಧೈರ್ಯದಿಂದ ಎಲ್ಲಾ ಕಾರ್ಯಗಳಲ್ಲೂ ಜಯಪ್ರಾಪ್ತಿ, ಲಕ್ಷ್ಮಿ ಕೃಪೆ. (ಪರಿಹಾರಕ್ಕಾಗಿ ಲಕ್ಷ್ಮಿ ಅಷ್ಟಕ ಪಾರಾಯಣ)
ಕಟಕ ರಾಶಿ: ಸಣ್ಣಪುಟ್ಟ ವಿಚಾರಗಳಿಗೆ ಕೋಪ ಬೇಡ, ಧೈರ್ಯಂ ಸರ್ವತ್ರ ಸಾಧನಂ ಮುಂದುವರೆಯಿರಿ, ಧೈರ್ಯ ಲಕ್ಷ್ಮಿ ನಿಮ್ಮ ಕೈ ಬಿಡುವುದಿಲ್ಲ ಕಾಪಾಡುತ್ತಾಳೆ. (ಪರಿಹಾರಕ್ಕಾಗಿ ಅಮ್ಮನವರಿಗೆ ನಿಂಬೆಹಣ್ಣಿನ ದೀಪವನ್ನು ಹಚ್ಚಿ)
ಸಿಂಹ ರಾಶಿ: ಒಳ್ಳೆಯ ಮಾತುಗಳಿಂದ ಶುಭಾರಂಭ, ದೇಹದ ಆರೋಗ್ಯ ಉತ್ತಮ, ಮಾತುಕತೆ ಆಲಸ್ಯ ನಿವಾರಣೆ ಸರ್ವತ್ರ ಶುಭ. (ಪರಿಹಾರಕ್ಕಾಗಿ ಲಕ್ಷ್ಮೀನಾರಾಯಣ ದೇವಾಲಯದಲ್ಲಿ ತುಳಸಿಯ ಪೂಜೆ)
ಕನ್ಯಾ ರಾಶಿ: ಸಣ್ಣಪುಟ್ಟ ವಿಚಾರಗಳಿಗೆ ಕೋಪಿಸಿಕೊಂಡು ದುಡುಕಿದರೆ ಫಲ ತುಂಬಾ ಕೆಟ್ಟದಾಗಿರುತ್ತದೆ. ಯೋಚಿಸಿ ಹೆಜ್ಜೆಯನ್ನು ಮುಂದಿರಿಸಬೇಕು, ಅತಿಯಾದ ಆಸೆ ಬದುಕಿನ ಮೂಲವನ್ನು ಅಲ್ಲಾಡಿಸುತ್ತದೆ. (ಪರಿಹಾರಕ್ಕಾಗಿ ರಾಮ ಮಂತ್ರ ಜಪ ಮಾಡಿ)
ತುಲಾ ರಾಶಿ: ಒಳ್ಳೆಯ ದಿನ ಉತ್ತಮ ಜ್ಞಾನ, ಆರೋಗ್ಯ, ಮಹಾಲಕ್ಷ್ಮಿ ಅನುಗ್ರಹ, ಎಲ್ಲವೂ ಸಹ ಲಭಿಸುವ ಸುದಿನ ಎಲ್ಲ ಕಾರ್ಯಗಳಲ್ಲೂ ಜಯ ಭಗವಂತನ ಕೃಪಾಕಟಾಕ್ಷ ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಶಿವನಿಗೆ ಬಿಲ್ವಪತ್ರೆಯನ್ನು ಅರ್ಪಿಸಿ)
ವೃಶ್ಚಿಕ ರಾಶಿ: ವಿಪರೀತವಾದ ಆಲಸ್ಯ, ಎಲ್ಲಾ ಕಾರ್ಯಗಳಲ್ಲೂ ವಿರುದ್ಧವಾದ ನಡೆಯಾದ ನಂಬಿಕೆ ಅಥವಾ ಕೊಟ್ಟ ಹಣ ಕೊಡುವುದಿಲ್ಲ ಎಂಬ ಅಪನಂಬಿಕೆ, ಮನಸ್ಸಿನ ಚಿಂತೆ, ದುಃಖ. (ಪರಿಹಾರಕ್ಕೆ ಆಂಜನೇಯನ ದೇವಸ್ಥಾನದಲ್ಲಿ ನಮಸ್ಕರಿಸಿ ಬನ್ನಿ)
ಧನಸ್ಸು ರಾಶಿ: ಎಲ್ಲಾ ಕಾರ್ಯಗಳಲ್ಲೂ ಜಯ. ಆದರೆ ಮನಸ್ಸಿನಲ್ಲಿ ಏನೋ ತೊಂದರೆ ಚಿಂತೆ. ಹೊರ ಬರುವ ಸ್ಥಿತಿ ತೀರ ಗಂಭೀರ ಎಂದು ಯೋಚನೆ ಆಗುತ್ತದೆ. (ಪರಿಹಾರಕ್ಕಾಗಿ ಮನೆಗೆ ದೃಷ್ಟಿಸಿ, ನೀವಾಡಿಸಿ ಬೂದುಗುಂಬಳಕಾಯಿ ಹೊಡೆಯಿರಿ)
ಮಕರ ರಾಶಿ: ಅತಿಯಾದ ಆಲಸ್ಯ, ದುಃಖ ಮನಸ್ಸಿನಲ್ಲಿ ದುಗುಡ, ಒಳ್ಳೆಯ ಧನಾಗಮನ, ಪುತ್ರ ಮಿತ್ರರೊಂದಿಗೆ ಸಂತೋಷದಿಂದ ಕಾಲ ಕಳೆಯುವ ಸುದಿನ. (ಪರಿಹಾರಕ್ಕಾಗಿ ಶಿವನ ದೇವಾಲಯದಲ್ಲಿ ಅರ್ಚನೆ ಮಾಡಿಸಿ)
ಕುಂಭ ರಾಶಿ: ಸಂಪೂರ್ಣ ಲಕ್ಷ್ಮಿಯ ಕೃಪಾಕಟಾಕ್ಷ, ಪೂರ್ವ ಪುಣ್ಯದಿಂದ ದೇವಸ್ಥಾನದಲ್ಲಿ ಅರ್ಚನೆ ಪೂಜೆ ಮಾಡಿಸುವ ಸುದಿನ, ಧನ ಲಾಭ, ಒಳ್ಳೆಯದಾಗುತ್ತದೆ. (ಪರಿಹಾರಕ್ಕಾಗಿ ಸೋಮೇಶ್ವರನ ಪೂಜೆಯನ್ನು ಮಾಡಿಸಿ)
ಮೀನ ರಾಶಿ: ಎಲ್ಲ ಕಾರ್ಯಗಳಲ್ಲಿ ಜಯ. ಶುಭಫಲ, ಅತ್ಯಂತ ಶ್ರೇಷ್ಠವಾದ ಆನಂದ. ಧರ್ಮಕಾರ್ಯಗಳಲ್ಲಿ ಆಸಕ್ತಿ, ಕಾರ್ಯಸಿದ್ಧಿ, ಜಯ ನಿಮ್ಮದಾಗಿರುತ್ತದೆ. (ಪರಿಹಾರಕ್ಕಾಗಿ ಭಗವಂತ ಶ್ರೀ ಕೃಷ್ಣನ ಸ್ಮರಣೆಯನ್ನು ಮಾಡಿ)
ರಾಹುಕಾಲ: 7-30AM ರಿಂದ 9-00AM
ಗುಳಿಕಕಾಲ: 1-30PM ರಿಂದ 3-00PM
ಯಮಗಂಡಕಾಲ: 10-30AMರಿಂದ 12-00PM
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮರು, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572