ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ಚತುರ್ದಶಿ ಭಾನುವಾರ. ಡಿಸೆಂಬರ್ 29, 2024: ಶಿವನಿಗೆ ಬಿಲ್ವಪತ್ರೆಯಿಂದ ಪೂಜೆ ಮಾಡಿ ದಿನವನ್ನು ಆರಂಭಿಸಿ..ಸಂಪೂರ್ಣ ಶುಭವಾಗುತ್ತದೆ. Astrology
ಮೇಷ ರಾಶಿ: ಅವಕಾಶಗಳಿಗಾಗಿ ಯೋಚನೆ ಅನುಕೂಲಪ್ರಾಪ್ತಿ. ಧನಾರ್ಜನೆ, ಸ್ವಲ್ಪ ಎಲ್ಲ ವಿಷಯಗಳ ನಿರಾಸಕ್ತಿ, ಜೀವನ ವಿಫಲವಾಯಿತು ಎಂಬ ಆತಂಕ. (ಪರಿಹಾರಕ್ಕಾಗಿ ಕೃಷ್ಣನ ಪೂಜೆಯನ್ನು ಮಾಡಿ)
ವೃಷಭ ರಾಶಿ: ಅಜ್ಞಾನ ನಾಶ, ಅನಾರೋಗ್ಯ, ಎಲ್ಲರ ಜೊತೆ ಒಳ್ಳೆಯ ಮಾತುಕತೆ, ಸಂತೃಪ್ತಿ, ಆರೋಗ್ಯದಲ್ಲಿ ವ್ಯತ್ಯಾಸ ಸಾಧ್ಯತೆ, ಯೋಚನೆ. (ಪರಿಹಾರಕ್ಕಾಗಿ ಈಶ್ವರಿ ದೇವಿಯ ಸ್ತೋತ್ರವನ್ನು ಪಾರಾಯಣ ಮಾಡಿ)
ಮಿಥುನ ರಾಶಿ: ಎಷ್ಟೇ ಧೈರ್ಯದಿಂದ ಮುನ್ನುಗಿದರು ಕಾರ್ಯದಲ್ಲಿ ವಿಳಂಬ, ಚಿಂತೆ. ಎಲ್ಲ ಸಹವಾಸಗಳಿಂದ ದೂರ ಸರಿಯಬೇಕೆಂಬ ಭಾವನೆ, ಅನಾರೋಗ್ಯ ಬಾಧೆ. (ಪರಿಹಾರಕ್ಕಾಗಿ ಆಂಜನೇಯ ಸ್ಮರಣೆ ಮಾಡಿ)
ಕಟಕ ರಾಶಿ: ಮಾತುಗಳಿಂದ ಸ್ವಲ್ಪ ಮನಸ್ಸಿಗೆ ಕಿರಿಕಿರಿ, ಸ್ವಲ್ಪ ಅನಾರೋಗ್ಯ. ದುಃಖ, ಆಯಾಸ, ದುಗುಡ. ವಿದ್ಯಾಭ್ಯಾಸ ಮಾಡುವವರಿಗೆ ಸುಖ. (ಪರಿಹಾರಕ್ಕಾಗಿ ಸೂರ್ಯನಾರಾಯಣ ಮಂತ್ರ ಜಪ ಮಾಡಿ)
ಸಿಂಹ ರಾಶಿ: ಒಳ್ಳೆಯ ಧನಾರ್ಜನೆ, ದುಃಖ ದುಗುಡದಿಂದ ದೂರ ಖುಷಿಯಾಗಿರುವ ಕ್ಷಣಗಳನ್ನು ಸದಾ ಅನುಭವಿಸಿ. ಅಹಂಕಾರದಿಂದ ಸ್ವಲ್ಪ ಮನಸ್ಸನ್ನು ದೂರ ಇರಿಸಿ. (ಪರಿಹಾರಕ್ಕಾಗಿ ದುರ್ಗಾದೇವಿ ಆರಾಧನೆಯನ್ನು ಮಾಡಿಕೊಳ್ಳಬೇಕು.)
ಕನ್ಯಾ ರಾಶಿ: ಧನಾಮದಲ್ಲಿ ಕೊರತೆ. ಇಲ್ಲಸಲ್ಲದ ವಿಚಾರಗಳಿಗೆ ಅನಾವಶ್ಯಕ ಕಿರಿಕಿರಿ, ಎಲ್ಲಾ ವ್ಯವಸ್ಥೆಯಿಂದಲೂ ಸ್ವಲ್ಪ ದೂರ. ಕೆಲಸಗಳ ವಿಳಂಬ, ಸರ್ಕಾರಿ ಕಾರ್ಯಗಳಿಗೆ ತಿರುಗಾಟ, ಹಣದ ವ್ಯಯ. (ಪರಿಹಾರಕ್ಕಾಗಿ ದತ್ತ ಸ್ತೋತ್ರ ಪಾರಾಯಣ ಮಾಡಬೇಕು)
ತುಲಾ ರಾಶಿ: ಕೆಲಸ ಕಾರ್ಯಗಳಲ್ಲಿ ನಾನಾ ತೊಂದರೆ. ಕೈ ಹಿಡಿದ ಕಾರ್ಯಮುಟ್ಟುವುದು, ವಿಶ್ವಾಸದ ಕೊರತೆ, ಸಂಸಾರದಲ್ಲಿ ಸಾಮರಸ್ಯ. ಬಂಧು ಬಾಂಧವರ ಜೊತೆ ವೃತ ಚೀರಾಟ, ಕಿರುಚಾಟ ಸಾಧ್ಯತೆ. (ಪರಿಹಾರಕ್ಕಾಗಿ ಅಮ್ಮನವರಿಗೆ ನಿಂಬೆಹಣ್ಣಿನ ದೀಪಗಳನ್ನು ಹಚ್ಚುವುದು)
ವೃಶ್ಚಿಕ ರಾಶಿ: ಕಾರ್ಯ ವಿಳಂಬವಾದರೂ ಮುನ್ನುಗ್ಗ ಬೇಕೆಂಬ ಬಯಕೆ ಇನ್ನೂ ಶಾಶ್ವತ. ದೃಢವಾದ ನಿರ್ಧಾರ, ಶ್ರೇಷ್ಠವಾದ ಸಾಧನೆ ಶುಭಮಸ್ತು, ಉತ್ತಮ ವಿಚಾರದ ಕೈಗೆ ಸಿಕ್ಕಗೊಂಬೆಯಂತೆ ವರ್ತನೆ. (ಪರಿಹಾರಕ್ಕಾಗಿ ಹನುಮಾನ್ ಚಾಲೀಸಾ ಪಾರಾಯಣ)
ಧನಸ್ಸು ರಾಶಿ: ಎಲ್ಲ ಕಾರ್ಯಗಳಲ್ಲಿ ಜಯ, ಧನಾಗಮನ. ಶುಭ ವಿಷಯಗಳು ಮನಸ್ಸಿಗೆ ಸಂತೋಷ, ಅರಿಷ್ಟ ನಿವಾರಣೆ ಆದರೂ ಸ್ವಲ್ಪ ಕಿರಿಕಿರಿ. (ಪರಿಹಾರಕ್ಕಾಗಿ ಶಿವನಿಗೆ ರುದ್ರಾಭಿಷೇಕ)
ಮಕರ ರಾಶಿ: ಮನಸ್ಸಿನಲ್ಲಿ ಚಿಂತೆಯಿದ್ದರೂ ನಿವಾರಣೆ ಮಾಡಿಕೊಳ್ಳಬೇಕೆಂಬ ಹಂಬಲ. ನಿಧಾನವಾಗಿ ಪ್ರಶಾಂತತೆಯತ್ತ ಸಾಗಬೇಕೆಂಬ ತವಕ, ಜಲ ಭಯ ಚಿಂತೆ. (ಪರಿಹಾರಕ್ಕಾಗಿ ಆಂಜನೇಯ ಸ್ತೋತ್ರವನ್ನು ಜಪ ಮಾಡಿ)
ಕುಂಭ ರಾಶಿ: ಅನಾವಶ್ಯಕ ತಿರುಗಾಟ. ಸ್ವಲ್ಪ ನಷ್ಟ, ಸಮಸ್ಯೆಗಳ ಮಧ್ಯದಲ್ಲೇ ಬದುಕಬೇಕೆಂಬ ಪ್ರಯತ್ನ, ಕಷ್ಟವು ನಷ್ಟವು ಸ್ವಲ್ಪ ಜಾಸ್ತಿ. (ಪರಿಹಾರಕ್ಕಾಗಿ ದುರ್ಗಾ ಸಪ್ತಶತಿ ಹನ್ನೊಂದನೇ ಅಧ್ಯಾಯ ಪಾರಾಯಣ ಮಾಡಿ)
ಮೀನ ರಾಶಿ: ಒಳ್ಳೆಯ ವಿಚಾರ ಕೇಳುವಿರಿ. ಶುಭವಾದ ದಿವಸ, ಪೂರ್ವಾರ್ಜಿತ ಸಂಪತ್ತು ಹಿಂತಿರುಗುತ್ತದೆ. ಜೀವನ ಹಿಗ್ಗಿನಲ್ಲಿ ಕಳೆಯುತ್ತದೆ. ಒಳ್ಳೆಯ ದಿನ. (ಪರಿಹಾರಕ್ಕಾಗಿ ನಾರಾಯಣ ನಾಮ ಸ್ಮರಣೆ ಮಾಡಿ)
ರಾಹುಕಾಲ: 4-30AM ರಿಂದ 6-00PM
ಗುಳಿಕಕಾಲ: 3-00ರಿಂದ 4-35AM
ಯಮಗಂಡಕಾಲ: 12-00PMರಿಂದ 1-30PM
ಹೆಚ್ಚಿನ ಮಾಹಿತಿಗಾಗಿ: ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ,
ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ, ಇಲ್ತೊರೆ ಗ್ರಾಮ. ದೇವನಹಳ್ಳಿ ತಾಲ್ಲೂಕು, ಬೆಂಗಳೂರು ಗ್ರಾಮಾಂತರ ಜಿಲ್ಲೆ: 562110. ಮೊ-9945170572