ಹರಿತಲೇಖನಿ

Accident: ಕಾರು- ಬಸ್ ನಡುವೆ ಅಪಘಾತ.. 2 ಸಾವು..!

ಸಾಗರ: ಕಾರು ಮತ್ತು ಖಾಸಗಿ ಬಸ್ ನಡುವೆ ಮುಖಾಮುಖಿ ಡಿಕ್ಕಿಯಾದ (Accident) ಪರಿಣಾಮ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರಂ ಬಳಿ ಸಂಭವಿಸಿದೆ.

ಮೃತರನ್ನು ದೇವನಹಳ್ಳಿ ತಾಲೂಕಿನ ಪಂಡಿತ್ ಪುರದ ನಿವಾಸಿ ಅಕ್ಷಯ್ (28 ವರ್ಷ) ಹಾಗೂ ಶರಣ್ (26ವರ್ಷ) ಎಂದು ಗುರುತಿಸಲಾಗಿದೆ.

ದೇವನಹಳ್ಳಿಯಿಂದ ಹೊನ್ನಾವರಕ್ಕೆ ಹೊರಟಿದ್ದ ಅವರ ಕಾರು ಸಾಗರದಿಂದ ಶಿವಮೊಗ್ಗಕ್ಕೆ ತೆರಳುತ್ತಿದ್ದ ವೇಳೆ ಖಾಸಗಿ ಬಸ್ ಗೆ ಡಿಕ್ಕಿ ಹೊಡೆದಿದೆ.

ಪರಿಣಾಮ ಇಬ್ಬರು ಯುವಕರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಮೊದಲಿಗೆ ಮೃತ ಇಬ್ಬರನ್ನೂ ದೊಡ್ಡಬಳ್ಳಾಪುರ ಮೂಲದವರು ಎಂದುಸುದ್ದಿವಾಹಿನಿಗಳಲ್ಲಿ ವರದಿಯಾಗಿತ್ತು. ಆದರೆ ಬಳಿಕ ದೇವನಹಳ್ಳಿ ತಾಲೂಕಿನವರು ಎಂದು ಪೊಲೀಸರು ತಿಳಿಸಿದ್ದಾರೆ.

ಸದ್ಯ ಘಟನೆ ಸಂಬಂಧಪಟ್ಟಂತೆ ಸ್ಥಳಕ್ಕೆ ಆನಂದಪುರಂ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ.

Exit mobile version