ಬೆಂಗಳೂರು: ದೇಶಕ್ಕೆ ಮಾದರಿಯಾಗಿದ್ದ ಕರ್ನಾಟಕ ರಾಜ್ಯದ ಸಾರಿಗೆ ಇಲಾಖೆಯನ್ನು ಆರ್ಥಿಕವಾಗಿ ದುರ್ಬಲಗೊಳಿಸಿದ ಅಪಖ್ಯಾತಿ ಕಾಂಗ್ರೆಸ್ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ (shakti scheme) ಹೇಳಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ನಿಗಮದ ನಾಲ್ಕೂ ಸಂಸ್ಥೆಗಳಿಂದ ಬರೋಬ್ಬರಿ ₹6,468 ಕೋಟಿ ರೂಗಳಿಗೂ ಹೆಚ್ಚು ಬಾಕಿ ಹೊರೆಯಿದ್ದು, ನಾಲ್ಕು ನಿಗಮಗಳೂ ನಷ್ಟದ ಹಾದಿ ಹಿಡಿದಿರುವ ದುರ್ದೈವವೇ ಸರಿ.
ವೇತನ ಪರಿಷ್ಕರಣೆಯಾಗಿ 38 ತಿಂಗಳು ಕಳೆದರೂ ಬಾಕಿ ಪಾವತಿಸಿಲ್ಲದಿರುವುದು ‘ಶಕ್ತಿʼ ಯೋಜನೆಯಿಂದ ಸಾರಿಗೆ ಇಲಾಖೆ ನಿಶಕ್ತಿಗೊಂಡು ದಿವಾಳಿಯ ಅಂಚಿಗೆ ಸಾಗಿರುವುದನ್ನು ಸಾಕ್ಷೀಕರಿಸುತ್ತಿದೆ.
ಸಾರಿಗೆ ನಿಗಮಗಳಿಗೆ ಶಕ್ತಿ ತುಂಬಿ, ನೌಕರರ ಬಾಕಿ ಹಣ ಪಾವತಿ ಮಾಡದಿದ್ದರೆ, ಸದ್ಯದಲ್ಲೇ ಸಾರಿಗೆ ನೌಕರರ ಮುಷ್ಕರದ ಬಿಸಿ ಕಾಂಗ್ರೆಸ್ ಸರ್ಕಾರಕ್ಕೆ ತಟ್ಟಲಿದೆ. ನಾಡಿನ ಜನರಿಂದಲೇ ಹಾದಿ ಬೀದಿಯಲ್ಲಿ ಛೀಮಾರಿ ಹಾಕಿಸಿಕೊಳ್ಳುವ ಕಾಲ ದೂರವಿಲ್ಲ ಎಂದು ಎಚ್ಚರಿಸಿದ್ದಾರೆ.