ತ್ಯಾಮಗೊಂಡ್ಲು: ಪಾಠ ಹೇಳಿ, ಜ್ಞಾನಾರ್ಜನೆ ಮಾಡಿಸಿ ಬದುಕಿಗೆ ಬೆಳಕಾದ ಪ್ರಾಥಮಿಕ ಶಾಲಾ ಶಿಕ್ಷಕರನ್ನು ಎಂದಿಗೂ ಮರೆಯಬಾರದು ಎಂಬಂತೆ 1997-98 ನೇ ಸಾಲಿನ ವಿದ್ಯಾರ್ಥಿಗಳು (Old students) ತಿಪ್ಪಶೆಟ್ಟಿಹಳ್ಳಿ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿ ಗುರುವಂದನಾ ಕಾರ್ಯಕ್ರಮ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮ ನಡೆಸಿಕೊಟ್ಟರು.
ಗುರುಗಳ ಸೇವೆಯನ್ನು ಸ್ಮರಿಸುವುದು ಮತ್ತು ಅವರಿಗೆ ಪ್ರತ್ಯಕ್ಷವಾಗಿ ಧನ್ಯತೆ ಸಮರ್ಪಣೆ ಮಾಡುವುದು ಸಾರ್ಥಕ ಕಾರ್ಯ. ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿರುವ ಹಿರಿಯ ವಿದ್ಯಾರ್ಥಿಗಳು ಶಾಲೆಯಲ್ಲಿ ಶಿಕ್ಷಣ ಕಲಿಸಿದ ಗುರುಗಳನ್ನು ಸತ್ಕರಿಸಿ ಸನ್ಮಾನಿಸಿದರು.
ಈ ವೇಳೆ ನಿವೃತ್ತ ಶಿಕ್ಷಕರಾದ ಮೂರ್ಕಣ್ಣಯ್ಯ (RMK), ವೀರಭದ್ರಯ್ಯ (TVV), ಕುಮಾರಸ್ವಾಮಿ (CGK), ನಂಜುಡಯ್ಯ (KN), ಹನುಮಯ್ಯ (HN), ಪಂಚಾಕ್ಷರಯ್ಯ (NP), ಹಾಗೂ ಹಾಲಿ ಶಿಕ್ಷಕರಾದ ರಾಘವೇಣಿ (NVR), ಚನ್ನಬಸವಯ್ಯ (TRC) ಮತ್ತಿತರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ಮಾಕನಕುಪ್ಪೆ, ತಿಮ್ಮೇಗೌಡ ಶಾಲೆಯ 1997-98 ನೇ ಸಾಲಿನ ವಿದ್ಯಾರ್ಥಿಗಳು ಭಾಗವಹಿಸಿದ್ದರು.