Site icon ಹರಿತಲೇಖನಿ

Beware: ಬ್ಯಾಂಕ್‌ಗಳ ಹೆಸರಲ್ಲಿ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌: ಡೌನ್‌ಲೋಡ್ ಮಾಡಬೇಡಿ

ದೊಡ್ಡಬಳ್ಳಾಪುರ: ವಾಟ್ಸಪ್ ಬಳಸುವಾಗ ಎಚ್ಚರ (Beware) ಇತ್ತೀಚಿಗೆ ಸೈಬರ್ ವಂಚಕರು ಮುಗ್ದ ಜನರನ್ನು ಗುರಿಯಾಗಿಸಿಕೊಂಡು ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್ಗಳನ್ನು ಸೃಷ್ಟಿಸಿ ವಾಟ್ಸಾಪ್ ಹಾಗೂ ಇನ್ನಿತರ ಆ್ಯಪ್‌ ಗಳ ಮೂಲಕ ಗ್ರೂಪ್ ಗಳಿಗೆ ರವಾನಿಸುತ್ತಿದ್ದಾರೆ.

ಇಂತಹ apk ಲಿಂಕ್‌ಗಳ ಮೇಲೆ ಕ್ಲಿಕ್ ಮಾಡಿದಾಗ ನಕಲಿ ಆಪ್ ಡೌನ್ಲೋಡ್ ಆಗುತ್ತದೆ. ಆಪ್ಲಿಕೇಶನ್‌ ಅನ್ನು ಬಳಸುವಾಗ ಗ್ರಾಹಕರ ಬ್ಯಾಂಕಿಂಗ್ ವಿವರಗಳನ್ನು ಕದ್ದು, ಹಣವನ್ನು ಖಾತೆಯಿಂದ ವರ್ಗಾಯಿಸಲಾಗುತ್ತದೆ ಎಂಬ ದೂರು ವ್ಯಾಪಕವಾಗಿದೆ.

apk ಆ್ಯಪ್‌ಗಳಲ್ಲಿನ ಮಾಲ್‌ವೇರ್ ನಿಂದ ಸಾವಿರಾರು ಗ್ರಾಹಕರ ಖಾತೆ ಮತ್ತು ಕ್ರೆಡಿಟ್ ಕಾರ್ಡ್ ವಿವರಗಳು ಸೈಬರ್ ವಂಚಕರ ಪಾಲಾಗಿದೆ ಎನ್ನಲಾಗುತ್ತಿದೆ.

ನಕಲಿ ಅಪ್ಲಿಕೇಶನ್‌ಗಳು ಎಸ್‌ಬಿಐ, ಐಸಿಐಸಿಐ, ಆಕ್ಸಿಸ್, ಇಂಡಿಯನ್ ಓವರ್‌ಸೀಸ್, ಬಿಒಬಿ, ಯುಕೊ, ಯೆಸ್ ಬ್ಯಾಂಕ್ ಮತ್ತು ಸಿಟಿ ಬ್ಯಾಂಕ್‌ಗಳಂತಹ ಹಲವು ಬ್ಯಾಂಕ್‌ಗಳನ್ನು ಗುರಿಯಾಗಿಸಿಕೊಂಡಿವೆ.

ಈ ನಕಲಿ ಆಂಡ್ರಾಯ್ಡ್ ಅಪ್ಲಿಕೇಶನ್‌ಗಳು ಆಯಾ ಬ್ಯಾಂಕ್‌ಗಳ ಲೋಗೋ ಬಳಸುತ್ತಿದ್ದು, ಗ್ರಾಹಕರಿಗೆ ನಕಲಿ ಮತ್ತು ಮೂಲ ಅಪ್ಲಿಕೇಶನ್‌ಗಳ ನಡುವೆ ವ್ಯತ್ಯಾಸವನ್ನು ಕಂಡುಹಿಡಿಯುವುದು ಕಷ್ಟಕರವಾಗಿದೆ.

ಆದ್ದರಿಂದ ವಾಟ್ಸಪ್ ಮೂಲಕ ಬರುವ ಯಾವುದೇ ಅನುಮಾನಾಸ್ಪದ ಆಪ್ಲಿಕೇಶನ್‌ ಅನ್ನು ಡೌನ್ಲೋಡ್ ಮಾಡದಿರಿ. ಬ್ಯಾಂಕ್‌ಗಳಿಂದ ಕಳುಹಿಸಲಾಗುವ ಯಾವುದೇ ಸಂದೇಶಗಳಲ್ಲಿ ಲಿಂಕ್‌ಗಳು ಇದ್ದರೆ ಅವುಗಳನ್ನು ಕ್ಲಿಕ್ ಮಾಡುವ ಮೊದಲು ಪರಿಶೀಲಿಸಿರಿ.

ಹೆಚ್ಚಿನ ಮಾಹಿತಿಗಾಗಿ ರಾಷ್ಟ್ರೀಯ ಸೈಬರ್ ವಂಚನೆ ಸಹಾಯವಾಣಿ ಸಂಖ್ಯೆ 1930 ಕರೆಮಾಡಿ ಎಂದು ಜೆಡಿಎಸ್ ಯುವ ಮುಖಂಡ ಉದಯ್ ಆರಾಧ್ಯ ಮನವಿ ಮಾಡಿದ್ದಾರೆ.

Exit mobile version