Astrology: ಶ್ರೀ ಕ್ರೋಧಿನಾಮ ಸಂವತ್ಸರ ಮಾರ್ಗಶಿರ ಕೃಷ್ಣ ದ್ವಾದಶಿ ಶುಕ್ರವಾರ., ದಿನಾಂಕ 27,12, 2024: ಮನೆಯಲ್ಲಿ ಉತ್ತರಕ್ಕೆ ಮುಖ ಮಾಡಿರುವ ದೇವಿಯನ್ನು ಕೆಂಪು ಕಣಗಿಲ ಹೂವಿನಿಂದ ಪೂಜೆ ಮಾಡಿ ದಿನವನ್ನು ಆರಂಭಿಸಿ ಶುಭವಾಗುತ್ತದೆ.
ಮೇಷ ರಾಶಿ: ಅತ್ಯಂತ ಲಾಭದಾಯಕವಾದ ದಿನವಾಗಿದ್ದು ಸಾಲಕೊಟ್ಟ ದುಡ್ಡು ವಾಪಸ್ ಆಗುತ್ತದೆ. ವಿದ್ಯಾಭ್ಯಾಸ ಅನುಕೂಲಕರ. ಅನಾರೋಗ್ಯ ಬಾಧೆ ,ಮಾನಸಿಕ ಕಿರಿಕಿರಿ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ತಿರುಗಾಟವಾದರೂ ಅನುಕೂಲವಾಗುತ್ತದೆ.
(ಪರಿಹಾರ; ವಿಷ್ಣು ಸಹಸ್ರನಾಮದ 61ನೇ ಶ್ಲೋಕವನ್ನು ಜಪಿಸಿ)
ವೃಷಭ ರಾಶಿ: ಸೋದರ ಸೋದರಿಯರ ನಡುವೆ ಮನಸ್ತಾಪ, ಮನಸ್ಸಿನಲ್ಲಿ ನಾನಾ ಗೊಂದಲ ಚಿಂತೆ, ಕೆಲಸ ಕಾರ್ಯಗಳಲ್ಲಿ ಅಸಡ್ಡೆ. ಮಿತ್ರರಿಂದ ಧನ ಸಹಾಯ ,ಮಾತೃ ವಾತ್ಸಲ್ಯ.
(ಪರಿಹಾರ; ಶಿವನ ನಾಮ ಮಂತ್ರವನ್ನು 108 ಬಾರಿ ಜಪಿಸಿ)
ಮಿಥುನ ರಾಶಿ: ಅನುಕೂಲಕ್ಕಿಂತಲೂ ಕೆಲವು ವಿಷಯಗಳಲ್ಲಿ ಅನಾನುಕೂಲವೇ ಹೆಚ್ಚು. ವ್ಯವಹಾರದ ಬಗ್ಗೆ ಗಮನಹರಿಸಿ, ಚಿಕ್ಕ ಪುಟ್ಟ ವೈಮನಸ್ಯ ಉಂಟಾಗುತ್ತದೆ ದೃಢವಾದ ನಿರ್ಧಾರವಿಲ್ಲ ಕಣ್ಣಿನ ರೋಗದ ಬಗ್ಗೆ ಎಚ್ಚರವಿರಲಿ.
(ಪರಿಹಾರ; ಸೂರ್ಯ ಮಂಡಲ ಸ್ತೋತ್ರ ಜಪಮಾಡಿ)
ಕಟಕ ರಾಶಿ: ಸಮಸ್ಯೆಗಳಿದ್ದರೂ ನಿಗ್ರಹಿಸಬೇಕೆಂಬ ಹಠ, ಮುನ್ನುಗ್ಗಬಹುದು ಸುತ್ತಮುತ್ತ ಇರುವವರ ಬಗ್ಗೆ ಎಚ್ಚರಿಕೆ ಬೇಕು.,ಒಳ್ಳೆ ವಿದ್ಯೆ ಬುದ್ದಿವಂತಿಗೆ ಇದೆ, ಪ್ರಯತ್ನವನ್ನು ಬಿಡಬೇಡಿ.
(ಪರಿಹಾರ; ದುರ್ಗೆಯ ದೇವಸ್ಥಾನದಲ್ಲಿ ನಿಂಬೆ ಹಣ್ಣಿನ ದೀಪ ಹಚ್ಚಿ)
ಸಿಂಹ ರಾಶಿ: ಸ್ವಲ್ಪ ಸಮಾಧಾನದಿಂದ ಧನಾರ್ಜನೆ, ಕಿರಿಕಿರಿ ಇದ್ದರೂ ಮುನ್ನುಗ್ಗಿ ಪಡೆಯುವ ಪ್ರಯತ್ನ ವಿಶ್ವಾಸ ಎಲ್ಲವೂ ಶುಭವಾಗಿದೆ. ವ್ಯವಹಾರದಲ್ಲಿ ಉನ್ನತ ಅನುಕೂಲಗಳಾಗುತ್ತವೆ.
(ಪರಿಹಾರ; ನಾರಾಯಣಿ ಸ್ತುತಿಯನ್ನು 11 ಬಾರಿ ಕೇಳಿ)
ಕನ್ಯಾ ರಾಶಿ: ಸುಮ್ಮನೆ ವಿವಾದ ಅನಾನುಕೂಲವಾದ ಮಾತು ಚಿಂತನೆ ದೊಡ್ಡದು, ಪ್ರಯತ್ನ ಅತ್ಯಂತ ಕಡಿಮೆ, ಪಿತ್ರಾರ್ಜಿತ ಆಸ್ತಿ ಹಣಕ್ಕಾಗಿ ಹಂಬಲ.ತಿರುಗಾಟ, ನಾಲ್ಕು ತಿಂಗಳಿಂದ ಇದೆ ಸಮಸ್ಯೆ.
(ಪರಿಹಾರ;ಮನೆಯಲ್ಲಿ ದುರ್ಗಾ ಸಪ್ತಶತಿ ಪಾರಾಯಣ ಮಾಡಿಸಿ)
ತುಲಾ ರಾಶಿ: ಹೊಸದಾದ ಚಿಂತನೆಗಳು ಬಹಳ ಅನುಕೂಲ, ವ್ಯವಹಾರವನ್ನು ಪ್ರಾರಂಭಿಸಬಹುದು, ಸ್ವಲ್ಪ ಆಭಿಚಾರ ತಂತ್ರದ ಭಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ನೆನಪಿನ ಶಕ್ತಿ ಕೊರತೆ.
(ಪರಿಹಾರ: ಧ್ಯಾನ ತರಗತಿಗಳಿಗೆ ಸೇರಿಕೊಳ್ಳಿ ಹಾಗೂ ಪ್ರತಿ ಸೋಮವಾರ ಶಿವನಿಗೆ 11 ಬಿಲ್ವಪತ್ರೆಯನ್ನು ಪೂಜೆಗೆ ಕೊಡಿ)
ವೃಶ್ಚಿಕ ರಾಶಿ: ಒಳ್ಳೆಯ ಬುದ್ದಿ ಶಕ್ತಿಯೊಂದಿಗೆ ವಿದ್ಯೆಯ ಸಮಾಗಮ, ದೃಢವಾದ ನಿರ್ಧಾರ ಲಕ್ಷ್ಮಿಪ್ರಾಪ್ತಿ, ಸ್ವಲ್ಪ ಆರೋಗ್ಯ ವ್ಯತ್ಯಾಸ, ಧನ ಲಾಭದಲ್ಲಿ ಮಾನಸಿಕ ಬೇಸರ, ಸ್ವಲ್ಪ ಘರ್ಷಣೆ.
(ಪರಿಹಾರ; ಗಣಪತಿಗೆ 21 ಗರಿಕೆ ಇಂದ ಪೂಜಿಸಿ)
ಧನಸ್ಸು ರಾಶಿ: ಶ್ರೇಷ್ಠವಾದ ವ್ಯಕ್ತಿತ್ವ ಚಿಂತನೆ ಮಾನಸಿಕ ನೆಮ್ಮದಿ, ತಾಯಿಯ ಆರೋಗ್ಯದ ಬಗ್ಗೆ ಕಾಳಜಿ ಅವಶ್ಯ, ವಿದ್ಯೆಗಾಗಿ ಮನಸ್ಸನ್ನು ಏಕಾಗ್ರಗೊಳಿಸಬೇಕು ವೈರತ್ವ ಎಲ್ಲರನ್ನೂ ದೂರ ಮಾಡುತ್ತದೆ ಎಚ್ಚರ.
(ಪರಿಹಾರ;ದತ್ತಾತ್ರೇಯರ ಅಥವಾ ದಕ್ಷಿಣ ಮೂರ್ತಿಗಳ ಸಾನಿಧ್ಯದಲ್ಲಿ ಪೂಜೆ ಮಾಡಿಸಿ)
ಮಕರ ರಾಶಿ: ದ್ರವ್ಯ ಲಾಭದಲ್ಲಿ ಸ್ವಲ್ಪ ಕಿರಿಕಿರಿ, ಬಂಧು ಮಿತ್ರರ ಜೊತೆ ಒಳ್ಳೆಯ ಒಡನಾಟ, ಸಣ್ಣಪುಟ್ಟ ಅಪಘಾತಗಳು, ವಿಪರೀತ ಬುದ್ಧಿವಂತರಂತೆ ಯೋಚಿಸಿದರೂ ಪ್ರಯೋಜನವಿಲ್ಲ.
(ಪರಿಹಾರ: ಭದ್ರಕಾಳಿಯ ದೇವಸ್ಥಾನದಲ್ಲಿ ಅಮ್ಮನವರಿಗೆ ಕೆಂಪು ಪುಷ್ಪಗಳಿಂದ ಪೂಜೆ)
ಕುಂಭ ರಾಶಿ: ಅಸಡ್ಡೆ ಮನಸ್ಸಿನಲ್ಲಿ ಅನಾವಶ್ಯಕ ಸೋಂಬೇರಿತನ, ಮುನ್ನುಗ್ಗ ಬೇಕೆಂಬ ಆಸೆ ಆದರೆ ಸಾಧ್ಯವಾಗುವುದಿಲ್ಲ, ದೃಢತೆ ಬಹಳ ಮುಖ್ಯ ,ಆರೋಗ್ಯದ ಬಗ್ಗೆ ಎಚ್ಚರ ಅವಶ್ಯ, ವಿಪರೀತ ಆಸೆ ಬೇಡ ಒಳ್ಳೆಯದಾಗುತ್ತದೆ.
(ಪರಿಹಾರ: ಶಿವನಿಗೆ ಹಾಲಿನ ಅಭಿಷೇಕ)
ಮೀನ ರಾಶಿ: ವ್ಯಕ್ತಿತ್ವದ ಬಗ್ಗೆ ಬೇಸರ ದೃಢವಾದ ಶರೀರವಿದ್ದರೂ ದೇಹ ಆರೋಗ್ಯದ ಬಗ್ಗೆ ಚಿಂತೆ ,ಕೆಲಸ ಕಾರ್ಯಗಳಲ್ಲಿ ಮಾನಸಿಕವಾಗಿ ನೆಮ್ಮದಿ, ಮುನ್ನುಗ್ಗುವ ಧೈರ್ಯ ಪ್ರಶಂಸೆ ಧನಾಗಮ ಸ್ವಲ್ಪ ವಿಳಂಬ, ಪ್ರಯತ್ನವನ್ನು ನಿಲ್ಲಿಸಬಾರದು ಶುಭವಾಗುತ್ತದೆ.
(ಪರಿಹಾರ: ನವನಾಗ ಸ್ತೋತ್ರ 11 ಬಾರಿ ಪಾರಾಯಣ ಮಾಡಿ)
ರಾಹುಕಾಲ: 10-57AM ರಿಂದ 12-24PM
ಗುಳಿಕಕಾಲ: 8-06AM ರಿಂದ 9-35AM
ಯಮಗಂಡಕಾಲ: 3-15PMರಿಂದ 4-43PM
ಹೆಚ್ಚಿನ ಮಾಹಿತಿಗೆ:
ಜ್ಯೋತಿಶ್ಯಾಸ್ತ್ರವಿಶಾರದ, ಜ್ಯೋತಿರ್ವಿದ್ಯಾರತ್ನ ಎನ್ ಎಸ್ ಶರ್ಮ, ಪ್ರಧಾನ ಪುರೋಹಿತರು ಮತ್ತು ಆಗಮಿಕರು, ಶ್ರೀ ವಾಗ್ವಾದಿನೀ ಜ್ಯೋತಿಷ ಕೇಂದ್ರ: ಮೊ-9945170572