ದೊಡ್ಡಬಳ್ಳಾಪುರ: ಚಾಲಕನ ನಿಯಂತ್ರಣ ತಪ್ಪಿದ ಕಾರು ಡಿಕ್ಕಿ (Accident) ಹೊಡೆದ ಪರಿಣಾಮ ಮಹಿಳೆಯೋರ್ವರು ಸಾವನಪ್ಪಿರುವ ಘಟನೆ ಯಲಹಂಕ- ಹಿಂದೂಪುರ ನಡುವಣ ರಾಜ್ಯ ಹೆದ್ದಾರಿ ಗೊಲ್ಲಹಳ್ಳಿ ಬಳಿ ಸಂಭವಿಸಿದೆ.
ಮೃತ ದುರ್ದೈವಿಯನ್ನು ಗೊಲ್ಲಹಳ್ಳಿ ಗ್ರಾಮದ 48 ವರ್ಷದ ನಾಗರತ್ನಮ್ಮ ಎಂದು ಗುರುತಿಸಲಾಗಿದೆ.
ಮೃತ ನಾಗರತ್ನಮ್ಮ ಜಮೀನಿನ ಬದಿಯಲ್ಲಿ ಬೆಳೆದಿದ್ದ ಗಿಡದಲ್ಲಿ ಹೂ ಬಿಡಿಸುವ ವೇಳೆ, ಗೌರಿಬಿದನೂರು ಕಡೆಯಿಂದ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ ಏಕಾಏಕಿ ರಸ್ತೆ ಬದಿ ಅಳವಡಿಸಿದ್ದ ತಂತಿ ಬೇಲಿ ನುಗ್ಗಿ ಬಂದ ಡಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ.
ಘಟನೆಯಲ್ಲಿ ಮತ್ತೋರ್ವ ಮಹಿಳೆ 38 ವರ್ಷದ ನಾಗರತ್ನ ಎನ್ನುವವರಿಗೂ ತಲೆಗೆ ತೀವ್ರವಾದ ಗಾಯಗಳಾಗಿದ್ದು, ಆಸ್ಪತ್ರೆ ಕರೆದೊಯ್ಯಲಾಗಿದೆ.
ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆ ವ್ಯಾಪ್ತಿಯ ಘಟನೆ ಸಂಭವಿಸಿದೆ