ದೊಡ್ಡಬಳ್ಳಾಪುರ (Doddaballapura): ಜಮ್ಮು ಕಾಶ್ಮೀರದಲ್ಲಿ ಅಪಘಾತಕ್ಕೆ ಈಡಾಗಿ ಹುತಾತ್ಮರಾದ ವೀರ ಯೋಧರಿಗೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದಿಂದ ಶ್ರದ್ಧಾಂಜಲಿ ಸಲ್ಲಿಸಲಾಯಿತು.
ನಗರದ ಡಿಕ್ರಾಸ್ ಬಳಿಯಿರುವ ಡಾ.ರಾಜ್‌ಕುಮಾರ್ ವೃತ್ತದಲ್ಲಿ ಹುತಾತ್ಮ ಯೋಧರಾದ ಮಹೇಶ್ ಮರಿಗೊಂಡ, ಅನೂಪ್, ದಯಾನಂದ ತಿರಕಣ್ಣನವರ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಶ್ರದ್ಧಾಂಜಲಿ ಸಲ್ಲಿಸಲಾಯಿತು.
ಬಳಿಕ ಮಾಧ್ಯಮದವರ ಜೊತೆ ಮಾತನಾಡಿದ ನಗರ ಘಟಕದ ಅಧ್ಯಕ್ಷ ಶ್ರೀನಗರ ಬಶೀರ್, ಯೋಧರ ಬದುಕು, ಜೀವನ, ವೃತ್ತಿ ಅತ್ಯಂತ ಉನ್ನತವಾದದು. ನಮ್ಮ ರಾಜ್ಯದ ಯೋಧರು ಅಪಘಾತದಲ್ಲಿ ಹುತಾತ್ಮರಾಗಿರುವುದು ಅತ್ಯಂತ ನೋವಿನ ಸಂಗತಿ.
ಅಪಘಾತದಲ್ಲಿ ಮಡಿದ ಮೂವರು ಯೋಧರ ಆತ್ಮಕ್ಕೆ ಶಾಂತಿ ಕೋರುತ್ತಾ, ಅವರ ಕುಟುಂಬದವರ ನೋವಿನಲ್ಲಿ ನಾವುಗಳು ಭಾಗಿಯಾಗುತ್ತೇವೆ. ರಾಜ್ಯ ಸರ್ಕಾರ ಕೂಡಲೇ ಹೆಚ್ಚಿನ ಮೊತ್ತದ ಪರಿಹಾರ ಘೋಷಿಸಬೇಕು ಎಂದರು.
ಇದನ್ನೂ ಓದಿ; Doddaballapura; ಮಿತಿಮೀರಿದ ಭ್ರಷ್ಟಾಚಾರ..!: ಅಧಿಕಾರಿಗಳ ಗ್ರಹಚಾರ ಬಿಡಿಸಿದ ಸಚಿವ ಕೃಷ್ಣ ಬೈರೇಗೌಡ.. Video ನೋಡಿ
ಈ ವೇಳೆ ಕರವೇ ಪ್ರವೀಣ್ ಕುಮಾರ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಹಮಾಮ್ ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ಎಸ್‌ಎಲ್‌ಎನ್ ವೇಣು, ಜೋಗಳ್ಳಿ ಅಮ್ಮು, ಮುಕ್ಕೆನಹಳ್ಳಿ ರವಿ, ಆನಂದ, ನೂರುಲ್ಲ, ಮುನಿರಾಜು ಮತ್ತಿತರರಿದ್ದರು.