ದೊಡ್ಡಬಳ್ಳಾಪುರ: ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ಗುರುವಾರ ಬೆಳಿಗ್ಗೆ 10 ಗಂಟೆರ ಸುಮಾರಿಗೆ ತಾಲ್ಲೂಕು ಕಚೇರಿ, ಉಪವಿಗಾಧಿಕಾರಿಗಳ ಹಾಗೂ ನೋಂದಣಿ ಅಧಿಕಾರಿಗಳ ಕಚೇರಿಗೆ ದಿಢೀರ್ ಭೇಟಿ ನೀಡಿದ್ದರು.
ಈ ಸಂದರ್ಭದಲ್ಲಿ ಸಾರ್ವಜನಿಕರ ಹೊರತು ಯಾರೊಬ್ಬರ ಸರ್ಕಾರಿ ಅಧಿಕಾರಿಗಳು ಇಲ್ಲದೆ ಇರುವುದು ಕಂಡು ಜಿಲ್ಲಾಧಿಕಾರಿಗಳಿಗೆ ಕರೆ ಮಾಡಿ ತೀವ್ರ ತರಾಟೆಗೆ ತೆಗೆದುಕೊಂಡರು.
ಏನಿದು ಇಲ್ಲಿನ ಅಧಿಕಾರಿಗಳ ಅವ್ಯವಸ್ಥೆ ಡಿಸಿಯವರೆ. ಇಡೀ ತಾಲ್ಲೂಕು ಕಚೇರಿ ಸುತ್ತಾಡಿದರು ಅಧಿಕಾರಿಗಳ ಖುರ್ಚಿಗಳು ಖಾಲಿ ಇವೆ. ಬೆಳಿಗ್ಗೆ 10.20 ಆಗಿದ್ದರು ಸಹ ತಾಲ್ಲೂಕು ಕಚೇರಿ, ಎಸಿ ಕಚೇರಿಯಲ್ಲಿ ನೋಣಗಳ ಹೊರತು ಒಬ್ಬ ಅಧಿಕಾರಿಯ ಸುಳಿವು ಇಲ್ಲವಾಗಿದೆ.
ಇಂತಹವರಿಂದ ನಾವು ಹೇಗೆ ಕೆಲಸ ನಿರೀಕ್ಷೆ ಮಾಡಲು ಸಾಧ್ಯ ? ಇದನ್ನು ಯಾರಾದರು ತಾಲ್ಲೂಕು ಕಚೇರಿ, ಎಸಿ ಕಚೇರಿ ಅಂತ ಕರೆಯುವ ಅರ್ಹತೆ ಉಳಿಸಿಕೊಂಡಿದೆಯ ? ತಾವೇ ಬಂದು ನೋಡಿ ಇಲ್ಲಿನ ಆನಂದವನ್ನ ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಗುಡುಗಿದರು.
ಕಂದಾಯ ಸಚಿವರು ಕಚೇರಿ ಭೇಟಿ ನೀಡಿದ ಸುಮಾರು ಅರ್ಧ ಗಂಟೆಗಳ ನಂತರ ಒಬ್ಬೊಬ್ಬರೆ ಅಧಿಕಾರಿಗಳು ಬರತೊಡಗಿದರು. ಸಚಿವರು 11.30ರ ಸುಮಾರಿಗೆ ತಾಲ್ಲೂಕು ಕಚೇರಿಯಿಂದ ಹೊರಡುವಾಗಲು ಸಹ ತಾಲ್ಲೂಕು ಕಚೇರಿಯಲ್ಲಿನ ಭೂಮಿ ದಾಖಲೆಗಳ(ಅಭಿಲೇಖನಾಲಯ)ವಿತರಣೆ ಕೊಠಡಿ ಬಾಗಿಲು ಮುಚ್ಚಿಯೇ ಇತ್ತು.
ತಾಲ್ಲೂಕು ಕಚೇರಿಯಲ್ಲಿನ ಅರ್ಧಕ್ಕು ಹೆಚ್ಚಿನ ಅಧಿಕಾರಿಗಳು 11 ಗಂಟೆಯ ನಂತರ ಬರುತ್ತಿರುವುದನ್ನು ಕಂಡು ಆಫೀಸಿಗೆ ಬರಲು ಹೊತ್ತುಗೊತ್ತು ಇಲ್ವಾ..? ನೀವ್ ಬಂದಾಗ ಆಫೀಸ್ ಅಷ್ಟೇ..? ಎಂದು ನಿಗದಿತ ಸಮಯಕ್ಕೆ ಕರ್ತವ್ಯಕ್ಕೆ ಹಾಜರಾಗದ ಅಧಿಕಾರಿ ಬೇಜವಬ್ದಾರಿ ವರ್ತನೆ ಕುರಿತು ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೆ. ತಾಲೂಕು ಕಚೇರಿಯಲ್ಲಿಮ ಭ್ರಷ್ಟಾಚಾರದ ಕುರಿತು ಕಠಿಣ ಮಾತುಗಳು ಬೇಸರ ವ್ಯಕ್ತಪಡಿಸಿದರು.
ಯಾರ್ರಿ ಅದು ಚೇತನ್, ಆ ಮಹಾನುಭಾವನ ದರ್ಶನ ಮಾಡಲು ಬಂದಿದ್ದೇನೆ. ಜನ ಕೊಂಡಾಡ್ತಾ ಇದ್ದಾರೆ ಅವರ ಕಾರ್ಯ ವೈಖರಿಯ ಬಗ್ಗೆ.. ಒಂದ್ ಕೆಲಸ ಮಾಡೀಮಾ ಯಾವ ಯಾವ ಕೆಲಸಕ್ಕೆ ಎಷ್ಟು ಅಂತ ಬೋರ್ಡ್ ಹಾಕಿಬಿಡಿ, ಅಟ್ಲೀಸ್ಟ್ ಫೀಕ್ಸ್ ಮಾಡಿಬಿಡಿ, ಓಗ್ಲಿ ಅದ್ ಆದ್ರೂ ಮಾಡಿ ಬಿಡಿ, ಚೌಕಾಸಿ ಮಾಡೋದು ತಪ್ಪುತ್ತೆ.
ಅಧಿಕೃತ ಮಾಡಿಬಿಡಿ ಎಲ್ಲವನ್ನು, ಇಷ್ಟು ಪರ್ಸಂಟೇಜ್ ಕೊಡದಿದ್ದರೆ ಕೆಲಸ ಆಗಲ್ಲ.. ಇಷ್ಟು ಪರ್ಸಂಟೇಜ್ ಮಂತ್ರಿಗೆ ಹೋಗುತ್ತೆ.. ಅದನ್ನು ಹಾಕಿಬಿಡಿ ಪರ್ವಾಗಿಲ್ಲ ಎಂದು ಎರಡು ಕೈಜೋಡಿಸಿ ಕೈ ಮುಗಿದು ಬಿಟ್ಟರು.
ಸ್ಥಳಕ್ಕೆ ಓಡೋಡಿ ಬಂದ ಜಿಲ್ಲಾಧಿಕಾರಿ ಶಿವಶಂಕರ್ ಅವರಿಗೆ, ಸರ್ವೇ ಇಲಾಖೆ, ಕಂದಾಯ ಇಲಾಖೆಯ ಬಹುತೇಕ ಜನ ಅಧಿಕಾರಿಗಳು ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡದೇ ಹಾಗೂ ಇತರೆ ಕೆಲಸಗಳ ಮೇಲೆ ಹೊರಗೆ ಹೋಗಿರುವ ಬಗ್ಗೆ ಹಾಜರಾತಿ ಪುಸ್ತಕದಲ್ಲಿ ನಮೋದಿಸದೆ ಇರುವ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ತಾಲ್ಲೂಕು ಕಚೇರಿಯಲ್ಲಿ ನಡೆಯುತ್ತಿರುವ ವ್ಯಾಪಕ ಭ್ರಷ್ಟಾಚಾರ, ರೈತರೊಂದಿಗೆ ಅಧಿಕಾರಿಗಳ ನಡವಳಿಕೆ ಸೇರಿದಂತೆ ಹಲವಾರು ದೂರುಗಳನ್ನು ಸಾರ್ವಜನಿಕರು ಸಚಿವರ ಗಮನಕ್ಕೆ ತಂದರು.
ತಾಲ್ಲೂಕು ಕಚೇರಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಕಂದಾಯವ ಸಚಿವ ಕೃಷ್ಣಬೈರೇಗೌಡ, ಜ.1 ರಿಂದ ರಾಜ್ಯದ ಎಲ್ಲಾ ಕಂದಾಯ ದಾಖಲೆಗಳ ಡಿಜಿಟಲಿಕರಣ ‘ಭೂ ಸುರಕ್ಷ’ ಯೋಜನೆ ಪ್ರಾರಂಭವಾಗಲಿದೆ. ಎಲ್ಲಾ ದಾಖಲೆಗಳು ಆನ್ಲೈನ್ನಲ್ಲಿ ದೊರೆಯಲಿವೆ. ದಾಖಲೆಗಳನ್ನು ತಿದ್ದಲು ಅವಕಾಶ ಇರುವುದಿಲ್ಲ.
ಈ ಹಿಂದೆ ಸಾಕಷ್ಟು ದಾಖಲೆಗಳನ್ನು ತಿದ್ದಿರುವ ಬ್ಗೆ ದೂರುಗಳು ಇವೆ. ಮುಂದಿನ ದಿನಗಳಲ್ಲಾದರು ಕಂದಾಯ ದಾಖಲೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ದೊರೆಯಬೇಕು. ಕಂದಾಯ ಇಲಾಖೆಯಲ್ಲಿ ತರಲಾಗುತ್ತಿರುವ ಸುಧಾರಣೆಗಳು ಮತ್ತಷ್ಟು ತೀವ್ರವಾಗಲಿವೆ. ಕಂದಾಯ ಇಲಾಖೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕುವ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದರು.
ಬಾಯಿಗೆ ಬಂದಂತೆ ಉತ್ತರ ಕೊಡುವುದನ್ನು ಬಿಡಿ
ಮಹಿಳಾ ಅಧಿಕಾರಿಗಳು ಅಂತ ಅತ್ಯಂತ ಮರ್ಯಾದೆಯಿಂದ ಮಾತನಾಡುತ್ತಿರುವೆ. ತಾವು ಮಾತ್ರ ಬಾಯಿಗೆ ಬಂದಂತೆ ಉತ್ತರ ಕೊಡುವುದನ್ನು ಬಿಟ್ಟು ಕನಿಷ್ಠ ನನ್ನ ಮಾತಿಗೆ ಮರ್ಯಾದೆ ನೀಡಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ತಹಶಿಲ್ದಾರ್ ವಿರುದ್ಧ ಹರಿಹಾಯ್ದರು.
ಕಚೇರಿಯ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡುವ ಕನಿಷ್ಠ ಸಮಯವು ಇಲ್ಲಿನ ಅಧಿಕಾರಿಗಳಿಗೆ ಇಲ್ಲದಾಗಿದೆ. ತಾವೊಬ್ಬ ಸಾರ್ವಜನಿಕ ಸೇವಕರು ಅನ್ನುವುದನ್ನೇ ಅಧಿಕಾರಿಗಳು ಮರೆತಿದ್ದಾರೆ ಎಂದರು.