ಹುಬ್ಬಳ್ಳಿ: ನಗರದ ಉಣಕಲ್ ಕ್ರಾಸ್ ಬಳಿಯ ಅಚ್ಚವ್ವ ಕಾಲೋನಿಯಲ್ಲಿ ಅಯ್ಯಪ್ಪ ಮಾಲಾಧಾರಿಗಳು (Ayyappaswamy garland) ಮಲಗಿದ್ದ ಕೊಠಡಿಯಲ್ಲಿಯೇ ಸಿಲಿಂಡರ್ ಸ್ಫೋಟಗೊಂಡು ಇಬ್ಬರು ಸಾವನ್ನಪ್ಪಿರುವ ದುರಂತ ಘಟನೆ ನಡೆದಿದೆ.
ಈ ಘಟನೆಯಿಂದ ಬೇಸತ್ತು ಅದೇ ತಂಡದಲ್ಲಿದ್ದ ಅಯ್ಯಪ್ಪ ಮಾಲಾಧಾರಿಯೊಬ್ಬರು ಮಾಲೆಯನ್ನು ತೆಗೆದಿದ್ದಾರೆ.
ಸಿಲಿಂಡರ್ ಸ್ಫೋಟದಿಂದ ಚಿಕಿತ್ಸೆ ಫಲಿಸದೆ ಮಾಲಾಧಾರಿಗಳಾಗಿದ್ದ ನಿಜಲಿಂಗಪ್ಪ ಬೇಪೂರು ಹಾಗೂ ಸಂಜಯ್ ಸವದತ್ತಿ ಅವರ ದುರ್ಮರಣದಿಂದ ಬೇಸರಗೊಂಡು ಮಂಜುನಾಥ ಅವರು ಮಾಲೆಯನ್ನು ತೆಗೆದಿದ್ದಾರೆ.
ಘಟನೆಯಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾಗಿ ಮಂಜುನಾಥ್ ತಿಳಿಸಿದ್ದಾರೆ.
ಘಟನೆಯಲ್ಲಿ ಗಾಯಗೊಂಡಿರುವ ಉಳಿದ 7 ಜನರಿಗೆ ಚಿಕಿತ್ಸೆ ಮುಂದುವರಿದಿದೆ. ಈ ಬಗ್ಗೆ ಮಾತನಾಡಿರುವ ಮಂಜುನಾಥ್, ಉಳಿದ 7 ಜನರ ಜೀವ ಉಳಿಸಿಕೊಡು ಎಂದು ಅಯ್ಯಪ್ಪ ಸ್ವಾಮಿಯಲ್ಲಿ ಬೇಡಿಕೊಳ್ಳುತ್ತೇನೆ. ಉಳಿದ 7 ಜನರ ಜೀವ ಉಳಿದರೆ ಮಾತ್ರ ಮುಂದೆ ಅಯ್ಯಪ್ಪ ಮಾಲೆ ಧರಿಸುತ್ತೇನೆ ಎಂದು ಮಂಜುನಾಥ್ ಕಣ್ಣೀರು ಹಾಕಿದ್ದಾರೆ.