ಗುರುವಾರ, ಡಿ. 26, 2024, ದೈನಂದಿನ ರಾಶಿ ಭವಿಷ್ಯ| Astrology
ಮೇಷ ರಾಶಿ: ಒಂದು ನಿರ್ದಿಷ್ಟ ಭಾವನಾತ್ಮಕ ಒಳಗೊಳ್ಳುವಿಕೆ ಈಗ ಕುತೂಹಲದ ಹಂತದ ಮೂಲಕ ಹಾದುಹೋಗುತ್ತಿದೆ. ರೈತರಿಗೆ ಹೆಚ್ಚಿನ ವ್ಯಾಪಾರವಾಗಲಿದೆ.
ವೃಷಭ ರಾಶಿ: ಸಮಸ್ಯೆಗಳು ತಲೆ ದೋರಬಹುದು, ಅವುಗಳಿಂದ ದೂರ ಉಳಿಯಲು ಗೊಂದಲಗಳು ಎದುರಾಗಬಹುದು. ನಿಮ್ಮ ಜವಾಬ್ದಾರಿಯನ್ನು ಅರಿತು ಮುಂದೆ ಹೆಜ್ಜೆ ಇಡಿ.
ಮಿಥುನ ರಾಶಿ: ನಿಮ್ಮ ವೈಯಕ್ತಿಕ ವ್ಯವಹಾರಗಳು ಇತರರಿಗೆ ಸಮಸ್ಯೆಗಳನ್ನು ತಂದೊಡ್ಡಬಹುದು. ಕೇಳಿಸಿಕೊಂಡಿದ್ದೆಲ್ಲವೂ ಸತ್ಯವೇ ಎಂದು ನಂಬದಿರಿ. ಸತ್ಯಾಸತ್ಯತೆಗಳನ್ನು ಪರಿಶೀಲಿಸಿ.
ಕಟಕ ರಾಶಿ: ಕೌಟುಂಬಿಕ ಸಂಬಂಧಗಳಲ್ಲಿ ಬಿರುಕುಗಳು ಮೂಡಬಹುದು ಜಾಗರೂಕರಾಗಿರಿ. ಉತ್ತಮ ಆಲೋಚನೆಗಳು ನಿಮ್ಮ ಮನದಲ್ಲಿರಲಿ. ಮನಸ್ಸು ಹಿಡಿತದಲ್ಲಿಟ್ಟುಕೊಳ್ಳಿ.
ಸಿಂಹ ರಾಶಿ: ಪ್ರತಿಯೊಂದು ಪ್ರಯತ್ನದಲ್ಲೂ ಯಶಸ್ವಿಯಾಗುತ್ತೀರಿ. ಪ್ರತಿಷ್ಠಿತ ವ್ಯಕ್ತಿಯತ್ತ ಆಕರ್ಷಿತ ರಾಗಬಹುದು.ಅನಗತ್ಯ ಒತ್ತಡವು ನಿಮಗೆ ದೈಹಿಕ ಅಸ್ವಸ್ಥತೆಯನ್ನು ನೀಡುತ್ತದೆ.
ಕನ್ಯಾ ರಾಶಿ: ಇತರರ ಮೇಲಷ್ಟೇ ನಿಯಮ ಹೇರುವುದಲ್ಲ,ನೀವು ನಿಯಮಗಳನ್ನು ಪಾಲಿಸಿ. ಪ್ರಯಾಣ ಸಾಧ್ಯತೆಗಳಿವೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನಹರಿಸಿ.
ತುಲಾ ರಾಶಿ: ಮನೆ ಮತ್ತು ಕುಟುಂಬ ಸಂಬಂಧಗಳ ಕುರಿತು ನಿರ್ಧಾರ ಕೈಗೊಳ್ಳಲು
ಉತ್ತಮ ಸಮಯವಿದು.
ವೃಶ್ಚಿಕ ರಾಶಿ: ಹೊಸ ವ್ಯವಹಾರ, ವ್ಯಾಪಾರ ಆರಂಭಿಸಲು ಇದು ಸಕಾಲವಾಗಿದೆ. ಆದ್ದರಿಂದ ನೀವು ಈಗಾಗಲೇ ತಿರಸ್ಕರಿಸಲಾದ ಪ್ರಸ್ತಾಪಗಳನ್ನು ಪ್ರಸ್ತುತ ಪಡಿಸಲು ಪ್ರಯತ್ನಿ ಸಬಹುದು.
ಧನಸ್ಸು ರಾಶಿ: ವೃತ್ತಿ ಮತ್ತು ವೃತ್ತಿಪರ ವ್ಯವಹಾರಗಳಿಗೆ ನ್ಯಾಯ ಯುತವಾಗಿ ಜಯಸಿಗಲಿದೆ, ಎಲ್ಲಕ್ಕಿಂತ ಹೆಚ್ಚಾಗಿ ನೀವು ನಿಮ್ಮ ಸ್ವಂತ ಆಲೋಚನೆಗಳನ್ನು ಮಾಡಿ.
ಮಕರ ರಾಶಿ: ನೀವು ದುಡುಕಿನ ನಿರ್ಧಾರಗಳು ಮತ್ತು ಹಠಾತ್ ಕ್ರಿಯೆಗಳಿಗೆ ಪ್ರಚೋದನೆಗೆ ಒಳಗಾಗುತ್ತೀರಿ, ಈ ಪ್ರವೃತ್ತಿ ಇಂದು ಪ್ರಬಲವಾಗಿದ್ದರೂ, ದಿನಪೂರ್ತಿ ಮುಂದುವರಿಯಬಹುದು.
ಕುಂಭ ರಾಶಿ: ಇತರರು ಒಪ್ಪದಿದ್ದರೆ ತಲೆಕೆಡಿಸಿಕೊಳ್ಳದಿರಿ. ನಿಮ್ಮ ಖಾಸಗಿ ಜೀವನದಲ್ಲಿ ನೀವು ಏನು ಮಾಡುತ್ತೀರಿ ಎಂಬುದು ನಿಮಗೆ ಬಿಟ್ಟದ್ದು. ಮನೆಯವರೊಂದಿಗೆ ಕೆಲ ಕಾಲ ಸಮಯ ಕಳೆಯಿರಿ. ಮನಸ್ಸಿಗೆ ಸಮಾಧಾನ ಸಿಗಲಿದೆ.
ಮೀನ ರಾಶಿ: ಕಚೇರಿ ಕೆಲಸದಲ್ಲಿ ಒತ್ತಡ ಹೆಚ್ಚಾಗಲಿದ್ದು, ಪರಿಸ್ಥಿತಿ ಎದುರಿಸುವುದು ಅನಿವಾರ್ಯ ವಾಗಿದೆ. ಸುಳ್ಳು ಸುದ್ದಿಗಳಿಗೆ ಕಿವಿಗೊಡದಿರಿ. ಭಾವನಾತ್ಮಕ ಸಮಸ್ಯೆಗಳು ಎದುರಾದರೆ ಸಮಾಧಾನದಿಂದ ಪರಿಹರಿಸಲು ಯತ್ನಿಸಿ.
ರಾಹುಕಾಲ: 01:30 ರಿಂದ 03:00
ಗುಳಿಕಕಾಲ: 09:00 ರಿಂದ 10:30
ಯಮಗಂಡಕಾಲ: 06:00 ರಿಂದ 07:30