ದೊಡ್ಡಬಳ್ಳಾಪುರ: ಸ್ಯಾಂಡಲ್ವುಡ್ ನಟ, ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್‌ಕುಮಾರ್ (Shivarajkumar) ಅವರಿಗೆ ಇಂದು ಸರ್ಜರಿ ನಡೆಯಲಿದೆ.
ಅನಾರೋಗ್ಯದ ಕಾರಣ ಸರ್ಜರಿಗಾಗಿ ಅಮೇರಿಕಾ ತೆರಳಿರುವ ಶಿವಣ್ಣ ಅವರ ಆರೋಗ್ಯಕ್ಕಾಗಿ ಅಭಿಮಾನಿಗಳು ಪ್ರಾರ್ಥಿಸಿದ್ದಾರೆ. ಇಂದು ನಡೆಯಲಿರುವ ಶಸ್ತ್ರಚಿಕಿತ್ಸೆಯಲ್ಲಿ ಶಿವಣ್ಣ ಚೇತರಿಕೆಗಾಗಿ ಇಂದು ಪೂಜೆ ನೆರವೇರಿದ್ದು ಪ್ರಾರ್ಥನೆ, ವಿಶೇಷ ಪೂಜೆ ನಡೆದಿದೆ.
ತಾಲೂಕಿನ ಇತಿಹಾಸ ಪ್ರಸಿದ್ಧ ಘಾಟಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಅರ್ಚನೆ, ಪೂಜೆ ನಡೆದಿದ್ದು, ಶಿವಣ್ಣನ ಹಾರೈಕೆಗಾಗಿ ಅಭಿಮಾನಿಗಳಿಂದ ವಿಶೇಷ ಪೂಜೆ ನಡೆಸಲಾಯಿತು.
ಅಭಿಮಾನಿಗಳಾದ ಚೌಡರಾಜ್, ಬಾಶೆಟ್ಟಿಹಳ್ಳಿ ವೆಂಕಟೇಶ್, ಕೆಂಪರಾಜ್ ಮತ್ತಿತ್ತರರು ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೋಂಡು, ಶಿವಣ್ಣ ಆರೋಗ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಿದರು.