ಮೈಸೂರು: ಚಿಕಿತ್ಸೆ ಹಿನ್ನೆಲೆಯಲ್ಲಿ ಖ್ಯಾತ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ (Darshan) ನಗರದ ಕಾಮಾಕ್ಷಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಈ ವೇಳೆ ನೆಚ್ಚಿನ ಡಿ ಬಾಸ್ ಅವರನ್ನು ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ಅಶ್ಲೀಲ ಸಂದೇಶ ಕಳುಹಿಸಿದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದ ನಂತರ ಜಾಮೀನು ಪಡೆದು ಕಳೆದವಾರ ವಷ್ಟೇ ಮೈಸೂರಿಗೆ ದರ್ಶನ್ ಆಗಮಿಸಿದ್ದಾರೆ.
ಇಂದು ಕಾಮಾಕ್ಷಿ ಆಸ್ಪತ್ರೆಯಲ್ಲಿ ದರ್ಶನ್‌ಗೆ ತಪಾಸಣೆ ಮುಕ್ತಾಯವಾಗಿದ್ದು ಕೇವಲ ಎಕ್ಸ್ ರೇ ತೆಗೆಸಿಕೊಂಡು ಆಸ್ಪತ್ರೆಯಿಂದ ತೆರಳಿದ್ದಾರೆ ಎಂದು ವರದಿಯಾಗಿದೆ.
ನ್ಯಾಯಂಗ ಬಂಧನ, ಆಸ್ಪತ್ರೆ ದಾಖಲು ಮುಂತಾದ ಕಾರಣಗಳಿಂದ ಅಭಿಮಾನಿಗಳಿಗೆ ಡಿಬಾಸ್ ಅವರ ದರ್ಶನ ಆಗಿರಲಿಲ್ಲ. ಇಂದು ಆಸ್ಪತ್ರೆಯಿಂದ ಫಾರ್ಮ್ ಹೌಸ್ ಕಡೆಗೆ ಹೊರಟ ದರ್ಶನ್ ನೋಡಲು ಅಭಿಮಾನಿಗಳು ಮುಗಿಬಿದ್ದಿದ್ದಾರೆ.
ದರ್ಶನ್ ಆಸ್ಪತ್ರೆಗೆ ಬರುವ ವಿಚಾರ ತಿಳಿದ ಹಿನ್ನೆಲೆ ಆಸ್ಪತ್ರೆ ಆವರಣದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಬೆಂಬಲಿಗರು ಜಮಾವಣೆಗೊಂಡಿದ್ದರು.
ಡಿಬಾಸ್ ಕೂಗು ಮುಗಿಲು ಮುಟ್ಟಿತ್ತು. ಸಾಮಾಜಿಕ ಜಾಲತಾಣದಲ್ಲಿ ಪೋಟೋ ಮತ್ತು ವಿಡಿಯೋಗಳು ವೈರಲ್ ಆಗಿವೆ.