ಮಳವಳ್ಳಿ: ಅಪಘಾತದಲ್ಲಿ ಮಗನ ಸಾವಿನ ಸುದ್ದಿ ಕೇಳಿದ ತಾಯಿ ಕುಸಿದು ಬಿದ್ದು ಪ್ರಾಣ ಬಿಟ್ಟಿರುವ ಘಟನೆ (Heartbreaking incident) ತಾಲೂಕಿನ ನೆಟ್ಕಲ್ ಗ್ರಾಮದಲ್ಲಿ ನಡೆದಿದೆ.
ಶನಿವಾರ ಮಹದೇವಮ್ಮನ ಮಗ ಕೃಷ್ಣಮೂರ್ತಿ (20 ವರ್ಷ) ದ್ವಿಚಕ್ರ ವಾಹನದಲ್ಲಿ ತೆರಳುವಾಗ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಗಾಯಗೊಂಡಿದ್ದ ಕೃಷ್ಣಮೂರ್ತಿಯನ್ನ ಸ್ಥಳೀಯರು ಮೈಸೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಕೃಷ್ಣಮೂರ್ತಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.
ಕೃಷ್ಣಮೂರ್ತಿ ಅಪಘಾತದಲ್ಲಿ ಜೀವ ಬಿಟ್ಟ ಸುದ್ದಿಯನ್ನ ಗ್ರಾಮಸ್ಥರು ಮಹದೇವಮ್ಮನವರಿಗೆ ತಿಳಿಸಿದ್ದಾರೆ. ಮಗ ಇನ್ನಿಲ್ಲ ಅನ್ನೋ ಸುದ್ದಿ ಕೇಳುತ್ತಿದ್ದಂತೆ ಮಹದೇವಮ್ಮ ಕುಸಿದು ಬಿದ್ದಿದ್ದಾರೆ. ಈ ವೇಳೆ ಸ್ಥಳೀಯರು ಮಹದೇವಮ್ಮರನ್ನು ಆಸ್ಪತ್ರೆಗೆ ಕರೆದೊಯ್ದರು ಯಾವುದೇ ಪ್ರಯೋಜನವಾಗಿಲ್ಲ.
ಗ್ರಾಮಸ್ಥರು ತಾಯಿ, ಮಗನನ್ನು ಅಕ್ಕಪಕ್ಕಲ್ಲಿಟ್ಟು ಅಂತ್ಯಸಂಸ್ಕಾರ ಮಾಡಿದ್ದಾರೆ.