ದೊಡ್ಡಬಳ್ಳಾಪುರ: ರೈತ ದಿನಾಚರಣೆ (Farmer’s Day) ರೈತರಿಗೆ ಇರುವ ವಿಶೇಷ ದಿನ. ಮನೆ ಮಂದಿ ಎಲ್ಲ ಸೇರಿ, ಊರವರು ಸೇರಿ ಆಚರಿಸುವ ಪರಿಕಲ್ಪನೆಯು ಈ ದಿನದ ವಿಶೇಷವಾಗಿದೆ.
ಆಧುನಿಕತೆ ಬೆಳೆದಂತೆ ಈ ಆಚರಣೆಗಳು ಕಣ್ಮರೆಯಾಗುತ್ತಿದೆ. ಆದರೆ ದೊಡ್ಡಬಳ್ಳಾಪುರ ತಾಲೂಕಿನ ರೈತ ಕುಮಾರ್ ಎನ್ನುವವರು ಮತ್ತೆ ಗ್ರಾಮದಲ್ಲಿ ರೈತ ದಿನಾಚರಣೆಯನ್ನು ವಿಶೇಷವಾಗಿ ಆಚರಿಸಿ ಗಮನ ಸೆಳೆದಿದ್ದಾರೆ.
ತಾಲೂಕಿನ ಅಣಬೆ ಸಮೀಪದ ಚಿಕ್ಕನಹಳ್ಳಿ ಗ್ರಾಮದಲ್ಲಿ ಕುಮಾರ್ ಎನ್ನುವವರು ರೈತ ದಿನಾಚರಣೆ ಅಂಗವಾಗಿ ಬೆಳೆದ ರಾಗಿಯನ್ನು ಗುಡ್ಡೆ ಮಾಡಿ, ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಕಾರ್ಯಕ್ರಮದಲ್ಲಿ ಗ್ರಾಮದ ರೈತರೆಲ್ಲರೂ ಭಾಗವಹಿಸಿ ಸಂಭ್ರಮಿಸಿದರು. ಈ ವೇಳೆ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಗ್ರಾಮದ ಮುನಿರಾಜು, ರಮೇಶ್, ಸಂಪಂಗಿ ರಾಮಯ್ಯ, ಮುನೇಗೌಡ, ಸಂಜಯ್, ಅಜಯ್, ನವೀನ್, ಮತ್ತಿತರರಿದ್ದರು.