ಬೆಳಗಾವಿ: ಮದವೇರಿದ್ದ ಆನೆ ತುಳಿದು (elephant attack) ಮಾವುತ ಸಾವನ್ನಪ್ಪಿರುವಂತಹ ದಾರುಣ ಘಟನೆ ಜಿಲ್ಲೆಯ ರಾಯಭಾಗ ತಾಲೂಕಿನ ಅಲಖನೂರು ಗ್ರಾಮದಲ್ಲಿ ನಡೆದಿದೆ.
ಅಲಖನೂರ ಕರಿಸಿದ್ದೇಶ್ವರ ದೇವಾಲಯದ ಧ್ರುವ ಆನೆ ತುಳಿತಕ್ಕೆ ಮಾವುತ 32 ವರ್ಷದ ಧರೆಪ್ಪ ಭೇವನೂರ ಸಾವನ್ನಪ್ಪಿದ್ದಾರೆ.
ಭಾನುವಾರ ರಾತ್ರಿ ಆನೆಗೆ ಮದವೇರಿತ್ತು ಆದರೆ ನಂತರ ಹತೋಟಿಗೆ ಬಂದಿತ್ತು ಎನ್ನಲಾಗಿದೆ. ಆದರೆ ಇಂದು ಬೆಳಗ್ಗೆ ಮಾವುತನ ಆನೆಗೆ ಮೇವು ಹಾಕಲು ಹೋದಾಗ ದಾಳಿ ನಡೆಸಿದೆ. ಆನೆ ತುಳಿತಕ್ಕೊಳಗಾಗಿ ಧರಪ್ಪ ಭೇವನೂರ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತ ಧರೆಪ್ಪ ಭೇವನೂರಗೆ ಕಳೆದ 10 ದಿನಗಳ ಹಿಂದಷ್ಟೇ ಗಂಡು ಮಗು ಜನಿಸಿತ್ತು. ಇದೀಗ ಆತನನ್ನು ಕಳೆದುಕೊಂಡ ಕುಟುಂಬ ಕಂಗಾಲಾಗಿದ್ದು, ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.