CT Ravi ಪ್ರಕರಣ; ಬಿಜೆಪಿಗೆ ಮಹತ್ವದ ಸಲಹೆ ಕೊಟ್ಟ ಹೆಚ್.ಡಿ.ಕುಮಾರಸ್ವಾಮಿ

ಹಾಸನ: ಸಿಟಿ ರವಿ (CT Ravi) ಪ್ರಕರಣದಲ್ಲಿ ಬೆಳಗಾವಿ ಪೊಲೀಸರು ನಡೆದುಕೊಂಡ ರೀತಿಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು, ಬಿಜೆಪಿ ಸ್ನೇಹಿತರು ಸರಿಯಾದ ರೀತಿಯಲ್ಲಿ ಕಾನೂನು ಹೋರಾಟ ಮಾಡಿದರೆ ಪ್ರಕರಣಕ್ಕೆ ಸಂಬಂಧಪಟ್ಟ ಎಲ್ಲಾ ಪೊಲೀಸ್ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗುತ್ತಾರೆ ಎಂದರು.

ಹೊಳೆನರಸೀಪುರ ತಾಲೂಕಿನ ಹರದನಹಳ್ಳಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಕೇಂದ್ರ ಸಚಿವರು, ರಾಜ್ಯಸಭೆಯಲ್ಲಿನ ಅಮಿತ್ ಶಾ ಅವರ ಹೇಳಿಕೆ ಬಗ್ಗೆ ಇವರು ವಿಧಾನಸಭೆಯಲ್ಲಿ ಚರ್ಚೆ ಮಾಡಿದ್ದಾರೆ. ಇದು ರಾಜ್ಯಸಭೆಯಲ್ಲಿ ಪ್ರಾರಂಭವಾದದ್ದು. ಈ ವಿಷಯ ಆ ಸದನಕ್ಕೆ ಸಂಬಂಧಪಟ್ಟ ವಿಷಯ. ಅಮಿತ್ ಶಾ ಅವರು ವಿಧಾನ ಪರಿಷತ್ ಸದಸ್ಯರಾ? ಎಂದು ಅವರು ಖಾರವಾಗಿ ಪ್ರಶ್ನಿಸಿದರು.

ಉತ್ತರ ಕರ್ನಾಟಕದ ಸಮಸ್ಯೆ ಬಗ್ಗೆ ಚರ್ಚೆಗೆ ವಿಶೇಷವಾದ ಅವಕಾಶ ಕೊಡುತ್ತೇವೆ ಎಂದು ಡಂಗೂರ ಹೊಡೆದರು. ನಿನ್ನೆಯೂ ಒಬ್ಬ ಹೆಣ್ಣುಮಗಳು ಬಳ್ಳಾರಿಯಲ್ಲಿ ಮಗುವಿಗೆ ಜನ್ಮ ಕೊಡುವಾಗ ತೀರಿಕೊಂಡಿದ್ದಾಳೆ. ಪ್ರತಿನಿತ್ಯ ಈ ಸಾವುಗಳು ಸಂಭವಿಸುತ್ತಿವೆ. ಇದ್ಯಾವುದರ ಬಗ್ಗೆ ರಾಜ್ಯ ಸರಕಾರಕ್ಕೆ ಕಿಂಚಿತ್ತೂ ಚಿಂತೆ ಇಲ್ಲ ಎಂದು ಕೇಂದ್ರ ಸಚಿವರು ಕಟುವಾಗಿ ಟೀಕಿಸಿದರು.

ಈ ಸರಕಾರಕ್ಕೆ ನಾಡಿನ ಭವಿಷ್ಯದ ಬಗ್ಗೆ ಚಿಂತೆ ಇಲ್ಲ. ಕೆಲವು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ರಾಜಕೀಯ ವಿರೋಧಿಗಳನ್ನು ದಮನ ಮಾಡಲು ಹೊರಟಿದ್ದಾರೆ. ಸಿಟಿ ರವಿ ಅವರನ್ನು ರಾತ್ರಿಯೆಲ್ಲಾ ಸುತ್ತಿಸಬೇಕಿತ್ತಾ? ಅವರು ಒಬ್ಬ ಜನಪ್ರತಿನಿಧಿ ಇದ್ದಾರೆ. ಬಂಧಿಸುವುದಿದ್ದರೆ ನೇರವಾಗಿ ಬೆಂಗಳೂರಿನ ಜನಪ್ರತಿನಿಧಿ ಕೋರ್ಟ್‌ಗೆ ಕರೆದುಕೊಂಡು ಬರಬಹುದಿತ್ತು.

ರಾತ್ರಿಯೆಲ್ಲಾ ಸುತ್ತಿಸಬೇಕಾದ ಅವಶ್ಯಕತೆ ಏನಿತ್ತು? ಇದಕ್ಕೆಲ್ಲ ಯಾರು ಡೈರೆಕ್ಷನ್ ಕೊಟ್ಟವರು? ಬಿಜೆಪಿ ಸ್ನೇಹಿತರು ಸರಿಯಾದ ರೀತಿ ಕಾನೂನು ವ್ಯಾಪ್ತಿಯಲ್ಲಿ ಹೋರಾಟ ಮಾಡಿದರೆ ಅಧಿಕಾರಿಗಳೆಲ್ಲಾ ಸಸ್ಪೆಂಡ್ ಆಗುತ್ತಾರೆ. ಮಂತ್ರಿಯೊಬ್ಬರ ಚಿತಾವಣೆಯಿಂದ ಯಾವ ಅಧಿಕಾರಿಗಳು ಸಿ.ಟಿ.ರವಿಗೆ ಮಾನಸಿಕವಾಗಿ ಹಿಂಸೆ ಕೊಟ್ಟಿದ್ದಾರೆ ಅವರು ಅದರ ಪ್ರತಿಫಲ ಎದುರಿಸಬೇಕಾಗುತ್ತದೆ ಎಂದು ಅವರು ಹೇಳಿದರು.

ಸೇಡಿನ ರಾಜಕೀಯ

ಸಚಿವ ಸತೀಶ್ ಜಾರಕಿಹೋಳಿ ಅವರು ಸಿಟಿ ರವಿ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಿ ಎಂದು ಹೇಳಿದ್ದಾರೆ. ಇನ್ನೊಬ್ಬರು ಇನ್ನೊಂದು ಕಥೆ ಹೇಳುತ್ತಾರೆ. ಈ ರಾಜ್ಯದಲ್ಲಿ ಗೃಹ ಸಚಿವರು ಎನ್ನುವವರು ಇದ್ದಾರಾ? ಕಳೆದ ಆರೇಳು ತಿಂಗಳಿನಿಂದ ಹಲವಾರು ಪ್ರಕರಣಗಳು ಈ ರಾಜ್ಯದಲ್ಲಿ ನಡೆಯುತ್ತಿವೆ. ಕರ್ನಾಟಕಕ್ಕೆ ಭವಿಷ್ಯದಲ್ಲಿ ಅತ್ಯಂತ ಕೆಟ್ಟ ದಿನಗಳು ಕಾದಿವೆ.

ರಾಜಕಾರಣದಲ್ಲಿ ವೈಷಮ್ಯ, ದ್ವೇಷ ಬೆಳೆಯಲು ಇವರು ಬೀಜ ಬಿತ್ತನೆ ಮಾಡಿದ್ದಾರೆ. ಮುಂದೆಯೂ ಸಹ ಇಂತಹುದೇ ಕೆಟ್ಟ ಪರಿಸ್ಥಿತಿ ಮುಂದುವರಿಯುತ್ತದೆ ಎನ್ನುವುದರಲ್ಲಿ ಯಾವುದೇ ಅನುಮಾನ ಬೇಡ ಎಂದು ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ರಾಜ್ಯದ ಪೊಲೀಸ್ ವ್ಯವಸ್ಥೆ ಇಡೀ ದೇಶಕ್ಕೆ ಮಾದರಿ ಆಗಿತ್ತು. ನಮ್ಮ ಪೂರ್ವಿಕರು ರಾಜ್ಯದಲ್ಲಿ ಉತ್ತಮ ವಾತಾವರಣ, ವ್ಯವಸ್ಥೆಯನ್ನು ರೂಪಿಸಿದ್ದರು. ಕರ್ನಾಟಕ ಪೊಲೀಸ್ ಎಂದರೆ ದೇಶದಲ್ಲಿಯೇ ಗೌರವ ಇತ್ತು. ದುರದೃಷ್ಟ ಎಂದರೆ, ಅದೆಲ್ಲವನ್ನೂ ಸರ್ವನಾಶ ಮಾಡಲು ಈ ಸರಕಾರ ಹೊರಟಿದೆ. ಪೊಲೀಸರ ಗೌರವವನ್ನು ಮಣ್ಣುಪಾಲು ಮಾಡುವ ನಿಟ್ಟಿನಲ್ಲಿ ಇವರು ಕೆಲಸ ಮಾಡುತ್ತಿದ್ದಾರೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಪ್ರಕರಣವನ್ನು ಏನು ಮಾಡಿದಿರಿ? ಕಾಂಗ್ರೆಸ್ ನಾಯಕ ಗುರಪ್ಪ ನಾಯ್ಡ ಮೇಲೆ ಶಿಕ್ಷಕರೊಬ್ಬರು ದೂರು ಕೊಟ್ಟರಲ್ಲ, ಆ ದೂರು ಏನಾಯಿತು? ರಾಜ್ಯದಲ್ಲಿ ಏನೇನು ನಡೆಯುತ್ತಿದೆ ಎಂಬುದನ್ನು ಗಮನಿಸುತ್ತಿದ್ದೇನೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ರಾಜಕೀಯ ವಿರೋಧಿಗಳಿಗೆ ಹೇಗೆಲ್ಲಾ ಕಿರುಕುಳ ನೀಡಲಾಗುತ್ತಿದೆ ಎಂಬುದನ್ನು ನಾನು ಬಲ್ಲೆ. ಕರ್ನಾಟಕದಲ್ಲಿ ಮುಂದಿನ ದಿನಗಳಲ್ಲಿ ರಾಜಕಾರಣ ಯಾವ ರೀತಿ ಹೋಗಬಹುದು ಎನ್ನುವುದಕ್ಕೆ ಕಾಂಗ್ರೆಸ್ ನವರು ವೇದಿಕೆ ಸಿದ್ಧ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವರು ಬೇಸರ ವ್ಯಕ್ತಪಡಿಸಿದರು.

ನಾನು ಸಂಪೂರ್ಣವಾಗಿ ಪೊಲೀಸ್ ಇಲಾಖೆಗೆ ದೋಷ ಕೊಡಲು ಹೋಗುವುದಿಲ್ಲ. ಇವತ್ತು ಸರಕಾರದಲ್ಲಿರುವ ಮಂತ್ರಿಗಳು ಕೆಲವು ಆಯ್ದ ಪೊಲೀಸ್ ಅಧಿಕಾರಿಗಳಿಗೆ ಡೈರೆಕ್ಷನ್ ಕೊಡುವ ಮೂಲಕ ಇಲಾಖೆಯಲ್ಲಿ ಕಾನೂನು ಬಾಹಿರ ತೀರ್ಮಾನಗಳಾಗುತ್ತಿವೆ.

ತಮಗೆ ಬೇಕಾದಂತೆ ಕೇಸ್‌ಗಳನ್ನು ಬುಕ್ ಮಾಡುತ್ತಿದ್ದಾರೆ. ಯಾವ ರೀತಿ ಅವರ ವಿರೋಧಿಗಳನ್ನು ಸದೆಬಡೆಯಬೇಕೆಂದು ಅಧಿಕಾರ ದುರುಪಯೋಗ, ಕಾನೂನಿನ ಉಲ್ಲಂಘನೆ ಎಂಬುದು ಸರಕಾರದಿಂದಲೇ ಆಗುತ್ತಿದೆ. ನಾನು ಈಗಷ್ಟೇ ದೇವಸ್ಥಾನದಲ್ಲಿ ಪೂಜೆ ಮಾಡಿ ಬಂದು ನಿಂತು ಹೇಳುತ್ತಿದ್ದೇನೆ, ಕಾಲವೇ ಇದಕ್ಕೆಲ್ಲ ಉತ್ತರ ಕೊಡುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.

ಇದು ಅನಾಗರಿಕ ಸರಕಾರ!! ಹೆಚ್ಡಿಕೆ ಕಿಡಿ

ಕಲ್ಬುರ್ಗಿಯಲ್ಲಿ ಸಿಎಂ ಅವರು ಜಯದೇಶ ಆಸ್ಪತ್ರೆ ಉದ್ಘಾಟನೆ ಮಾಡಿದ್ದಾರೆ, ಆ ಆಸ್ಪತ್ರೆಗೆ ಏನಿದೆ ಅವರ ಕೊಡುಗೆ? ನಾನು ಸಿಎಂ ಆಗಿದ್ದಾಗ ಅದಕ್ಕೆ ಚಾಲನೆ ಕೊಟ್ಟಿದ್ದೆ. ನಂತರ ಬಂದ ಬಿಜೆಪಿ ಸರಕಾರ ₹128 ಕೋಟಿ ಹಣ ಬಿಡುಗಡೆ ಮಾಡಿತ್ತು.

ಜಯದೇವ ಆಸ್ಪತ್ರೆಯಿಂದ ಡಾ.ಸಿ.ಎನ್.ಮಂಜುನಾಥ್ ಅವರು ₹40 ಕೋಟಿ ಸಂಗ್ರಹಿಸಿ ಹೂಡಿಕೆ ಮಾಡಿದ್ದರು. ಹಿಂದೆ ಕೆಲಸ ಮಾಡಿರುವವರನ್ನು ನೆನಪಿಸಿಕೊಳ್ಳುವಂತಹ ಕೃತಜ್ಞತೆ ಇಲ್ಲದಂತಹ ಅನಾಗರೀಕ ಸರಕಾರ ಇದು. ಇವರ ಕೊಡುಗೆ ಏನೂ ಇಲ್ಲ. ಈಗ ನೋಡಿದರೆ ನಿಮ್ಹಾನ್ಸ್ ಮಾಡ್ತಾರಂತೆ ಎಂದು ಕುಮಾರಸ್ವಾಮಿ ಅವರು ಕಿಡಿಕಾರಿದರು.

ಸದ್ಯಕ್ಕೆ ಇರುವ ಆಸ್ಪತ್ರೆಗಳನ್ನೇ ನೆಟ್ಟಗೆ ಇಟ್ಟುಕೊಂಡಿಲ್ಲ. ಉತ್ತರ ಕರ್ನಾಟಕದಲ್ಲಿ ಪ್ರತಿನಿತ್ಯ ಬಾಣಂತಿಯರು, ಮಕ್ಕಳ ಸರಣಿ ಸಾವು ಮುಂದುವರಿದೆ. ಬಹಳ ನೋವಾಗುತ್ತದೆ. ಇದನ್ನೆಲ್ಲಾ ತಡೆಯಲು ಏನು ಕ್ರಮ ತೆಗೆದುಕೊಂಡಿದ್ದೀರಿ. ಆಸ್ಪತ್ರೆಗಳಲ್ಲಿ ವೈದ್ಯರು, ಸಿಬ್ಬಂದಿ ಕೊರತೆ ಇದೆ. ನೀವು ರಾಜ್ಯ ಕಟ್ಟುತ್ತೀರಾ? ಎಂದು ಅವರು ಅವರು ಹೇಳಿದರು.

ರಾಜಕೀಯ

Doddaballapura: ಗುಂಡಮಗೆರೆ VSSN ಕಾಂಗ್ರೆಸ್ ತೆಕ್ಕೆಗೆ..!

Doddaballapura: ಗುಂಡಮಗೆರೆ VSSN ಕಾಂಗ್ರೆಸ್ ತೆಕ್ಕೆಗೆ..!

12 ನಿರ್ದೇಶಕ ಸ್ಥಾನಗಳಿಗೆ ಕಾಂಗ್ರೆಸ್ ಹಾಗೂ ಕಮಲ-ದಳ ಮೈತ್ರಿ ಬೆಂಬಲಿತ 11 ಮಂದಿ ನಾಮಪತ್ರ ಸಲ್ಲಿಸಿದ್ದರು. VSSN

[ccc_my_favorite_select_button post_id="99342"]
HD Kumaraswamy| ಜೆಡಿಎಸ್ – ಬಿಜೆಪಿ ಮೈತ್ರಿ ಸರಕಾರ ಬಂದೇ ಬರುತ್ತದೆ; ನಮ್ಮ Unfinished ಅಜೆಂಡಾ ಪೂರ್ಣಗೊಳಿಸುತ್ತೇವೆ: ಹೆಚ್‌.ಡಿ.ಕುಮಾರಸ್ವಾಮಿ

HD Kumaraswamy| ಜೆಡಿಎಸ್ – ಬಿಜೆಪಿ ಮೈತ್ರಿ ಸರಕಾರ ಬಂದೇ ಬರುತ್ತದೆ; ನಮ್ಮ

ಅನೇಕ ಜನಪರ ಕಾರ್ಯಕ್ರಮಗಳ ಜಾರಿ ಬಾಕಿ ಉಳಿದಿದೆ. ಅವೆಲ್ಲವನ್ನೂ ಅನುಷ್ಠಾನಕ್ಕೆ ತರಬೇಕಾದರೆ ಮತ್ತೊಮ್ಮೆ ಮೈತ್ರಿ ಸರಕಾರ ಬರಬೇಕಿದೆ. HD Kumaraswamy

[ccc_my_favorite_select_button post_id="99348"]
Tashi Namgyal| ಕಾರ್ಗಿಲ್ ಸಮರ: ಪಾಕ್ ಸೈನಿಕರ ಸುಳಿವು ನೀಡಿದ್ದ ಕುರಿಗಾಹಿ ನಿಧನ..!

Tashi Namgyal| ಕಾರ್ಗಿಲ್ ಸಮರ: ಪಾಕ್ ಸೈನಿಕರ ಸುಳಿವು ನೀಡಿದ್ದ ಕುರಿಗಾಹಿ ನಿಧನ..!

1999ರಲ್ಲಿ ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆ ಬಗ್ಗೆ ಸೂಕ್ತ ಸಮಯದಲ್ಲಿ ಭಾರತೀಯ ಸೇನೆಯ ಗ್ರೂಪ್ ಗಳನ್ನ ಅಲರ್ಟ್ ಮಾಡಿದ್ದರು tashi namgyal

[ccc_my_favorite_select_button post_id="99329"]
ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

ಗುಂಡಿನ ದಾಳಿ: ಭಾರತೀಯ ಮೂಲದ ವಿದ್ಯಾರ್ಥಿ ಶಿಕಾಗೊದಲ್ಲಿ ಹತ್ಯೆ.‌!| murder

2023-24ರಲ್ಲಿ ಚೀನಾಗಿಂತಲೂ ಭಾರತೀಯ ವಿದ್ಯಾರ್ಥಿಗಳೇ ಅಮೆರಿಕಕ್ಕೆ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ (3.30 ಲಕ್ಷ) ಸಂಖ್ಯೆಯಲ್ಲಿ ತೆರಳಿದ್ದಾರೆ. Murder

[ccc_my_favorite_select_button post_id="97531"]

ಬಾಂಗ್ಲಾದಲ್ಲಿ ಹಿಂದೂ ಸಾಧು ಬಂಧನ; ನಾಳೆ ರಾಜ್ಯದಾದ್ಯಂತ

[ccc_my_favorite_select_button post_id="97359"]

miss universe; ವಿಶ್ವ ಸುಂದರಿ ಕಿರೀಟ ಮುಡಿಗೇರಿಸಿಕೊಂಡ

[ccc_my_favorite_select_button post_id="96599"]

mike tyson vs jake paul date,

[ccc_my_favorite_select_button post_id="96464"]

elon musk; ಟ್ರಂಪ್ ಪರ ವಕಾಲತ್ತು: ಎಕ್ಸ್

[ccc_my_favorite_select_button post_id="96366"]

ಕ್ರೀಡೆ

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World Chess Championship

Video: ವಿಶ್ವ ಚದುರಂಗ ವೀರನಾದ ಭಾರತದ ಡಿ.ಗುಕೇಶ್.. ಚಾಂಪಿಯನ್‌ ಆಗ್ತಿದ್ದಂತೆ ಕಣ್ಣೀರು| World

18 ವರ್ಷ ವಯಸ್ಸಿನ ಗ್ರಾ ಟ್ರ್ಯಂಡ್ ಮಾಸ್ಟರ್ ಗುಕೇಶ್ World Chess Championship

[ccc_my_favorite_select_button post_id="98503"]
ಪುಷ್ಪಾ 2 ಸಿನಿಮಾ ನೋಡುತ್ತಿದ್ದ ಡ್ರಗ್ ಪೆಡ್ಲರ್ ಸೆರೆ..!: Pushpa 2

ಪುಷ್ಪಾ 2 ಸಿನಿಮಾ ನೋಡುತ್ತಿದ್ದ ಡ್ರಗ್ ಪೆಡ್ಲರ್ ಸೆರೆ..!: Pushpa 2

ಕಿಕ್ಕಿರಿದಿದ್ದ ಚಿತ್ರಮಂದಿರದಲ್ಲಿ ಪುಷ್ಪಾ ಸಿನಿಮಾ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಪೊಲೀಸರು ದಿಢೀರ್ ನುಗ್ಗಿಬಂದಿದ್ದು ಅಚ್ಚರಿ ಉಂಟು ಮಾಡಿದೆ. Pushpa 2

[ccc_my_favorite_select_button post_id="99309"]
ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ನೆಲಮಂಗಲ Accident News update: ಮಹಾರಾಷ್ಟ್ರದ ಸ್ವಗ್ರಾಮದಲ್ಲಿ ಸಾಮೂಹಿಕ ಅಂತ್ಯಕ್ರಿಯೆ..!

ಮೃತ ದೇಹಗಳನ್ನು ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಜತ್ ತಾಲೂಕಿನ ಮೊರಬಗಿ ಗ್ರಾಮಕ್ಕೆ ಮೂರು ಅಂಬುಲೆನ್ಸ್‌ ಮೂಲಕ ತಲುಪಿಸಲಾಯಿತು‌. Accident

[ccc_my_favorite_select_button post_id="99247"]

ಆರೋಗ್ಯ

ಸಿನಿಮಾ

HD Kumaraswamy ಸಮಾಜದ ಶಾಂತಿ ಕಾಪಾಡುವ ಸಿನಿಮಾಗಳು ಬರಲಿ: ಹೆಚ್.ಡಿ.ಕುಮಾರಸ್ವಾಮಿ

HD Kumaraswamy ಸಮಾಜದ ಶಾಂತಿ ಕಾಪಾಡುವ ಸಿನಿಮಾಗಳು ಬರಲಿ: ಹೆಚ್.ಡಿ.ಕುಮಾರಸ್ವಾಮಿ

ಚಿತ್ರರಂಗದಲ್ಲಿ ಉತ್ತಮ, ಸದಭಿರುಚಿಯ ಚಿತ್ರಗಳು ಬರಬೇಕು, ಉತ್ತಮ ಕಥೆಗಳ, ಸಮಾಜಕ್ಕೆ ಒಳ್ಳೆಯದು ಮಾಡುವ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. HD Kumaraswamy

[ccc_my_favorite_select_button post_id="99321"]