ದೊಡ್ಡಬಳ್ಳಾಪುರ: ಬುಧವಾರ ಕ್ರಿಸ್ಮಸ್ (Christmas) ಆಚರಣೆ ಅಂಗವಾಗಿ ಚರ್ಚ್‌ಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಚರ್ಚುಗಳ ಒಳಗೆ ಹಾಗೂ ಆವರಣದಲ್ಲಿ ಏಸುಕ್ರಿಸ್ತರ ಬಾಲ್ಯದ ದಿನಗಳನ್ನು ನೆನಪಿಸುವ ವೃತ್ತಾಂಗಳ ಮಾದರಿಗಳನ್ನು ನಿರ್ಮಿಸಿ ಬಣ್ಣ ಬಣ್ಣದ ವಿದ್ಯುತ್ ದೀಪಗಳು, ಅಲಂಕಾರಿಕ ಸಸಿಗಳಿಂದ ಸಿಂಗರಿಸಲಾಗಿದೆ.
ಎಲ್ಲಾ ಚರ್ಚ್‌ಗಳಲ್ಲೂ ಕ್ರಿಸ್ಮಸ್ ಟ್ರೀಗಳನ್ನು ವಿಶೇಷವಾಗಿ ಅಲಂಕರಿಸಿರುವುದು ನೋಡುಗರನ್ನು ಆಕರ್ಷಿಸುತ್ತಿವೆ.
ನಗರದ ಹೊರವಲಯದ ಪಾಲನಜೋಗಹಳ್ಳಿಯಲ್ಲಿನ ಸೆಟ್ ಪಾಲ್ಸ್ ಚರ್ಚ್ನಲ್ಲಿ ಭಾನುವಾರದಿಂದಲು ಪ್ರತಿ ದಿನ ಸಂಜೆ ವಿಶೇಷ ಪ್ರಾರ್ಥನೆ, ಏಸು ಪ್ರಭುವಿನ ನಾಮಸ್ಮರಣೆಯ ಗೀತೆಗಳ ಗಾನ ನಡೆಯುತ್ತಿದೆ.
ಸಂಜೆ ವೇಳೆಯಲ್ಲಿ ನಡೆಯುತ್ತಿರುವ ವಿಶೇಷ ಪ್ರಾರ್ಥನೆಗಳಲ್ಲಿ ಚರ್ಚ್‌ನ ಫಾದರ್ ಮನೋಜ್ ಕುಮಾರ್, ಸಂಜೇಯ್ ಭಾಗವಹಿಸಿದ್ದರು.